ನವದೆಹಲಿ: ಹಾಗಲಕಾಯಿ ಹೆಸರು ಕೇಳಿದ ತಕ್ಷಣ ಹಲವರ ಬಾಯಿ ರುಚಿ ಕೆಡುತ್ತದೆ. ಆದರೆ ಈ ಹಾಗಲಕಾಯಿ ಆಯುರ್ವೇದ ಗುಣಗಳ ಗಣಿ ಎಂಬುದು ಕೆಲವೇ ಜನರಿಗೆ ಗೊತ್ತಿದೆ. ರುಚಿಯಲ್ಲಿ ಕಹಿಯಾಗಿದ್ದರೂ ಹಾಗಲಕಾಯಿ ನಿಮ್ಮ ಆರೋಗ್ಯಕ್ಕೆ ದುಪ್ಪಟ್ಟು ಲಾಭ ತಂದುಕೊಡುತ್ತದೆ. ಹಾಗಲಕಾಯಿಯಲ್ಲಿ ಸತು, ವಿಟಮಿನ್ B, ಅಪರ್ಯಾಪ್ತ ಕೊಬ್ಬಿನಾಮ್ಲಗಳಂತಹ ಅನೇಕ ಪೋಷಕಾಂಶಗಳಿವೆ. ಇದು ಸಾಕಷ್ಟು ಆಂಟಿವೈರಲ್ ಮತ್ತು ಆಂಟಿಬಯೋಟಿಕ್ ಗುಣಗಳನ್ನು ಹೊಂದಿದೆ. ಈ ಹಾಗಲಕಾಯಿ ರಕ್ತವನ್ನು ಸ್ವಚ್ಛಗೊಳಿಸುವುದರ ಜೊತೆಗೆ ದೇಹವನ್ನು ಸದೃಢವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಲಕಾಯಿಯನ್ನು ಸೇವಿಸುವುದರಿಂದ ಆಗುವ ಇತರ ಪ್ರಯೋಜನಗಳೇನು ಎಂಬುದರ ಬಗ್ಗೆ ತಿಳಿಯಿರಿ.


COMMERCIAL BREAK
SCROLL TO CONTINUE READING

ಬಾಯಿ ಹುಣ್ಣುಗಳಿಗೆ ರಾಮಬಾಣ


ನಿಮ್ಮ ಬಾಯಲ್ಲಿ ಗುಳ್ಳೆಗಳು ಬಂದಿದ್ದರೆ ಹಾಗಲಕಾಯಿಯೇ ಅದಕ್ಕೆ ರಾಮಬಾಣ. ಹಾಗಲಕಾಯಿ ಎಲೆಗಳ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ಪೇಸ್ಟ್ ಮಾಡಿ. ನಂತರ ಆ ಪೇಸ್ಟ್ ಅನ್ನು ಬಾಯಿ ಹುಣ್ಣುಗಳ ಮೇಲೆ ಹಚ್ಚಿ. ಮುಲ್ತಾನಿ ಮಿಟ್ಟಿ ಸಿಗದಿದ್ದರೆ ಹಾಗಲಕಾಯಿಯ ರಸದಲ್ಲಿ ಹತ್ತಿಯನ್ನು ಅದ್ದಿ ಗುಳ್ಳೆಗಳಿರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ಬಾಯಿಯ ಹುಣ್ಣುಗಳು ಕ್ರಮೇಣ ವಾಸಿಯಾಗುವುದನ್ನು ನೀವೇ ನೋಡುತ್ತೀರಿ.  


ಇದನ್ನೂ ಓದಿ: ನುಗ್ಗೆಕಾಯಿ ಬಲತಿದೆ ಎಂದು ಬಿಸಾಡಬೇಡಿ.. ಅದರ ಬೀಜಗಳಲ್ಲಿದೆ ಅದ್ಭುತ ಪ್ರಯೋಜನ


ತೂಕ ನಿಯಂತ್ರಣಕ್ಕೆ ಸಹಕಾರಿ


ಇಂದು ಅನೇಕರು ತೂಕ ಹೆಚ್ಚಳದ ಸಮಸ್ಯೆ ಅನುಭವಿಸುತ್ತಿದ್ದಾರೆ. ತೂಕ ನಿಯಂತ್ರಣಕ್ಕೆ ಅನೇಕ ರೀತಿಯ ಸರ್ಕಸ್ ಮಾಡಿದ್ರೂ ಯಾವುದೆ ಪ್ರಯೋಜನವಿಲ್ಲದೆ ಹತಾಶರಾಗುತ್ತಾರೆ. ಇಂತವರು ಹಾಗಲಕಾಯಿಯ ಆಯುರ್ವೇದ ಪರಿಹಾರ ತೆಗೆದುಕೊಳ್ಳಬಹುದು. ವೈದ್ಯರ ಪ್ರಕಾರ ಸ್ಥೂಲಕಾಯ ವಿರೋಧಿ ಅಂದರೆ ಕೊಬ್ಬನ್ನು ಕಡಿಮೆ ಮಾಡುವ ಅಂಶ ಹಾಗಲಕಾಯಿಯಲ್ಲಿ ಕಂಡುಬರುತ್ತದೆ. ಇದರ ಸೇವನೆಯಿಂದ ವ್ಯಕ್ತಿಯ ಕೊಬ್ಬು ನಿಯಂತ್ರಣಕ್ಕೆ ಬರುತ್ತದೆ.  


ಯಕೃತ್ತನ್ನು ಕೊಬ್ಬಿನಿಂದ ರಕ್ಷಿಸುತ್ತದೆ


ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಾಗಲಕಾಯಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹಾಗಲಕಾಯಿಯಲ್ಲಿ ಹೆಪಟೊಪ್ರೊಟೆಕ್ಟಿವ್ ಎಂಬ ಅಂಶವಿದ್ದು, ಇದು ಯಕೃತ್ತಿನ ರಕ್ಷಣೆಗೆ ಕೆಲಸ ಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಯಾವಾಗ ಯಕೃತ್ತು ಕೊಬ್ಬಾಗಲು ಪ್ರಾರಂಭಿಸುತ್ತದೆಯೋ, ಆಗ ಹಾಗಲಕಾಯಿಯಲ್ಲಿರುವ ಈ ಅಂಶವು ಆ ಕೊಬ್ಬು ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಕೊಬ್ಬಿನ ಯಕೃತ್ತು ಮತ್ತು ಯಕೃತ್ತಿನ ಕ್ಯಾನ್ಸರ್ನಂತಹ ಕಾಯಿಲೆಗಳು ಗುಣವಾಗುತ್ತವೆ ಮತ್ತು ವ್ಯಕ್ತಿಯು ಫಿಟ್ ಆಗಿರುತ್ತಾನೆ.


ಇದನ್ನೂ ಓದಿ: Insulin Plant: ಈ ಒಂದು ಎಲೆಯ ಸೇವನೆಯಿಂದ ಸಕ್ಕರೆ ಕಾಯಿಲೆಗೆ ಅಂತ್ಯಹಾಡಿ


ಮಧುಮೇಹಕ್ಕೆ ಮಕರಂದ ಹಾಗಲಕಾಯಿ


ಹಾಗಲಕಾಯಿ ಮಧುಮೇಹದಿಂದ ಬಳಲುತ್ತಿರುವವರಿಗೆ ಅಮೃತವಿದ್ದಂತೆ. ವಾಸ್ತವವಾಗಿ ಹಾಗಲಕಾಯಿ ಸೇವನೆಯು ದೇಹದ ನಿರ್ದಿಷ್ಟ ಭಾಗ ಅಥವಾ ಅಂಗಾಂಶಕ್ಕೆ ಮಾತ್ರವಲ್ಲದೆ, ದೇಹದಾದ್ಯಂತ ಗ್ಲೂಕೋಸ್ ಚಯಾಪಚಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಲಕಾಯಿಯಲ್ಲಿ ಇನ್ಸುಲಿನ್ ನಂತಹ ಅನೇಕ ರಾಸಾಯನಿಕಗಳು ಕಂಡುಬರುತ್ತವೆ. ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಕ್ಕರೆಯಿಂದ ಬಳಲುತ್ತಿರುವ ರೋಗಿಗಳು ಹಾಗಲಕಾಯಿಯನ್ನು ತರಕಾರಿಯಲ್ಲಿ ತಿನ್ನುವುದರ ಜೊತೆಗೆ ಅದರ ರಸವನ್ನು ಕುಡಿಯಲು ಇದೇ ಕಾರಣ.


ಆಗಾಗ ಹೊಟ್ಟೆ ನೋವು ಅಥವಾ ಆಮ್ಲೀಯತೆ ಮತ್ತು ಉರಿತೇಗಿನ ಸಮಸ್ಯೆ ಹೊಂದಿರುವ ಜನರಿಗೆ ಹಾಗಲಕಾಯಿ ತುಂಬಾ ಪ್ರಯೋಜನಕಾರಿ. ಇದು ಪೊಟ್ಯಾಸಿಯಮ್, ರಂಜಕ, ಕ್ಯಾಲ್ಸಿಯಂ, ಪ್ರೊಟೀನ್, ಫೈಬರ್, ವಿಟಮಿನ್ ಮತ್ತು ಮೆಗ್ನೀಸಿಯಮ್ ಅನ್ನು ಒಳಗೊಂಡಿರುತ್ತದೆ. ಇದು ದೇಹವನ್ನು ತಂಪಾಗಿ ಮತ್ತು ಫಿಟ್ ಆಗಿ ಇರಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಹಾಗಲಕಾಯಿಯ ತರಕಾರಿ ತಿನ್ನಲು ವೈದ್ಯರು ಸಲಹೆ ನೀಡುವುದು ಇದೇ ಕಾರಣಕ್ಕೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.