Diabetes Natural Treatment: ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಕಾಯಿಲೆ ಒಂದು ಸಾಮಾನ್ಯ ಕಾಯಿಲೆಯಾಗಿ ಮಾರ್ಪಟ್ಟಿದೆ. ಹಾಳಾದ ಜೀವನಶೈಲಿಯ ಕಾರಣ ಅತ್ಯಂತ ಕಡಿಮೆ ವಯಸ್ಸಿಯಲ್ಲಿಯೇ ಯುವಕರನ್ನು ಈ ಕಾಯಿಲೆ ತನ್ನ ತೆಕ್ಕೆಗೆ ಸೆಳೆಯುತ್ತಿದೆ. ಡಯಾಬಿಟಿಸ್ ಕಾರಣ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕುಸಿಯುತ್ತದೆ ಮತ್ತು ವ್ಯಕ್ತಿ ಅಶಕ್ತನಾಗುತ್ತಾನೆ. ಚಿಕಿತ್ಸೆ ಪಡೆದರೂ ಕೂಡ ಈ ಕಾಯಿಲೆ ಸುಲಭವಾಗಿ ವಾಸಿಯಾಗುವುದಿಲ್ಲ. ಆದರೆ, ಒಂದು ಸಸ್ಯದ ಸಹಾಯವನ್ನು ಪಡೆದುಕೊಂಡು ನೀವು ಈ ಕಾಯಿಲೆಯನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು.
ಸಕ್ಕರೆ ಕಾಯಿಲೆಯ ಕಾರಣಗಳು
ಡಯಾಬಿಟಿಸ್ ಒಂದು ಅಪಾಯಕಾರಿ ಕಾಯಿಲೆಯಾಗಿದೆ. ಕೇವಲ ಸಿಹಿ ತಿನ್ನುವುದೇ ಡಯಾಬಿಟಿಸ್ ಗೆ ಮುಖ್ಯ ಕಾರಣ ಎಂದು ನಾವು ಭಾವಿಸುತ್ತೇವೆ. ಆದರೆ, ಇದು ಸಂಪೂರ್ಣ ಸತ್ಯವಲ್ಲ. ದೇಹದಲ್ಲಿನ ಇನ್ಸುಲಿನ್ ಹಾರ್ಮೋನು ಕೊರತೆ ಈ ಕಾಯಿಲೆಗೆ ಮುಖ್ಯ ಕಾರಣವಾಗಿದೆ. ಆದರೆ, ಡಯಾಬಿಟಿಸ್ ಗೆ ಚಿಕಿತ್ಸೆ ಪಡೆಯಬಹುದು.
ಇನ್ಸುಲಿನ್
ಇನ್ಸುಲಿನ್ ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಒಂದು ಹಾರ್ಮೋನ್ ಆಗಿದೆ, ಇದು ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ಇನ್ಸುಲಿನ್ ಕೊರತೆಯುಂಟಾದಾಗ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ, ಇದರಿಂದಾಗಿ ದೇಹದಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ, ಈ ಸ್ಥಿತಿಯನ್ನು ನಾವು ಡಯಾಬಿಟಿಸ್ ಅಥವಾ ಮಧುಮೇಹ ಎಂದು ಕರೆಯುತ್ತೇವೆ.
ಮಧುಮೇಹದ ಚಿಕಿತ್ಸೆಯ ಸಮಯದಲ್ಲಿ, ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಔಷಧಿಗಳನ್ನು ನೀಡಲಾಗುತ್ತದೆ, ಇದರಿಂದಾಗಿ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಉಳಿಯುತ್ತದೆ. ಸಾಮಾನ್ಯವಾಗಿ ಮದುಮೇಹ ಕಾಯಿಲೆಯ ಚಿಕಿತ್ಸೆಗೆ, ಕೃತಕ ಇನ್ಸುಲಿನ್ ನೀಡಲಾಗುತ್ತದೆ ಮತ್ತು ಅದು ತುಂಬಾ ದುಬಾರಿಯಾಗಿದೆ. ನಾವು ನೈಸರ್ಗಿಕವಾಗಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಬಹುದು.
ಇನ್ಸುಲಿನ್ ಸಸ್ಯ
ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಹಲವು ಗಿಡಮೂಲಿಕೆಗಳನ್ನು ನಮ್ಮ ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಕಾಕ್ಟಸ್ ಇಗ್ನಸ್ ಕೂಡ ಒಂದು. ಕ್ಯಾಕ್ಟಸ್ ಇಗ್ನಸ್ ದೇಹದಲ್ಲಿ ಸಕ್ಕರೆಯನ್ನು ನಿಯಂತ್ರಿಸುವ ಮತ್ತು ಮಧುಮೇಹದಲ್ಲಿ ಪ್ರಯೋಜನಕಾರಿ ಸಸ್ಯವಾಗಿದೆ. ಕ್ಯಾಕ್ಟಸ್ ಇಗ್ನಸ್ ಇನ್ಸುಲಿನ್ ನಂತೆ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ಇದನ್ನು ಇನ್ಸುಲಿನ್ ಸಸ್ಯ ಎಂದೂ ಕೂಡ ಕರೆಯುತ್ತಾರೆ. ಇಲ್ಲಿ ಆಶ್ಚರ್ಯಕರ ಸಂಗತಿ ಎಂದರೆ ಇನ್ಸುಲಿನ್ ಸಸ್ಯದಲ್ಲಿ ಇನ್ಸುಲಿನ್ ಇರುವುದಿಲ್ಲ.
ಹೇಗೆ ಸೇವಿಸಬೇಕು?
ಪ್ರತಿದಿನ ಒಂದು ಅಥವಾ ಎರಡು ಕ್ಯಾಕ್ಟಸ್ ಇಗ್ನಸ್ ಎಲೆಗಳನ್ನು ಅಗಿಯುವುದರಿಂದ ದೇಹದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುತ್ತದೆ. ಏಕೆಂದರೆ ಇದರಲ್ಲಿ ಕೆಲವು ಕಿಣ್ವಗಳಿದ್ದು, ಅವು ಸಕ್ಕರೆಯನ್ನು ಗ್ಲೈಕೊಜೆನ್ ಆಗಿ ಪರಿವರ್ತಿಸುತ್ತವೆ, ಇದರಿಂದಾಗಿ ಸಕ್ಕರೆ ಜೀವಕೋಶಗಳನ್ನು ತಲುಪುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿರುತ್ತದೆ.
ಸಾಧ್ಯವಾದರೆ, ಪ್ರತಿದಿನ ಅದರ ತಾಜಾ ಎಲೆಗಳನ್ನು ಸೇವಿಸಿ. ನೀವು ಅದರ ಎಲೆಗಳನ್ನು ಒಣಗಿಸಿ ಪುಡಿಯನ್ನು ಕೂಡ ತಯಾರಿಸಬಹುದು, ಪ್ರತಿದಿನ ಒಂದು ಚಮಚ ಪುಡಿಯನ್ನು ತಿನ್ನುವುದು ಸಹ ಮಧುಮೇಹದಲ್ಲಿ ಪ್ರಯೋಜನಕಾರಿಯಾಗಿದೆ.
ಕಾಸ್ಟಸ್ ಇಗ್ನಸ್ನ ಪ್ರಯೋಜನಗಳು
ಕಾಸ್ಟಸ್ ಇಗ್ನಸ್ ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಇದು ಸಕ್ಕರೆಯನ್ನು ನಿಯಂತ್ರಿಸುವುದರ ಜೊತೆಗೆ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಆಸ್ಕೋರ್ಬಿಕ್ ಆಮ್ಲ, ಕಬ್ಬಿಣ, ಟೆರ್ಪೆನಾಯ್ಡ್ಗಳು, ಫ್ಲೇವನಾಯ್ಡ್ಗಳು, ಬಿ-ಕ್ಯಾರೋಟಿನ್ ಮತ್ತು ಕಾರ್ಸೋಲಿಕ್ ಆಮ್ಲದಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ಮಧುಮೇಹದ ಹೊರತಾಗಿ, ಇದು ಶ್ವಾಸಕೋಶ, ಜೀರ್ಣಕ್ರಿಯೆ ಮತ್ತು ಕಣ್ಣುಗಳಿಗೂ ಪ್ರಯೋಜನವನ್ನು ನೀಡುತ್ತದೆ.
ಇದನ್ನೂ ಓದಿ-ನುಗ್ಗೆಕಾಯಿ ಬಲತಿದೆ ಎಂದು ಬಿಸಾಡಬೇಡಿ.. ಅದರ ಬೀಜಗಳಲ್ಲಿದೆ ಅದ್ಭುತ ಪ್ರಯೋಜನ
ಮನೆಯಲ್ಲಿ ನೆಡಬಹುದು
ಕ್ಯಾಕ್ಟಸ್ ಇಗ್ನಸ್ ಒಂದು ಪೊದೆ ಸಸ್ಯವಾಗಿದೆ, ಇದನ್ನು ನರ್ಸರಿಯಿಂದ ತಂದು ಮನೆಯಲ್ಲಿ ನೆಡಬಹುದು ಮತ್ತು ಅದರ ಎಲೆಗಳನ್ನು ಪ್ರತಿದಿನ ತಿನ್ನಬಹುದು.
ಇದನ್ನೂ ಓದಿ-Green Tea: ಅತಿಯಾದ ಗ್ರೀನ್ ಟೀ ಸೇವನೆಯಿಂದ ಶರೀರದ ಈ ಅಂಗಕ್ಕೆ ಭಾರಿ ಡ್ಯಾಮೇಜ್ ಸಾಧ್ಯತೆ... ಎಚ್ಚರ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.