Healthy Eating Tips: ಅಡುಗೆ ಮನೆಯಲ್ಲಿ ವಗ್ಗರಣೆ ಹಾಕಲು ಸಾಮಾನ್ಯವಾಗಿ ಇಂಗನ್ನು ಬಳಸಲಾಗುತ್ತದೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ. ಅಂದರೆ, ಇದನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದಲ್ಲದೆ, ಇಂಗು ಹಲವು ಆರೋಗ್ಯ ಸಮಸ್ಯೆಗಳಾಗಿರುವ  ಹೊಟ್ಟೆನೋವು ಅಥವಾ ಅಪಚನ ಇತ್ಯಾದಿಗಳಿಂದ ನೆಮ್ಮದಿ ಪಡೆಯಲು ಕೂಡ ಬಳಸಲಾಗುತ್ತದೆ. ಇನ್ನೊಂದೆಡೆ ನೈಸರ್ಗಿಕವಾಗಿ ದೊರೆಯುವ ಜೇನುತುಪ್ಪ ಐರನ್, ಕಾಲ್ಷಿಯಂ, ಫಾಸ್ಫೇಟ್, ಸೋಡಿಯಂ, ಕ್ಲೋರಿನ್, ಪೋಟ್ಯಾಸಿಯಂ ಹಾಗೂ ಮೇಗ್ನೆಸಿಯಂಗಳ ಆಗರವಾಗಿದೆ. ಇದರಲ್ಲಿ ಹಲವು ರೀತಿಯ ವಿಟಮಿನ್, ಮಿನರಲ್ಸ  ಹಾಗೂ ಎಂಜೈಮ್ ಗಳು ಕಂಡುಬರುತ್ತವೆ ಮತ್ತು ಅವು ಹಲವು ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ಹೀಗಿರುವಾಗ ಇಂಗು ಮತ್ತು ಜೇನುತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ಲಾಭಗಳು ಲಭಿಸುತ್ತವೆ. ಈ ಎರಡೂ ಒಟ್ಟಿಗೆ ಸೇರಿ ಶರೀರಕ್ಕೆ ತುಂಬಾ ಲಾಭಕಾರಿ ಸಾಬೀತಾಗುತ್ತವೆ. ಹಾಗಾದರೆ ಬನ್ನಿ ಇಂಗು ಹಾಗೂ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದಾಗುವ ಆರೋಗ್ಯಕರ ಲಾಭಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ತೂಕ ಇಳಿಕೆಗೆ ಲಾಭಕಾರಿ - ಇಂಗು ಮತ್ತು ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ತೂಕ ಇಳಿಕೆಗೆ ತುಂಬಾ ಸಹಕಾರಿಯಾಗುತ್ತದೆ. ಇಂಗು ಚಯಾಪಚಯವನ್ನು ಸರಿಪಡಿಸುತ್ತದೆ, ಆದರೆ ಜೇನುತುಪ್ಪದಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತವೆ. ಇದನ್ನು ಮಾಡಲು, ನೀವು ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪ ಮತ್ತು ಸ್ವಲ್ಪ ಇಂಗನ್ನು ಬೆರೆಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.


ಹೊಟ್ಟೆ ಉಬ್ಬರದಿಂದ ಉಪಶಮನ - ಹಲವು ಬಾರಿ, ಹೆಚ್ಚು ಎಣ್ಣೆಯುಕ್ತ ಅಥವಾ ಹಳಸಿದ ಆಹಾರವನ್ನು ಸೇವಿಸುವುದರಿಂದ, ಹೊಟ್ಟೆಯಲ್ಲಿ ಅನೇಕ ರೀತಿಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಉಬ್ಬುವಿಕೆ ಅಥವಾ ಹೊಟ್ಟೆ ಉಬ್ಬರ ಸಮಸ್ಯೆಯೂ ಅದರಲ್ಲಿ ಒಂದು. ಇಂತಹ ಪರಿಸ್ಥಿತಿಯಲ್ಲಿ, ನೀವು ಇಂಗು ಮತ್ತು ಜೇನುತುಪ್ಪವನ್ನು ಒಟ್ಟಿಗೆ ಸೇವಿಸಬಹುದು ಏಕೆಂದರೆ ಇವೆರಡೂ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಈ ಸಮಸ್ಯೆಯಿಂದ ಪರಿಹಾರವನ್ನು ಒದಗಿಸುತ್ತವೆ.


ಇದನ್ನೂ ಓದಿ-Banana : ದೇಹ ತೂಕ ನಿಯಂತ್ರಣಕ್ಕೆ ತಪ್ಪದೆ ಸೇವಿಸಿ ಬಾಳೆ ಹಣ್ಣು : ಹೇಗೆ? ಇಲ್ಲಿದೆ ನೋಡಿ


ಅಸಿಡಿಟಿಯನ್ನು ತೊಡೆದುಹಾಕಲು ಸಹಕಾರಿ - ಅಸಿಡಿಟಿ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯು ಎದುರಿಸುತ್ತಿರುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಇಂಗುವನ್ನು ತವಾ ಮೇಲೆ ಹುರಿದು ಅದಕ್ಕೆ ಜೇನುತುಪ್ಪ ಸೇರಿಸಿ ತಿನ್ನಬೇಕು. ಹೀಗೆ ಮಾಡುವುದರಿಂದ ಅಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ.


ಇದನ್ನೂ ಓದಿ-Weight Loss Tips: 40ರ ನಂತರ ತೂಕ ಇಳಿಸಲು ಇಲ್ಲಿವೆ ಸುಲಭ ಉಪಾಯ


ಹೊಟ್ಟೆನೋವು – ಮಕ್ಕಳಿಂದ ಹಿಡಿದು ಹಿರಿಯರವರೆಗೆ ಹೊಟ್ಟೆನೋವಿನ ಬಗ್ಗೆ ದಿನವೂ ಚಿಂತಿತರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಇಂಗು ಮತ್ತು ಜೇನುತುಪ್ಪವನ್ನು ತೆಗೆದುಕೊಳ್ಳುವುದು ನಿಮಗೆ ಪ್ರಯೋಜನ ನೀಡಲಿದೆ. ಒಂದು ಚಮಚದಲ್ಲಿಇಂಗನ್ನು ತೆಗೆದುಕೊಂಡು, ಅದಕ್ಕೆ  ಜೇನುತುಪ್ಪವನ್ನು ಬೆರೆಸಿ ನಾಲಿಗೆಯ ಮೇಲೆ ಇರಿಸಿ. ಈಗ ಸ್ವಲ್ಪ ಉಗುರುಬೆಚ್ಚನೆಯ ನೀರು ಕುಡಿದು ನೇರವಾಗಿ ಮಲಗಿ. ಹೊಟ್ಟೆ ನೋವು ಸ್ವಲ್ಪ ಸಮಯದಲ್ಲಿ ಮಾಯವಾಗುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.