Weight Loss Tips: 40ರ ನಂತರ ತೂಕ ಇಳಿಸಲು ಇಲ್ಲಿವೆ ಸುಲಭ ಉಪಾಯ

How To Loose Weight: ನಮ್ಮಲ್ಲಿ ಅನೇಕರಿಗೆ ವಯಸ್ಸಾದಂತೆ, ಅವರ ತೂಕವು ನಿಧಾನವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ನೀವೂ ಸಹ ಅಂತಹವರಲ್ಲಿ ಒಬ್ಬರಾಗಿದ್ದರೆ, ಕೆಲವು ಸುಲಭ ವಿಧಾನಗಳನ್ನು ನಿಮ್ಮದಾಗಿಸಿಕೊಳ್ಳುವ ಮೂಲಕ ನೀವು ನಿಮ್ಮ ತೂಕವನ್ನು ಆರೋಗ್ಯಕರವಾಗಿ ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ವಿಧಾನಗಳು ಇಲ್ಲಿವೆ. 

Written by - Yashaswini V | Last Updated : May 17, 2022, 11:14 AM IST
  • ತೂಕ ಹೆಚ್ಚಳದಿಂದಾಗಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
  • 40ರ ನಂತರ ಆರೋಗ್ಯಕರವಾಗಿ ತೂಕ ಇಳಿಸಲು ಚಯಾಪಚಯವನ್ನು ಹೆಚ್ಚಿಸಲು ವಿಶೇಷ ಗಮನಹರಿಸಿ.
  • ಇದಕ್ಕಾಗಿ ಸಾಮಾನ್ಯ ಚಹಾ ಬದಲಿಗೆ ನೀವು ಹಸಿರು ಚಹಾವನ್ನು ಅಂದರೆ ಗ್ರೀನ್ ಟೀ ಕುಡಿಯಬಹುದು.
Weight Loss Tips: 40ರ ನಂತರ ತೂಕ ಇಳಿಸಲು ಇಲ್ಲಿವೆ ಸುಲಭ ಉಪಾಯ  title=
Healthy Weight Loss

ಆರೋಗ್ಯಕರವಾಗಿ ತೂಕ ಕಳೆದುಕೊಳ್ಳಲು ಸುಲಭ ವಿಧಾನ:  ವಯಸ್ಸಾದಂತೆ ತೂಕ ಹೆಚ್ಚಾಗುವುದು ಒಂದು ಸಾಮಾನ್ಯ ಸಮಸ್ಯೆ ಆಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು. ಸಾಮಾನ್ಯವಾಗಿ ಹೇಳಲಾಗುವ ಮುಖ್ಯ ಕಾರಣವೆಂದರೆ ಚಯಾಪಚಯ ಕ್ರಿಯೆ ನಿಧಾನಗೊಳ್ಳಲು ಪ್ರಾರಂಭಿಸುವುದು. ಆದರೆ, ತೂಕ ಹೆಚ್ಚಳವು ಬೇರೆ ಬೇರೆ ರೋಗಗಳಿಗೆ ಆಹ್ವಾನವಿದ್ದಂತೆ. ಹಾಗಾಗಿಯೇ ಯಾವುದೇ ವಯಸ್ಸಿನಲ್ಲಿ ತೂಕದ ಬಗ್ಗೆ ನಿಗಾ ವಹಿಸುವುದು ತುಂಬಾ ಅಗತ್ಯವಾಗಿದೆ.  

ತೂಕವನ್ನು ನಿಯಂತ್ರಿಸಲು ಆಹಾರ ಪದ್ಧತಿ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಜೊತೆಗೆ ಇನ್ನೂ ಕೆಲವು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಕೂಡ ಅಗತ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ನಿಮ್ಮ ವಯಸ್ಸು 40 ದಾಟಿದ್ದರೆ ನಿಮ್ಮ ಆರೋಗ್ಯದ ಬಗ್ಗೆ, ತೂಕದ ಬಗ್ಗೆ ಸರಿಯಾಗಿ ಕಾಳಜಿ ವಹಿಸಿ. ಆರೋಗ್ಯಕರವಾಗಿರಲು ಪ್ರಯತ್ನಿಸಿ.

ಇದನ್ನೂ ಓದಿ- Weight Loss Food: ಈ ಹಣ್ಣಿನ ಎಲೆಗಳನ್ನು ತಿನ್ನುವುದರಿಂದ ಕಡಿಮೆಯಾಗುತ್ತಂತೆ ತೂಕ

40ರ ನಂತರ ಆರೋಗ್ಯಕರವಾಗಿ ತೂಕ ಇಳಿಸಲು ಸುಲಭ ಮಾರ್ಗ :
ಚಯಾಪಚಯವನ್ನು ಹೆಚ್ಚಿಸುವ ಆಹಾರವನ್ನು ಸೇವಿಸಿ:
40ರ ನಂತರ ಆರೋಗ್ಯಕರವಾಗಿ ತೂಕ ಇಳಿಸಲು ಚಯಾಪಚಯವನ್ನು ಹೆಚ್ಚಿಸಲು ವಿಶೇಷ ಗಮನ ಹರಿಸಿ. ಇದಕ್ಕಾಗಿ ಸಾಮಾನ್ಯ ಚಹಾ ಬದಲಿಗೆ ನೀವು ಹಸಿರು ಚಹಾವನ್ನು ಅಂದರೆ ಗ್ರೀನ್ ಟೀ ಕುಡಿಯಬಹುದು. ಇದು ಖಂಡಿತವಾಗಿಯೂ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನಿತ್ಯ ಒಂದೆರಡು ಕಪ್ ಹಸಿರು ಚಹಾವನ್ನು ಕುಡಿಯುವ ಮೂಲಕ ನೀವು ದೇಹದ ತೂಕವನ್ನು ಮತ್ತು ಸಂಕೋಚನದ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. 

ಸಾಕಷ್ಟು ನೀರು ಕುಡಿಯಿರಿ:
ನೀರು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ನೀವು ಸರಿಯಾದ ಪ್ರಮಾಣದ ನೀರನ್ನು ಸೇವಿಸಿದರೆ, ಅದು ನಿಮಗೆ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅರ್ಧ ಲೀಟರ್ ನೀರನ್ನು ಕುಡಿಯುವುದರಿಂದ, ನಿಮ್ಮ ಚಯಾಪಚಯವು ಒಂದು ಗಂಟೆಗೆ 25% ರಷ್ಟು ವರ್ಧಕವನ್ನು ಪಡೆಯುತ್ತದೆ.

ಇದನ್ನೂ ಓದಿ- Health Apps: ತೂಕ ನಷ್ಟ -ಫಿಟ್‌ನೆಸ್‌ಗಾಗಿ ಹೆಲ್ತ್ ಅಪ್ಲಿಕೇಶನ್‌

ದಿನಚರಿಯನ್ನು ಅನುಸರಿಸಿ:
>> ತೂಕ ಹೆಚ್ಚಳದಿಂದಾಗಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದು ನಿಮ್ಮ ನಿದ್ರೆಯ ಮೇಲೂ ಪರಿಣಾಮ ಬೀರಬಹುದು. ಅದಕ್ಕಾಗಿಯೇ, ನಿತ್ಯ ಕನಿಷ್ಠ 7-8 ಗಂಟೆಗಳ ಕಾಲ ನಿದ್ದೆ ಮಾಡಲು ಪ್ರಯತ್ನಿಸಿ. 
>> ಅದೇ ಸಮಯದಲ್ಲಿ, ನಿಮ್ಮ ಆಹಾರದ ಬಗ್ಗೆಯೂ ಗಮನ ಕೊಡಿ. ಏಕೆಂದರೆ ಉತ್ತಮ ಆಹಾರ ಮಾತ್ರ ನಿಮ್ಮ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 
>> ಇದರೊಂದಿಗೆ, ನಿಮ್ಮ ಬೆಳಗಿನ ಉಪಾಹಾರದ ಬಗ್ಗೆ ವಿಶೇಷ ಗಮನ ಕೊಡಿ. ಏಕೆಂದರೆ ಬೆಳಗಿನ ಉಪಾಹಾರವನ್ನು ಬಿಡುವುದರಿಂದ ನಿಮ್ಮ ಇಡೀ ದಿನದ ಮೇಲೆ ಅದು ಪ್ರಭಾವ ಬೀರುತ್ತದೆ. ಆದ್ದರಿಂದ ಉಪಹಾರವನ್ನು ಸೇವಿಸುವುದು ಬಹಳ ಮುಖ್ಯ. 
>> ಇದರೊಂದಿಗೆ, ನೀವು ವಿಟಮಿನ್ ಮತ್ತು ಫೈಬರ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು, ಬೆಳಗಿನ ಉಪಾಹಾರದಲ್ಲಿ ಹಣ್ಣುಗಳು, ಗಂಜಿ ಇತ್ಯಾದಿಗಳನ್ನು ತಿನ್ನಬೇಕು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News