ನವದೆಹಲಿ: ಮೊಟ್ಟೆ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು. ಮೊಟ್ಟೆಯಲ್ಲಿರುವ ಪೋಷಕಾಂಶಗಳಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ಆದರೆ ಪ್ರತಿಯೊಬ್ಬರಿಗೂ ಕಾಡುವ ಪ್ರಶ್ನೆ, ದಿನಕ್ಕೆ ಎಷ್ಟು ಮೊಟ್ಟೆ ತಿನ್ನುವುದು ಒಳ್ಳೆಯದು? ಇದರ ಬಗ್ಗೆ ನಿಮಗೆ ಏನಾದರೂ ಗೊತ್ತಾ..?  


COMMERCIAL BREAK
SCROLL TO CONTINUE READING

ಉತ್ತಮ ಆಹಾರದೊಂದಿಗೆ ಮಕ್ಕಳು ಮತ್ತು ಹೃದಯರೋಗಿಗಳು ಮೊಟ್ಟೆ ಸೇವಿಸುವುದು ಉತ್ತಮ. ಆರೋಗ್ಯ ತಜ್ಞರ ಪ್ರಕಾರ ದಿನಕ್ಕೆ 1 ಮೊಟ್ಟೆ ಸೇವಿಸಿದರೆ ಸಾಕು. ಆರೋಗ್ಯವಂತ ಪುರುಷರು ಮತ್ತು ಮಹಿಳೆಯರು ಒಂದಕ್ಕಿಂತ ಹೆಚ್ಚು ಮೊಟ್ಟೆ ಸೇವಿಸಬಹುದು. ಅದರೆ ಮಧುಮೇಹಿಗಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ದಿನಕ್ಕೆ ಕೇವಲ 1 ಮೊಟ್ಟೆಯನ್ನಷ್ಟೇ ಸೇವಿಸಬೇಕು.  


ಇದನ್ನೂ ಓದಿ: Coconut Water: ಎಳನೀರು ಸೇವನೆಯಿಂದ ತೂಕ ನಷ್ಟವಾಗುತ್ತಾ..?


ವರದಿಗಳ ಪ್ರಕಾರ ದಿನಕ್ಕೆ 1 ಮೊಟ್ಟೆ ಸೇವಿಸಿದವರಲ್ಲಿ ಯಾವುದೇ ಆರೋಗ್ಯದ ಅಡ್ಡ ಪರಿಣಾಮ ಕಂಡುಬಂದಿಲ್ಲ. ನೀವು ಪ್ರೊಟೀನ್‍ಯುಕ್ತ ಆಹಾರ ಕ್ರಮ ಅನುಸರಿಸುತ್ತಿದ್ದರೆ ದಿನಕ್ಕೆ 3 ಮೊಟ್ಟೆಗಳನ್ನು ಸೇವಿಸಬಹುದು. ಇದಕ್ಕಿಂತ ಹೆಚ್ಚಿನ ಪ್ರಮಾಣ ಮೊಟ್ಟೆ ಸೇವಿಸಬಯಸಿದರೆ ವೈದ್ಯರ ಅನುಮತಿ ಪಡೆದುಕೊಳ್ಳುವುದು ಉತ್ತಮ.


ಬೆಳೆಯುವ ಮಕ್ಕಳಿಗೆ ಮೊಟ್ಟೆಯಲ್ಲಿರುವ ಪ್ರೊಟೀನ್ ಬಹಳ ಮುಖ್ಯ. ಆದರೆ ಸಸ್ಯಾಹಾರಿಗಳಿಗೆ ಇದು ಕಡ್ಡಾಯವಲ್ಲ. ಇತರ ಮೂಲಗಳಿಂದಲೂ ಮೊಟ್ಟೆಯಲ್ಲಿ ಸಿಗುವ ಪ್ರೊಟೀನ್ ಪಡೆಯಬಹುದು. ಹೀಗಾಗಿ ಮಕ್ಕಳಿಗೆ ದಿನಕ್ಕೆ ಒಂದು ಮೊಟ್ಟೆ ನೀಡುವುದು ಉತ್ತಮ. ಮೊಟ್ಟೆ ಸೇವಿಸುವ ವಿಚಾರದಲ್ಲಿ ಅನೇಕರಿಗೆ ಗೊಂದಲವಿರುತ್ತದೆ.


ಇದನ್ನೂ ಓದಿ: ಕೆಲವೇ ದಿನಗಳಲ್ಲಿ ತೂಕ ಇಳಿಕೆ ಮಾಡಿಕೊಳ್ಳಬೇಕೆ? ಈ ಸ್ಪೆಷಲ್ ಸ್ಪ್ರೌಟ್ಸ್ ದೋಸೆ ನಿಮ್ಮ ಬೆಳಗಿನ ಉಪಹಾರದಲ್ಲಿರಲಿ!


ಎಷ್ಟು ಮೊಟ್ಟೆ ಸೇವಿಸಬೇಕು, ಡಯಟ್ ಮಾಡುವಾಗ ಎಷ್ಟು ಹಾಗೂ ಸಾಮಾನ್ಯವಾಗಿ ಎಷ್ಟು ಮೊಟ್ಟೆ ಸೇವಿಸಬೇಕು ಅನ್ನೋದು. ಇದಕ್ಕೆ ನಾವು ನೀಡಿರುವ ಸಲಹೆ ಪಾಲಿಸಿದರೆ ಸಾಕು. ಇದಕ್ಕಿಂತಲೂ ಹೆಚ್ಚಿನ ಮಾಹಿತಿ ಬೇಕಾದರೆ ನೀವು ಆರೋಗ್ಯ ತಜ್ಞರ ಸಲಹೆ ಪಡೆದುಕೊಳ್ಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.