ನವದೆಹಲಿ:  Health Tips - ಹೆಚ್ಚಿನ ಜನರು ಚಹಾ ಕುಡಿಯಲು ಇಷ್ಟಪಡುತ್ತಾರೆ ಮತ್ತು ಖಾಲಿ ಹೊಟ್ಟೆಯಲ್ಲಿ ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸಲು ಅವರು ಇಷ್ಟಪಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ವಿಷಯವು ಅನೇಕ ಸಂಶೋಧನೆಗಳಲ್ಲಿ ಬಹಿರಂಗಗೊಂಡಿದೆ. ಖಾಲಿ ಹೊಟ್ಟೆ ಚಹಾ ಸೇವಿಸಿದರೆ, ಅದು ನಿಮ್ಮ ಚಯಾಪಚಯ ಕ್ರಿಯೆಯನ್ನು ಅಡ್ಡಿಪಡಿಸುತ್ತದೆ ಮತ್ತು ಹೊಟ್ಟೆ ನೋವನ್ನು ಸಹ ಉಂಟುಮಾಡುತ್ತದೆ. ಆದ್ದರಿಂದ ಖಾಲಿ ಹೊಟ್ಟೆಯ ಚಹಾದೊಂದಿಗೆ ನಿಮ್ಮ ದಿನವನ್ನು ಆರಂಭಿಸಬೇಡಿ. ಇದರಿಂದಾಗುವ ಪರಿನಾಮಗಳನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

- ಚಹಾದಲ್ಲಿ ಥಿಯೋಫಿಲಾಯನ್ ಹೆಸರಿನ ರಸಾಯನ ಇರುತ್ತದೆ, ಹೀಗಾಗಿ ಬೆಳಗ್ಗೆ ಖಾಲಿ ಹೊಟ್ಟೆ ಚಹಾ ಸೇವನೆಯಿಂದ ಮಲಬದ್ಧತೆ ಉಂಟಾಗುವ ಸಾಧ್ಯತೆ ಇದೆ.


- ಬೆಳಿಗ್ಗೆ ಮೊದಲು ಚಹಾ ಕುಡಿಯುವುದರಿಂದ ಅದು ಇತರೆ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ಅಡ್ಡಿಪಡಿಸುತ್ತದೆ.


- ನಿಮ್ಮ ದಿನವನ್ನು ಸಾದಾ ನೀರು ಸೇವನೆಯಿಂದ ಪ್ರಾರಂಭಿಸಬಹುದು. ಇದನ್ನು ಮಾಡುವುದರಿಂದ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯುವಿರಿ. ಆರೋಗ್ಯಕರ ಬೆಳಗ್ಗೆಯಿಂದ ನಿಮ್ಮ ದಿನವನ್ನು ಆರಂಭಿಸಿ. ಬೆಳಿಗ್ಗೆ ಬಿಸಿ ಕಪ್ ಚಹಾವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದಕ್ಕಿಂತ ಕುಡಿಯುವ ನೀರು ಹೆಚ್ಚು ಪ್ರಯೋಜನಕಾರಿಯಾಗಿದೆ. ಅಲ್ಲದೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಇದು ನಿಮಗೆ ಪರಿಹಾರ ನೀಡಲಿದೆ.


ಇದನ್ನೂ ಓದಿ- ಚಹಾಗೆ ಸಂಬಂಧಿಸಿದ ಈ General Knowledge ನಿಮಗೆ ತಿಳಿದಿದೆಯಾ?


- ಬೆಳಗ್ಗೆ ಎದ್ದಾಗ ನೀರಿಲ್ಲದೆ ಎಂಟು ಗಂಟೆಗಳ ಕಾಲ ಶರೀರ ಡಿಹೈಡ್ರೇಟ್ ಆಗಿರುತ್ತದೆ. ಹೀಗಾಗಿ ಬೆಳಗ್ಗೆ ಒಂದು ವೇಳೆ ನೀವು ನೀರಿನ ಬದಲು ಖಾಲಿ ಹೊಟ್ಟೆ ಚಹಾ (Tea) ಸೇವಿಸಿದರೆ, ಇದರಿಂದ ನಿರ್ಜಲೀಕರಣ ಇನ್ನಷ್ಟು ಹೆಚ್ಚಾಗುತ್ತದೆ. ಇದರಿಂದ ಖಂಡಗಳಲ್ಲಿ ಸೆಳೆತ ಉಂಟಾಗುತ್ತದೆ.


ಇದನ್ನೂ ಓದಿ- ಈ ಕಾರಣಗಳಿಂದಾಗಿ ಚಹಾ, ಗ್ರೀನ್ ಟೀ ಅಥವಾ ಜ್ಯೂಸ್ ಜೊತೆ ಔಷಧಿ ಸೇವನೆ ಬೇಡ


- ಹಲವು ವರ್ಷಗಳ ಈ ರೂಢಿ ತ್ಯಜಿಸುವುದು ಸ್ವಲ್ಪ ಕಷ್ಟ. ಆದರೆ ನಿಶ್ಚಿತವಾಗಿ ಅದು ಅಸಂಭವ ಅಲ್ಲ. ಆದರೆ ಒಂದು ವೇಳೆ ನೀವು ವ್ಯಾಯಾಮ ಮಾಡುವವರಾಗಿದ್ದರೆ, ಒಂದು ಮುಷ್ಠಿ ನಟ್ಸ್ ಹಾಗೂ ಬೀಜ ಅಥವಾ ಹಣ್ಣು ಸೇವಿಸಬಹುದು.


ಇದನ್ನೂ ಓದಿ-Guvava Leaves Tea: ಪೇರಳೆ ಹಣ್ಣಿನ ಎಳೆಗಳ ಈ ಪೇಯ ಬೊಜ್ಜು ನಿವಾರಕ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.