ನವದೆಹಲಿ : ನಾವು ಒಂದಿಲ್ಲ ಒಂದು ಕಾಯಿಲೆಗೆ ಔಷಧ (Medicine) ತೆಗೆದುಕೊಳ್ಳುತ್ತಲೇ ಇರುತ್ತೇವೆ. ಕೆಲವರಿಗೆ ಔಷಧಿಯನ್ನು ಚಹಾ (Tea) , ಗ್ರೀನ್ ಟೀ, ಜ್ಯೂಸ್ ಜೊತೆ ತೆಗೆದುಕೊಳ್ಳುವ ಅಭ್ಯಾಸವಿರುತ್ತದೆ. ಔಷಧಿಯ ಕಹಿಯನ್ನು ತಪ್ಪಿಸುವ ಸಲುವಾಗಿ ಕೆಲವರು ಹೀಗೆ ಮಾಡುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸುರಕ್ಷಿತ ಅನ್ನೋದು ಪ್ರಶ್ನೆ. ಹೌದು ಹೀಗೆ ಮಾಡುವುದು ಖಂಡಿತಾ ಒಳ್ಳೆಯದಲ್ಲ. ಇದು ಆರೋಗ್ಯಕ್ಕೆ (health) ಹಾನಿಕಾರಕ.
ಚಹಾದೊಂದಿಗೆ ಔಷಧಿ ಸೇವಿಸಿದರೆ ಔಷಧದ ಪರಿಣಾಮ ಕಡಿಮೆಯಾಗುತ್ತದೆ :
ವೈದ್ಯರ ಪ್ರಕಾರ , ಚಹಾ, ಗ್ರೀನ್ ಟೀ (Green tea), ಹಾಲು (Milk) ಅಥವಾ ಜ್ಯೂಸ್ ಜೊತೆ ಔಷಧಿ ತೆಗೆದುಕೊಳ್ಳುವ ಅಭ್ಯಾಸ ಸರಿಯಲ್ಲ. ಚಹಾದಲ್ಲಿ ಟೆನಿನ್ ಅಂಶಗಳಿವೆ. ಇದು ಔಷಧಿ ಜೊತೆ ಸೇರಿದಾಗ ಕೆಮಿಕಲ್ ರಿಯಾಕ್ಷನ್ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಮಾತ್ರವಲ್ಲ, ಚಹಾ ಮತ್ತು ಕಾಫಿಯೊಂದಿಗೆ ಔಷಧಿಯನ್ನು (Medicine) ಸೇವಿಸುವುದರಿಂದ ಔಷಧದ ಪರಿಣಾಮವೂ ಕಡಿಮೆಯಾಗುತ್ತದೆಯಂತೆ. ಕೆಲವೊಮ್ಮೆ ಔಷಧ ಯಾವುದೇ ಪರಿಣಾಮ ಬೀರದೆ ಕೂಡಾ ಇರಬಹುದು.
ಇದನ್ನೂ ಓದಿ : Golgappa Dieting : ಒಂದು ಪ್ಲೇ ಟ್ ಪಾನಿಪೂರಿಯಿಂದಲೂ Weight Loss ಸಾಧ್ಯ
ತಪ್ಪಿಯೂ ಜ್ಯೂಸ್ ಜೊತೆ ಕೂಡ ಔಷಧಿ ಸೇವನೆ ಬೇಡ :
ಜ್ಯೂಸ್ (Juice) ಜೊತೆ ಔಷಧಿ ಸೇವಿಸಿದರೆ ಅದು ದೇಹದಲ್ಲಿ ರಿಯಾಕ್ಷನ್ ಉಂಟುಮಾಡಬಹುದು. ಅಲ್ಲದೆ, ಔಷಧದ ಪರಿಣಾಮವನ್ನು ಸಹ ಕಡಿಮೆ ಮಾಡಬಹುದು. ಇದರಿಂದ ರೋಗಿಯ ಚೇತರಿಕೆ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ. ಕಿತ್ತಳೆ, ಸೇಬು ಮತ್ತು ದ್ರಾಕ್ಷಿ ಜ್ಯೂಸ್ ಕ್ಯಾನ್ಸರ್ (cancer) ಔಷಧಿ ಮತ್ತು ಆಂಟಿ ಬಯೋಟಿಕ್ ನ ಪರಿಣಾಮವನ್ನು ಕೂಡಾ ಕಡಿಮೆ ಮಾಡುತ್ತದೆ. ದ್ರಾಕ್ಷಿ (Grapes) ರಸದೊಂದಿಗೆ ಔಷಧಿಯನ್ನು ತೆಗೆದುಕೊಂಡರೆ ಔಷಧಿಯ ಅರ್ಧದಷ್ಟು ಪರಿಣಾಮ ಮಾತ್ರ ಆಗುತ್ತದೆ. ನೀವು ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರು ಹಣ್ಣಿನ ರಸ ಸೇವಿಸುವ ಸಲಹೆ ನೀಡಿದ್ದರೆ, ಅದನ್ನು ಪ್ರತ್ಯೇಕವಾಗಿ ಕುಡಿಯಿರಿ, ಬದಲಾಗಿ ಔಷಧಿ ಜೊತೆ ಖಂಡಿತಾ ಅಲ್ಲ.
ಗ್ರೀನ್ ಟೀನ್ ಜೊತೆಗೂ ಔಷಧಿ ತೆಗೆದುಕೊಳ್ಳುವುದು ಸರಿಯಲ್ಲ :
ಗ್ರೀನ್ ಟೀಯನ್ನು ಹಾಗೆ ಕುಡಿಯುವುದದಾದರೆ ಆರೋಗ್ಯಕ್ಕೆ (Health) ಒಳ್ಳೆಯದು. ಹಾಗಂತ ಔಷಧಿಯನ್ನು ಗ್ರೀನ್ ಟೀ ಜೊತೆ ತೆಗೆದುಕೊಳ್ಳುವ ಕೆಲಸ ಯಾವತ್ತು ಮಾಡ್ಬೇಡಿ. ಯಾಕಂದರೆ ಗ್ರೀನ್ ಟೀಯಲ್ಲಿ ಕೆಫೀನ್ ಇದ್ದು, ಇದು ಕೂಡಾ ಔಷಧಿಯೊಂದಿಗೆ ರಿಯಾಕ್ಷನ್ ಆಗಬಹುದು. ಹಾಗಾಗಿ ನೆನಪಿರಲಿ ಯಾವತ್ತೂ ಔಷಧಿಯನ್ನು ಬರೀ ನೀರಿನ (Water) ಜೊತೆ ಮಾತ್ರ ಸೇವಿಸಿ.
ಇದನ್ನೂ ಓದಿ : Health Tips: ಹಲವು ರೋಗಗಳಿಗೆ ರಾಮಬಾಣ ಈ ಪೇಯ, ತಯಾರಿಸುವ ವಿಧಾನ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.