High Blood Sugar: ಈ ಹಣ್ಣಿನಿಂದ ಮಾಡಿದ ಚಹಾವು ಅಧಿಕ ರಕ್ತದ ಸಕ್ಕರೆ ಮಟ್ಟಕ್ಕೆ ಪರಿಹಾರ
High Blood Sugar: ಹಾಲು, ಸಕ್ಕರೆಯುಕ್ತ ಚಹಾವನ್ನು ಭಾರತದಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ. ಆದರೆ ನೀವು ಆಮ್ಲಾದಿಂದ ತಯಾರಿಸಿದ ಗಿಡಮೂಲಿಕೆ ಚಹಾವನ್ನು ಸೇವಿಸಿದ್ದೀರಾ? ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮಧುಮೇಹಕ್ಕೆ ಭಾರತೀಯ ನೆಲ್ಲಿಕಾಯಿ ಚಹಾ: ಭಾರತದಲ್ಲಿ ಇಂದು ಮಧುಮೇಹ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವಿಜ್ಞಾನಿಗಳು ಇದಕ್ಕೆ ಇನ್ನೂ ಸಹ ಪರಿಣಾಮಕಾರಿ ಔಷಧಿ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ ಕೆಲವು ವಸ್ತುಗಳ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಈ ಪೈಕಿ ಆಮ್ಲಾ ಟೀ ಕೂಡ ಒಂದು. ನಾವು ಸಾಮಾನ್ಯವಾಗಿ ಕೂದಲಿನ ಆರೋಗ್ಯ ಸುಧಾರಿಸಲು ಆಮ್ಲಾವನ್ನು ಬಳಸುತ್ತೇವೆ. ಆದರೆ ಇದು ಕ್ಯಾನ್ಸರ್, ಮೂತ್ರಪಿಂಡ ಕಾಯಿಲೆ ಮತ್ತು ಹೃದಯ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ಆಮ್ಲಾ ಚಹಾ ಏಕೆ ಪ್ರಯೋಜನಕಾರಿ ಎಂದು ತಿಳಿಯಿರಿ.
ಭಾರತದ ನೆಲ್ಲಿಕಾಯಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಇದನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಕಬ್ಬಿಣ, ವಿಟಮಿನ್ ಸಿ, ಕಾರ್ಬೋಹೈಡ್ರೇಟ್, ರಂಜಕ, ಫೈಬರ್, ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಗಳಂತಹ ಅನೇಕ ಪ್ರಮುಖ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಇದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆಮ್ಲಾವನ್ನು ಆಯುರ್ವೇದದ ನಿಧಿ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಔಷಧಿಯಾಗಿ ಬಳಸಲಾಗುತ್ತದೆ.
ಇದನ್ನೂ ಓದಿ: Health Tips: ತೂಕ ನಷ್ಟಕ್ಕೆ ಈ ಸೊಪ್ಪಿನ ಆಮ್ಲೇಟ್ ಸಹಕಾರಿ: ಮಂಜಿನಂತೆ ಕರಗುವುದು ಬೊಜ್ಜು!
ಮಧುಮೇಹದಲ್ಲಿ ಆಮ್ಲಾ ಏಕೆ ಪ್ರಯೋಜನಕಾರಿ?
ಮಧುಮೇಹ ವಿರೋಧಿ ಗುಣಲಕ್ಷಣಗಳು ಭಾರತೀಯ ನೆಲ್ಲಿಕಾಯಿಯಲ್ಲಿ ಕಂಡುಬರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್ಗಳು ರಕ್ತದ ಹರಿವಿನಲ್ಲಿ ನಿಧಾನವಾಗಿ ಗ್ಲೂಕೋಸ್ ಅನ್ನು ಬಿಡುಗಡೆ ಮಾಡಲು ಕೆಲಸ ಮಾಡುತ್ತವೆ. ಆಮ್ಲಾದಲ್ಲಿ ವಿಟಮಿನ್ ಸಿ ಕಂಡುಬರುವುದರಿಂದ, ಇದು ಮಧುಮೇಹ ರೋಗಿಗಳಿಗೆ ಸೂಕ್ತವಾದ ಆಹಾರವಾಗಿದೆ. ಇದಲ್ಲದೆ ಆಮ್ಲಾದಿಂದ ಕ್ರೋಮಿಯಂ ಎಂಬ ಖನಿಜವು ಲಭ್ಯವಿದೆ, ಇದು ಗ್ಲೂಕೋಸ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.
ಮಧುಮೇಹ ರೋಗಿಗಳು ಆಮ್ಲಾ ಟೀ ಕುಡಿಯಬೇಕು
ಮಧುಮೇಹಿಗಳಿಗೆ ಆಮ್ಲಾ ಟೀ ರಾಮಬಾಣಕ್ಕಿಂತ ಕಡಿಮೆಯಿಲ್ಲ. ಆಮ್ಲಾವನ್ನು ಹಸಿಯಾಗಿ ತಿನ್ನುವುದು, ಕಲ್ಲು ಉಪ್ಪನ್ನು ಬೆರೆಸಿದ ನಂತರ ತಿನ್ನುವುದು, ಪುಡಿಯಂತೆ ರುಬ್ಬುವುದು, ಆಮ್ಲಾ ಜ್ಯೂಸ್ ಸಹ ಲಾಭದಾಯಕ.
ಆಮ್ಲಾ ಟೀ ಮಾಡುವುದು ಹೇಗೆ?
- ಮೊದಲು ನೀವು ಒಂದು ಪಾತ್ರೆಯಲ್ಲಿ 2 ಕಪ್ ನೀರನ್ನು ಹಾಕಿ ಕುದಿಸಿ
- ಈಗ ಅದರಲ್ಲಿ 1 ಚಮಚ ಆಮ್ಲಾ ಪುಡಿ ಮತ್ತು ಪುಡಿಮಾಡಿದ ಶುಂಠಿಯನ್ನು ಮಿಶ್ರಣ ಮಾಡಿ
- ಈಗ ತಾಜಾ ಪುದೀನ ಎಲೆಗಳನ್ನು ಸೇರಿಸಿ ಮತ್ತು ಕೆಲವು ನಿಮಿಷಗಳ ಕಾಲ ಕುದಿಸಿ
- ನಂತರ ಚಹಾವನ್ನು ಸೋಸಿಕೊಳ್ಳಿ ಮತ್ತು ಇದನ್ನು ಒಂದು ಕಪ್‌ನಲ್ಲಿ ಹಾಕಿಕೊಂಡು ಕುಡಿಯಿರಿ
- ನೀವು ದಿನಕ್ಕೆ 2 ಬಾರಿ ಈ ಟೀ ಕುಡಿಯಬಹುದು.
ಇದನ್ನೂ ಓದಿ: Weight Loss Tips: ಜಿಮ್‌ಗೆ ಹೋಗದೆ, ಕೇವಲ ನೀರು ಕುಡಿದೇ ತೂಕ ಇಳಿಸಬಹುದು.!
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.