Curd for Health: ಈ 7 ಕಾರಣಗಳಿಗೆ ಬೇಸಿಗೆಯಲ್ಲಿ ಪುರುಷರು ಮೊಸರು ತಿನ್ನಬೇಕು..!
ಬೆಳಿಗ್ಗೆ ಅಥವಾ ಮಧ್ಯಾಹ್ನ ಒಂದು ಕಪ್ ಮೊಸರು ತಿನ್ನಿ. ಇದರಿಂದ ಹೊಟ್ಟೆಯಲ್ಲಿ ಆಹಾರ ಚೆನ್ನಾಗಿ ಜೀರ್ಣ (Digestion) ಆಗುತ್ತದೆ. ಬೆಳಗ್ಗಿನ ಹೊತ್ತು ಹೊಟ್ಟೆ ಚೆನ್ನಾಗಿ ಕ್ಲೀಯರ್ ಆಗುತ್ತದೆ.
ಬೆಂಗಳೂರು : ಬೇಸಿಗೆ (Summer) ಶುರುವಾಗಿದೆ. ಈ ಹೊತ್ತಿನಲ್ಲಿ ದೇಹ ತಂಪಾಗಿರಬೇಕು. ಜೊತೆಗೆ ದೇಹಾರೋಗ್ಯ ಕೂಡಾ ಚೆನ್ನಾಗಿರಬೇಕು. ನಾವು ಇವತ್ತು ಬೇಸಿಗೆಯಲ್ಲಿ ಮೊಸರು (Curd)ಯಾಕೆ ತಿನ್ನಬೇಕು ಎನ್ನುವುದನ್ನು ಹೇಳುತ್ತೇವೆ. ಅದಕ್ಕಿಂತಲೂ ಮುಖ್ಯವಾಗಿ ಬೇಸಿಗೆಯಲ್ಲಿ ಮೊಸರು ಪುರುಷರಿಗೆ ಏಕೆ ಮುಖ್ಯ ಎಂಬುದನ್ನು ತಿಳಿದುಕೊಳ್ಳೋಣ. ಮೊಸರನ್ನು ನೋಡಿ ಮುಖ ಸಿಂಡರಿಸಬೇಡಿ. ಮೊಸರು ಪ್ರೊಟಿನ್, ಪಾಸ್ಪರಸ್, ಲ್ಯಾಕ್ಟೋಸ್, ಕ್ಯಾಲ್ಸಿಯಂ ಮುಂತಾದ ಸತ್ವಗಳ ಅಕ್ಷಯಪಾತ್ರೆ. ಒಂದೊಂದೇ ಪ್ರಯೋಜನ ನೋಡೋಣ.
1. ಜೀರ್ಣ ಕ್ರೀಯೆ ಸರಿಯಾಗುತ್ತದೆ :
ಬೆಳಿಗ್ಗೆ ಅಥವಾ ಮಧ್ಯಾಹ್ನ ಒಂದು ಕಪ್ ಮೊಸರು (Curd) ತಿನ್ನಿ. ಇದರಿಂದ ಹೊಟ್ಟೆಯಲ್ಲಿ ಆಹಾರ ಚೆನ್ನಾಗಿ ಜೀರ್ಣ (Digestion) ಆಗುತ್ತದೆ. ಬೆಳಗ್ಗಿನ ಹೊತ್ತು ಹೊಟ್ಟೆ ಚೆನ್ನಾಗಿ ಕ್ಲೀಯರ್ ಆಗುತ್ತದೆ. ಆಹಾರ ಚೆನ್ನಾಗಿ ಜೀರ್ಣವಾಗಿ, ಹೊಟ್ಟೆ ಚೆನ್ನಾಗಿ ಕ್ಲಿಯರ್ ಆದರೆ, ಅದಕ್ಕಿಂತ ಉತ್ತಮ ಆರೋಗ್ಯ ಬೇರೊಂದಿಲ್ಲ.
ಇದನ್ನೂ ಓದಿ : Health Tips - ತೋಟ-ಗದ್ದೆಗಳಲ್ಲಿ ಬರಿಗಾಲಲ್ಲಿ ನಡೆಯುವುದರ ಲಾಭಗಳಿವು
2. ಬಿಪಿ ಕಂಟ್ರೋಲ್ ಮಾಡುತ್ತದೆ :
ಮೊಸರಿನಲ್ಲಿ ಪೊಟ್ಯಾಶಿಯಂ ಬೇಕಾದಷ್ಟು ಪ್ರಮಾಣದಲ್ಲಿದೆ. ಪೊಟ್ಯಾಶಿಯಂ ಬಿಪಿಯ (Blood Pressure) ತೊಂದರೆಯನ್ನು ಕಡಿಮೆ ಮಾಡುತ್ತದೆ. ಬಿಪಿ ಕಂಟ್ರೋಲ್ ಮಾಡುತ್ತದೆ. ರಕ್ತದೊತ್ತಡ ಇರುವವರು ಮೊಸರು ಖಂಡಿತಾ ತಿನ್ನಬೇಕು.
3. ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ :
ಮೊಸರಿನಲ್ಲಿ ಪ್ರೊಬಯೋಟಿಕ್ ಸತ್ವ ಬೇಕಾದಷ್ಟಿರುತ್ತದೆ. ಇದು ದೇಹದ ಇಮ್ಯೂನಿಟಿ (Immunity) ಹೆಚ್ಚಿಸುತ್ತದೆ. ಕೆಲವರಿಗೆ ಹಾಲು (Milk) ಕುಡಿಯುವ ಅಭ್ಯಾಸ ಇರುವುದಿಲ್ಲ. ಅಂಥವರು ಖಂಡಿತವಾಗಿಯೂ ಮೊಸರು ತಿನ್ನಬೇಕು ಎಂದು ಹೇಳುತ್ತಾರೆ ಆಹಾರ ತಜ್ಞರು.
4. ಗ್ಯಾಸ್ ಮತ್ತು ಮಲಬದ್ದತೆ ನಿವಾರಕ :
ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಮಲಬದ್ದತೆ (Consipation) ನಿವಾರಿಸುವ ಪೋಷಕ ಸತ್ವ ಮೊಸರಿನಲ್ಲಿದೆ. ಹಾಗಾಗಿ, ಮೊಸರು ತಿಂದರೆ ಗ್ಯಾಸ್, ಮಲಬದ್ದತೆ ದೂರವಾಗುತ್ತದೆ.
ಇದನ್ನೂ ಓದಿ : ಹೃದ್ರೋಗ, ಕ್ಯಾನ್ಸರ್ ತಡೆಯುತ್ತದೆಯಂತೆ ಒಗ್ಗರಣೆಗೆ ಹಾಕುವ ಕರಿಬೇವಿನಸೊಪ್ಪು..!
5. ಟೆನ್ಶನ್ ಕಡಿಮೆ ಮಾಡುತ್ತದೆ :
ಮೊಸರು ತಿಂದರೆ ದೇಹಕ್ಕೆ ಶಕ್ತಿ ಸಿಗುತ್ತದೆ. ಆಯಾಸ ಕಡಿಮೆ ಆಗುತ್ತದೆ. ಇದರ ಜೊತೆ ಟೆನ್ಶನ್ (Tension) ಕೂಡಾ ಕಡಿಮೆ ಆಗುತ್ತದೆ. ಹಾಗಾಗಿ ಪುರುಷರು ಮೊಸರು ತಿನ್ನಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
6 ಆರೋಗ್ಯ ಚೆನ್ನಾಗಿಡುತ್ತದೆ :
ಬೇಸಿಗೆಯಲ್ಲಿ ಖಂಡಿತಾ ಮೊಸರು ತಿನ್ನಲೇ ಬೇಕು. ಇದರಿಂದ ದೇಹಾರೋಗ್ಯ ಚೆನ್ನಾಗಿರುತ್ತದೆ. ದೇಹಕ್ಕೆ ಶಕ್ತಿ (Energy) ಸಿಗುತ್ತದೆ. ಜೊತೆಗೆ ತಂಪಾಗಿಡುತ್ತದೆ.
7. ಬೊಜ್ಜು ಕರಗಿಸುತ್ತದೆ:
ಮೊಸರಿನಲ್ಲಿ ಫ್ಯಾಟ್ (fat) ಕಡಿಮೆ ಇರುತ್ತದೆ. ಪ್ರೋಟೀನ್ ಚೆನ್ನಾಗಿರುತ್ತದೆ. ಇದು ಬೊಜ್ಜನ್ನು (obesity) ನಿಯಂತ್ರಣದಲ್ಲಿಡುತ್ತದೆ.
ಮೊಸರನ್ನು ಹಾಗೆ ತಿನ್ನಬಹುದು. ಮೊಸರಿಗೆ ಸಕ್ಕರೆ ಹಾಕಿಯೂ ತಿನ್ನಬಹುದು. ಮೊಸರು ಬಜ್ಜಿ, ಲಸ್ಸಿ ಮಾಡಿಯೂ ತಿನ್ನಬಹುದು. ಮೊಸರು ತಿಂದರೆ ಆರೋಗ್ಯಕ್ಕೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಇದನ್ನೂ ಓದಿ : Computer Vision Syndrome - ಅತಿಯಾದ ಗ್ಯಾಜೆಟ್ ಗಳ ಬಳಕೆಈ ಕಾಯಿಲೆಗೆ ಕಾರಣ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.