Chips, Burger, Pizza ಪ್ರಿಯರಿಗೊಂದು ಮಹತ್ವದ ಸುದ್ದಿ, FSSAI ಹೊಸ ನಿಯಮ ನಿಮಗೂ ತಿಳಿದಿರಲಿ

FSSAI New Regulation: ಒಂದು ವೇಳೆ ನೀವೂ ಕೂಡ  ಹೆಚ್ಚು ಚಿಪ್ಸ್, ಪಿಜ್ಜಾ ಮತ್ತು  ಬರ್ಗರ್ ಗಳಂತಹ ಜಂಕ್ ಫುಡ್‌ಗಳನ್ನು ಸೇವಿಸುತ್ತಿದ್ದರೆ, ನಿಮ್ಮಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದ್ರೋಗ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. 

Written by - Nitin Tabib | Last Updated : Feb 10, 2021, 02:34 PM IST
  • ನೀವೂ ಕೂಡ ಚಿಪ್ಸ್, ಪಿಜ್ಜಾ, ಬರ್ಗರ್ ಪ್ರಿಯರೇ?
  • ಈ ಸುದ್ದಿ ಓದಿ
  • ಆಹಾರೋತ್ಪನ್ನಗಳಲ್ಲಿ ಟ್ರಾನ್ಸ್ ಫ್ಯಾಟ್ ನಿಯಂತ್ರಣಕ್ಕೆ FSSAI ಮಾಡಿದ್ದೇನು?
Chips, Burger, Pizza ಪ್ರಿಯರಿಗೊಂದು ಮಹತ್ವದ ಸುದ್ದಿ, FSSAI ಹೊಸ ನಿಯಮ ನಿಮಗೂ ತಿಳಿದಿರಲಿ  title=
FSSAI New Regulation (File Photo)

ನವದೆಹಲಿ: FSSAI New Regulation - ಒಂದು ವೇಳೆ ನೀವೂ ಕೂಡ  ಹೆಚ್ಚು ಚಿಪ್ಸ್, ಪಿಜ್ಜಾ ಮತ್ತು  ಬರ್ಗರ್ ಗಳಂತಹ ಜಂಕ್ ಫುಡ್‌ಗಳನ್ನು ಸೇವಿಸುತ್ತಿದ್ದರೆ, ನಿಮ್ಮಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದ್ರೋಗ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.  ಇದಕ್ಕೆ ದೊಡ್ಡ ಕಾರಣ ಎಂದರ ಟ್ರಾನ್ಸ್ ಫ್ಯಾಟ್ ಗಳು. ಕಂಪನಿಗಳು ತಮ್ಮ ಆಹಾರ ಮತ್ತು ಪಾನೀಯ ಉತ್ಪನ್ನಗಳಲ್ಲಿ ಇವುಗಳನ್ನು ಹೆಚ್ಚಾಗಿ ಬಳಸುತ್ತವೆ. ಆಹಾರ ಉತ್ಪನ್ನಗಳ ದೀರ್ಘ ಬಾಳಿಕೆ ಇವುಗಳ ಹಿಂದಿನ ಉದ್ದೇಶ.

ಆಹಾರೋತ್ಪನ್ನಗಳಲ್ಲಿ ಟ್ರಾನ್ಸ್ ಫ್ಯಾಟ್ ಮಿತಿ ನಿರ್ಧಾರ
ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ, ದೇಶದ ಆಹಾರ ನಿಯಂತ್ರಕ FSSAI ಮಾತ್ರ ಯಾವಾಗಲು ಈ ಕುರಿತು ಕಾಳಜಿವಹಿಸುತ್ತಲೇ ಇರುತ್ತದೆ. ಹೀಗಾಗಿ  Food Safety and Standards Authority of India (FSSAI) ಎಲ್ಲ ಆಧಾರ ಪದಾರ್ಥಗಳಲ್ಲಿ ಟ್ರಾನ್ಸ್ ಫ್ಯಾಟ್ ಮಿತಿಯನ್ನು ನಿಗದಿಪಡಿಸಿದೆ.

ಈ ಕುರಿತು FSSAI ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಟ್ರಾನ್ಸ್ ಫ್ಯಾಟ್ ಬಳಕೆಗೆ ಕಡಿವಾಣ ಹಾಕಲು ನೀತಿ ಸಿದ್ಧಪಡಿಸಿದ ಹಲವು ದೇಶಗಳ ಆಹಾರ ನಿಯಂತ್ರಕರ ಪಟ್ಟಿಗೆ FSSAI ಸೇರಿದೆ ಎಂದು ಹೇಳಿಕೊಂಡಿದೆ.

2021ರಿಂದ ಶೇ.3 ಕ್ಕಿಂತ ಹೆಚ್ಚು ಟ್ರಾನ್ಸ್ ಫ್ಯಾಟ್ ಬಳಕೆ ಇಲ್ಲ
FSSAI ಹೇಳಿಕೆಯ ಪ್ರಕಾರ 'ವಿಶ್ವಾದ್ಯಂತ ಸುಮಾರು 40 ದೇಶಗಳು ಟ್ರಾನ್ಸ್ ಫ್ಯಾಟ್ ಗೆ ಸಂಬಂಧಿಸಿದಂತೆ ನೀತಿಗಳನ್ನು ಹೊಂದಿವೆ. ಏಷ್ಯಾ ಕುರಿತು ಹೇಳುವುದಾದರೆ, ಥೈಲ್ಯಾಂಡ್ ಬಳಿಕ ಟ್ರಾನ್ಸ್ ಫ್ಯಾಟ್ ವಿರುದ್ಧ ಬೆಸ್ಟ್ ನೀತಿ ಸಿದ್ಧಪಡಿಸಿದ ದೇಶ ಎಂದರೆ ಅದು ಭಾರತ' ಎನ್ನಲಾಗಿದೆ. ಡಿಸೆಂಬರ್ 29, 2020 ಕ್ಕೆ ಹೊರಡಿಸಲಾಗಿರುವ ಒಂದು ನೋಟಿಸ್ ಪ್ರಕಾರ FSSAI, ಇಂಡಸ್ಟ್ರಿಯಲ್ TFA (Trans Fatty Acids) ಅನ್ನು ಎಲ್ಲ ಫ್ಯಾಟ್ಸ್ ಹಾಗೂ ಎಣ್ಣೆ ಪದಾರ್ಥಗಳಲ್ಲಿ ಅತ್ಯಧಿಕ ಶೇ.3 ಕ್ಕೆ ಸೀಮಿತಗೊಳಿಸಿದೆ. ಅಂದರೆ, ಅಂದರೆ, ಶೇ.3 ಕ್ಕಿಂತ ಹೆಚ್ಚು ಟ್ರಾನ್ಸ್ ಫ್ಯಾಟ್ ಬಳಕೆ ಇನ್ಮುಂದೆ ಮಾಡಲಾಗುವುದಿಲ್ಲ. ಈ ನೂತನ ನಿಯಮ ಜನವರಿ 2021ರಿಂದ ಜಾರಿಗೆ ಬಂದಿದೆ. 

2022 ರಲ್ಲಿ ಇದರ ಪ್ರಮಾಣ ಶೇ.2 ಕ್ಕೆ ಇಳಿಕೆ ಮಾಡಬೇಕು
ಇದಾದ ಬಳಿಕ ಮುಂದಿನ ವರ್ಷ ಅಂದರೆ 2022ರಲ್ಲಿ ಟ್ರಾನ್ಸ್ ಫ್ಯಾಟ್ ಮಿತಿಯನ್ನು ಶೇ.2ಕ್ಕೆ ಇಳಿಕೆ ಮಾಡಲಾಗುತ್ತಿದೆ. ಕಳೆದ ತಿಂಗಳವಷ್ಟೇ ಫುಡ್ ಸೇಫ್ಟಿ ಹಾಗೂ ಸ್ಟ್ಯಾಂಡರ್ಡ್ಸ್ (Prohibition and Restrictions on Sales)ನ ಎರಡನೇ ತಿದ್ದುಪಡಿ ಕಾನೂನು 2021ನ್ನು ಜಾರಿಗೆ ತರಲಾಗಿದೆ. ಇದರ ಪ್ರಕಾರ ಆಹಾರ ಪದಾರ್ಥಗಳಲ್ಲಿ ಬಳಕೆಯಾಗುವ ಎಣ್ಣೆ ಮತ್ತು ಫ್ಯಾಟ್ ಗಳಲ್ಲಿನ ಇಂಡಸ್ಟ್ರಿಯಲ್ ಟ್ರಾನ್ಸ್ ಫ್ಯಾಟಿ ಆಸಿಡ್ ಶೇ.2 ಕ್ಕಿಂತ ಹೆಚ್ಚಿಗೆ ಇರಬಾರದು ಎಂದು ಈ ನಿಯಮದಲ್ಲಿ ಹೇಳಲಾಗಿದೆ. ಆದರೆ, ಈ ನಿಯಮ ಜನವರಿ 1, 2022 ರಂದು ಜಾರಿಗೆ ಬರಲಿದೆ. ಸಾಮಾನ್ಯವಾಗಿ ಟ್ರಾನ್ಸ್ ಫ್ಯಾಟ್ ಗಳಲ್ಲಿ ಎರಡು ಪ್ರಕಾರಗಳಿವೆ

1. ನೈಸರ್ಗಿಕ ಟ್ರಾನ್ಸ್ ಫ್ಯಾಟ್ (Natural Trans Fat)
ಪ್ರಾಣಿಗಳಿಂದ ಸಿಗುವ ಹಾಲು, ಮೊಸರು, ತುಪ್ಪ, ಪನೀರ್ ಹಾಗೂ ಹಾಲಿಯಿಂದ ತಯಾರಿಸಲಾಗಿರುವ ಇತರೆ ಖಾದ್ಯಪದಾರ್ಥಗಳು ಮತ್ತು ಮಾಂಸ, ಮೊಟ್ಟೆಗಳಲ್ಲಿ ಈ ನೈಸರ್ಗಿಕ ಟ್ರಾನ್ಸ್ ಫ್ಯಾಟ್ ಕಂಡುಬರುತ್ತದೆ. ಒಂದು ವೇಳೆ ಉತ್ತಮ ಪ್ರಮಾಣದಲ್ಲಿ ಇದನ್ನು ಸೇವಿಸಿದರೆ ಇದು ಶರೀರಕ್ಕೆ ಲಾಭ ಕೊಡುತ್ತದೆ. ಆದರೆ, ವಿಪರೀತ ಪ್ರಮಾಣದಲ್ಲಿ ಸೇವಿಸಿದರೆ ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

ಇದನ್ನು ಓದಿ- Bird Flu Guidelines: ಪಕ್ಷಿ ಜ್ವರ ಕುರಿತು ಕೇಂದ್ರ ಸರ್ಕಾರದ ಎಚ್ಚರಿಕೆ

ಕೃತಕ ಟ್ರಾನ್ಸ್ ಫ್ಯಾಟ್ (Artificial Trans Fat)
ಇದು ಇಂಡಸ್ಟ್ರಿಗಳಲ್ಲಿ ಕೃತ್ರಿಮವಾಗಿ ಸಿದ್ಧಪಡಿಸಲಾಗುವ ಎಣ್ಣೆ, ಆಹಾರ, ಪ್ಯಾಕ್ಡ್ ಫುಡ್ ಗಳಲ್ಲಿ ಕಂಡುಬರುತ್ತದೆ. FSSAI ಈ ರೀತಿಯ ಕೃತಕ ಫ್ಯಾಟ್ ಮೇಲೆ ನಿಯಂತ್ರಣ ಹೇರುತ್ತಿದೆ. ಎಣ್ಣೆಯನ್ನು ಪದೇ ಪದೇ ಬಿಸಿ ಮಾಡುವುದರಿಂದಲೂ ಕೂಡ ಎಣ್ಣೆಯಲ್ಲಿ ಕೃತಕ ಟ್ರಾನ್ಸ್ ಫ್ಯಾಟ್ ಪ್ರಮಾಣ ಹೆಚ್ಚಾಗುತ್ತದೆ. ಇದೊಂದು ಅಪಾಯಕಾರಿ ಫ್ಯಾಟ್ ಆಗಿದ್ದು, ಇದು ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ.

ಇದನ್ನು ಓದಿ-Packaged Drinking Water: ಜನವರಿ 1 ರಿಂದ ಬದಲಾಗಲಿದೆ ನೀರಿನ ಬಾಟಲ್ ಗಳ ನಿಯಮ, Taste ಕೂಡ ಬದಲಾವಣೆ

ಇಂಡಸ್ಟ್ರಿಯಲ್ ಟ್ರಾನ್ಸ್ ಫ್ಯಾಟ್ ಏಕೆ ಒಳ್ಳೆಯದಲ್ಲ?
ಲಿಕ್ವಿಡ್ ವೆಜಿಟೆಬಲ್ ಆಯಿಲ್ ನಲ್ಲಿ ಹೈಡ್ರೋಜನ್ ಬೆರೆಸಿ ಈ ಇಂಡಸ್ಟ್ರಿಯಲ್ ಟ್ರಾನ್ಸ್ ಫ್ಯಾಟ್ ತಯಾರಿಸಲಾಗುತ್ತದೆ. ಸಾಮಾನ್ಯ ತಾಪಮಾನದಲ್ಲಿ ಆಹಾರ ಪದಾರ್ಥಗಳ ದೀರ್ಘ ಬಾಳಿಕೆಯನ್ನು ಇದು ಉತ್ತೇಜಿಸುತ್ತದೆ. ಅಂದರೆ ಆಹಾರ ಪದಾರ್ಥಗಳು ಬೇಗ ಹಾಳಾಗುವುದಿಲ್ಲ. ಒಂದು ವೇಳೆ ಶೇ.1ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಈ ಇಂಡಸ್ಟ್ರಿಯಲ್ ಟ್ರಾನ್ಸ್ ಫ್ಯಾಟ್ ಸೇವಿಸಿದರೆ, ಇದರಿಂದ ಹೃದ್ರೋಗ ಹಾಗೂ ಹೈ-ಕೊಲೆಸ್ಟ್ರಾಲ್ ಸಮಸ್ಯೆ ಎದುರಾಗುವ ಅಪಾಯ ಹೆಚ್ಚು.

ಇದನ್ನು ಓದಿ- ಇನ್ಮುಂದೆ ಖಾದ್ಯ ತೈಲದಲ್ಲಿಯೇ ಸಿಗಲಿವೆ Vitamin A ಹಾಗೂ D

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News