Diseases Can Ruin Married Life: ಸಂಗಾತಿಯೊಂದಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪರ್ಕ ಹೊಂದುವುದು ಪ್ರತಿಯೊಬ್ಬರ ವೈವಾಹಿಕ ಜೀವನದ ಒಂದು ಅತ್ಯುತ್ತಮ ಭಾವನೆಯಾಗಿದೆ. ಆದರೆ ಕೆಲವು ಕಾಯಿಲೆಗಳು ನಮ್ಮ ಈ ಸಂತೋಷವನ್ನು ಹಾಳುಮಾಡಬಹುದು. ಹೌದು, ಪ್ರತಿಯೊಬ್ಬರೂ ಇಂತಹ ಕಾಯಿಲೆಗಳಿಂದ ದೂರವಿರಲು ಬಯಸುತ್ತಾರೆ, ಆದರೆ ಈ ರೋಗಗಳು ಕೇವಲ ನಮ್ಮ  ಜೀವನವನ್ನೇ ಹಾಳು ಮಾಡುವುದಲ್ಲದೆ, ದಾಂಪತ್ಯ ಜೀವನಕ್ಕೂ ಕೂಡ ಮಾರಕವಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ಇಲ್ಲಿ ನಾವು ಅಂತಹ ಕೆಲವು ಕಾಯಿಲೆಗಳ ಬಗ್ಗೆ ಉಲ್ಲೇಖಿಸುತ್ತಿದ್ದೇವೆ, ಇಂತಹ ಕಾಯಿಲೆಗಳನ್ನು ನೀವು ಮರೆತೂ ಕೂಡ ನಿರ್ಲಕ್ಷಿಸಬಾರದು, ಸಮಯ ಇರುವಾಗಲೇ ಅವುಗಳಿಗೆ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.


COMMERCIAL BREAK
SCROLL TO CONTINUE READING

ಈ ಕಾಯಿಲೆಗಳು ವೈವಾಹಿಕ ಜೀವನವನ್ನು ಹಾಳುಮಾಡುತ್ತವೆ
ಮಧುಮೇಹ ರೋಗ

ಮಧುಮೇಹ ಕಾಲಾನಂತರದಲ್ಲಿ ರಕ್ತನಾಳಗಳು ಮತ್ತು ನರಗಳನ್ನು ಹಾನಿಗೊಳಿಸುತ್ತದೆ. ಇದು ಲೈಂಗಿಕ ಅಂಗಗಳಿಗೆ ರಕ್ತದ ಹರಿವಿನ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ಗುಪ್ತಾಂಗದ ಸಮಸ್ಯೆ ಹಾಗೂ ಅಕಾಲಿಕ ಸ್ಖಲನದ ಸಮಸ್ಯೆ ಎದುರಾಗುತ್ತವೆ. ಮತ್ತೊಂದೆಡೆ, ಮಹಿಳೆಯರಲ್ಲಿ ಬಯಕೆಯ ಕೊರತೆ, ಗುಪ್ತಾಂಗದ ಶುಷ್ಕತೆ ಮುಂತಾದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ, ನೀವು ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ನಿಮ್ಮ ವೈವಾಹಿಕ ಜೀವನದ ಸಮಸ್ಯೆಗಳನ್ನು ನೀವು ನಿವಾರಿಸಬಹುದು.

ಹೃದಯರೋಗ
ನೀವು ಯಾವುದೇ ಹೃದಯ ಸಂಬಂಧಿ ಕಾಯಿಲೆಯನ್ನು ಹೊಂದಿದ್ದರೆ ಅದು ನಿಮ್ಮ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದರಿಂದ ಲೈಂಗಿಕ ಸಮಸ್ಯೆಗಳು ಉಂಟಾಗಬಹುದು, ಇದರ ಹೊರತಾಗಿ ಅಧಿಕ ರಕ್ತದೊತ್ತಡ ಸಮಸ್ಯೆಯಲ್ಲಿ ತೆಗೆದುಕೊಳ್ಳಲಾಗುವ ಕೆಲ  ಔಷಧಿಗಳು ಸಹ ಸಮಸ್ಯೆಗಳನ್ನು ಉಂಟುಮಾಡಬಹುದು. ಮತ್ತೊಂದೆಡೆ, ಒಂದು ವೇಳೆ ನೀವು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದು, ದೈಹಿಕ ಸಂಬಂಧ  ಬೆಸೆಯುವುದರಿಂದ ನಿಮಗೆ ಅಪಾಯವಿದೆ ಎಂಬ ಭಯ ನಿಮ್ಮನ್ನು ಕಾಡುತ್ತಿದ್ದರೆ, ನೀವು ಖಂಡಿತವಾಗಿಯೂ  ನಿಮ್ಮ ವೈದ್ಯರೊಂದಿಗೆ ಮಾತನಾಡಿ.


ಇದನ್ನೂ ಓದಿ-Pulses Side Effects: ಅಗತ್ಯಕ್ಕಿಂತ ಹೆಚ್ಚು ಬೇಳೆ ಸೇವಿಸುತ್ತಿರಾ? ಈಗಲೇ ಎಚ್ಚೆತ್ತುಕೊಳ್ಳಿ

ಖಿನ್ನತೆ
ನಿಮ್ಮ ಮನಸ್ಸು ಮತ್ತು ದೇಹವು ಒಟ್ಟಿಗೆ ಹೋಗುತ್ತವೆ. ಹತಾಶೆಯ ಒಂದು ಲಕ್ಷಣವು ನಿಮಗೆ ಬಯಕೆಯ ಕೊರತೆಯನ್ನು ತರಬಹುದು. ನೀವು ಖಿನ್ನತೆಗೆ ಒಳಗಾಗಿದ್ದರೆ, ಅದರ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ.


ಇದನ್ನೂ ಓದಿ-Fruit Leaves: ಹಲವು ಮಾರಣಾಂತಿಕ ಕಾಯಿಲೆಗಳಿಗೆ ರಾಮಬಾಣ ಈ ಗಿಡಗಳ ಎಲೆಗಳು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.