Side Effects Of Banana: ಬಾಳೆಹಣ್ಣು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದು ತಿನ್ನಲು ಸುಲಭ ಮತ್ತು ಇದು ಜೇಬಿಗೂ ಕೂಡ ಹೊರೆಯಾಗುವುದಿಲ್ಲ
Side Effects Of Banana: ಬಾಳೆಹಣ್ಣು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದು ತಿನ್ನಲು ಸುಲಭ ಮತ್ತು ಇದು ಜೇಬಿಗೂ ಕೂಡ ಹೊರೆಯಾಗುವುದಿಲ್ಲ, ಆದ್ದರಿಂದ ಹೆಚ್ಚಿನ ಜನರು ಬಾಳೆಹಣ್ಣುಗಳನ್ನು ತಿನ್ನಲು ಬಯಸುತ್ತಾರೆ. ಬಾಳೆಹಣ್ಣು ಪ್ರೋಟೀನ್, ವಿಟಮಿನ್ ಮತ್ತು ಫೈಬರ್ ನಿಂದ ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳನ್ನು ಹೊಂದಿದೆ.
ಇದನ್ನೂ ಓದಿ-Winter Season Tips: ಚಳಿಗಾಲದಲ್ಲಿ ಮರೆತೂ ಕೂಡ ಫ್ರಿಡ್ಜ್ ನಲ್ಲಿ ತರಕಾರಿಗಳನ್ನು ಇಡಬೇಡಿ, ಕಾರಣ ಇಲ್ಲಿದೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಶೀತವಿರುವಾಗ ಮತ್ತು ಚಳಿಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ಆರೋಗ್ಯ ಹಾಳಾಗುತ್ತದೆ. ಇದು ತಂಪಾದ ಗುಣಧರ್ಮ ಹೊಂದಿದೆ ಮತ್ತು ಇದನ್ನು ತಿನ್ನುವುದರಿಂದ ಕೆಮ್ಮು ಮತ್ತು ಶೀತದ ಸಮಸ್ಯೆ ಹೆಚ್ಚಾಗುತ್ತದೆ.
ಬಾಳೆಹಣ್ಣು ತಂಪು ಗುಣಧರ್ಮ ಹೊಂದಿರುವ ಕಾರಣ ಒಂದು ವೇಳೆ ನಿಮಗೆ ಅಸ್ತಮಾದಂತಹ ಉಸಿರಾಟದ ಸಮಸ್ಯೆ ಇದ್ದರೆ, ನೀವು ಬಾಳೆಹಣ್ಣು ತಿನ್ನುವುದನ್ನು ತಪ್ಪಿಸಬೇಕು. ಬಾಳೆಹಣ್ಣು ತಿಂದರೆ ಕೆಮ್ಮಿನ ಸಮಸ್ಯೆಯೂ ಹೆಚ್ಚಾಗಬಹುದು.
ಬಾಳೆಹಣ್ಣಿನ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಾಗಿದೆ. ನೀವು ಮಧುಮೇಹ ಹೊಂದಿದ್ದರೆ, ನೀವು ಮಾಗಿದ ಬಾಳೆಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಬಾಳೆಹಣ್ಣು ತಿಂದರೆ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುತ್ತದೆ.
ಕೆಲವರಿಗೆ ಬಾಳೆಹಣ್ಣಿನಿಂದ ಅಲರ್ಜಿ ಇರುತ್ತದೆ. ಬಾಳೆಹಣ್ಣಿನಿಂದ ತುರಿಕೆ ಉಂಟಾಗುತ್ತಿದ್ದರೆ, ಬಾಳೆಹಣ್ಣುಗಳನ್ನು ತಿನ್ನಬಾರದು. ಬಾಳೆಹಣ್ಣು ತಿನ್ನುವುದರಿಂದ ಅಲರ್ಜಿ ಇರುವವರು ತುರಿಕೆ, ದದ್ದುಗಳು ಮತ್ತು ಚರ್ಮದ ದದ್ದುಗಳ ಸಮಸ್ಯೆಗಳು ಬರಬಹುದು.
ಬಾಳೆಹಣ್ಣನ್ನು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಆದರೆ ಹೊಟ್ಟೆಯ ತೊಂದರೆ ಇದ್ದಾರೆ, ಬಾಳೆಹಣ್ಣು ತಿನ್ನುವುದರಿಂದ ಹಾನಿಯಾಗುತ್ತದೆ. ಬಾಳೆಹಣ್ಣಿನಲ್ಲಿ ಕ್ಯಾಲ್ಸಿಯಂ ಇದ್ದು ಅದು ಹೊಟ್ಟೆಯನ್ನು ಬಿಗಿಗೊಳಿಸುತ್ತದೆ.