Health Tips: ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ..?
Best Time To Drink Coffee: ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಆಮ್ಲದ ಪ್ರಮಾಣ ಹೆಚ್ಚಾದಾಗ, ಎದೆಯಲ್ಲಿ ಉರಿಯುಂಟಾಗಬಹುದು. ಹೀಗಾಗಿ ಪ್ರತಿ ಬಾರಿ ಸ್ವಲ್ಪ ಪ್ರಮಾಣದ ಕಾಫಿ ಕುಡಿಯುವುದನ್ನು ರೂಡಿಸಿಕೊಳ್ಳುವುದು ಉತ್ತಮ.
ನವದೆಹಲಿ: ಕಾಫಿ ಅಂದ್ರೆ ಯಾರಿಗ್ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ಬೆಳ್ಳಂಬೆಳಗ್ಗೆ ಕಾಫಿ ಸವಿಯಲು ಹೊತೊರೆಯುತ್ತಾರೆ. 1 ಕಪ್ ಕಾಫಿ ಸೇವಿಸಿದ್ರೆ ದಿನದ ಎಲ್ಲಾ ಆಯಾಸ ದೂರವಾಗುತ್ತದೆ. ಕಾಫಿ ನಿಮಗೆ ಉತ್ತಮ ಎನರ್ಜಿ ನೀಡುತ್ತದೆ. ಹೀಗಾಗಿ ಬಹುತೇಕ ಜನರಿಗೆ ಕಾಫಿ ಕುಡಿಯುವ ರೂಢಿಯಿರುತ್ತದೆ. 1 ಕಪ್ ಕಾಫಿ ಕುಡಿದರೆ ಸಾಕು ನಮ್ಮ ಮೈಂಡ್ ಫ್ರೆಶ್ ಆಗುತ್ತದೆ.
ಬಹುತೇಕ ಜನರು ಕಾಫಿ ಕುಡಿಯುವುದನ್ನೇ ವ್ಯಸನ ಮಾಡಿಕೊಂಡಿರುತ್ತಾರೆ. ಎಷ್ಟು ಬೇಕೋ ಅಷ್ಟು ಕಾಫಿ ಕುಡಿದರೆ ತೊಂದರೆಯಿಲ್ಲ. ಯಾವಾಗ ಬೇಕಾದಾಗ, ಅತಿಯಾಗಿ ಕಾಫಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಸರಿಯಾದ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ. ಕಾಫಿಯಲ್ಲಿರುವ ಕೆಫೀನ್ ಅಂಶವು ನಾವು ಸೇವಿಸುವ ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತದೆ, ಹೀಗಾಗಿ ಊಟ ಮಾಡಿದ ತಕ್ಷಣ ಕಾಫಿ ಕುಡಿಯುವುದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಆರೋಗ್ಯದ ಬಗ್ಗೆ ಗಮನಹರಿಸದಿದ್ದರೆ ಮುಂದೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಕಾಫಿ ರುಚಿ ಆನಂದಿಸಲು ನೀವು ಅನುಸರಿಸಬೇಕಾದ ಕೆಲವು ಸಲಹೆಗಳು ಇಲ್ಲಿವೆ.
ಇದನ್ನೂ ಓದಿ: Health Tips: ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ ಈ ತಪ್ಪುಗಳನ್ನು ಮಾಡಬೇಡಿ
ಕಾಫಿ ಕುಡಿಯಲು ಉತ್ತಮ ಸಮಯ ಯಾವುದು..?
ಬಹುತೇಕರಿಗೆ ಬೆಳಗ್ಗೆ ಎದ್ದಕೂಡಲೇ ಕಾಫಿ ಸೇವಿಸುವ ರೂಢಿಯಿರುತ್ತದೆ. ಆದರೆ ಬೆಳಗ್ಗೆ ಎದ್ದಕೂಡಲೇ ಕಾಫಿ ಸೇವಿಸಬಾರದು. ಬೆಳಗ್ಗೆ 9 ರಿಂದ 11.30ರೊಳಗೆ ಕಾಫಿ ಕುಡಿಯುವುದು ಉತ್ತಮ. ಪ್ರತಿದಿನ 1-3 ಕಪ್ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಏನೂ ತೊಂದರೆಯಿಲ್ಲ. ಆದರೆ ಹಲವು ಕಪ್ ಕಾಫಿ ಸೇವನೆಯು ನಿಮ್ಮ ಆರೋಗ್ಯಕ್ಕೆ ಸಮಸ್ಯೆಯನ್ನುಂಟು ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿರುವಾಗ ದೇಹದಲ್ಲಿ ಕಾರ್ಟಿಸೋಲ್ ಪ್ರಮಾಣ ಹೆಚ್ಚಾಗಿರುತ್ತದೆ. ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆ ನಿರ್ವಹಿಸುವಲ್ಲಿ ಕಾರ್ಟಿಸೋಲ್ ಕಾರಣವಾಗುತ್ತದೆ. ಕಾರ್ಟಿಸೋಲ್ ಉತ್ಪಾದನೆಗೆ ಕಾಫಿಯಲ್ಲಿರುವ ಕೆಫೀನ್ ಅಡ್ಡಿಪಡಿಸುತ್ತದೆ.
ಹೀಗಾಗಿ ಕಾರ್ಟಿಸೋಲ್ ಮಟ್ಟ ಹೆಚ್ಚಿರುವ ಸಮಯದಲ್ಲಿ ಕಾಫಿ ಕುಡಿಯುವುದು ನಿಮ್ಮ ದೇಹಕ್ಕೆ ಒಳ್ಳೆಯದಲ್ಲ. ಕಾರ್ಟಿಸೋಲ್ ತಗ್ಗಿದ ವೇಳೆ ಅಥವಾ ಮಧ್ಯಾಹ್ನದ ಸಮಯ(ಮಧ್ಯಾಹ್ನ 1 ರಿಂದ ಸಂಜೆ 5ರೊಳಗೆ)ದಲ್ಲಿ ಕಾಫಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ನೀವು ಕಾಫಿ ಕುಡಿಯಬಾರದು.
ಇದನ್ನೂ ಓದಿ: Diabetes: ಕೆಲವೇ ದಿನಗಳಲ್ಲಿ ಮಧುಮೇಹ ನಿಯಂತ್ರಕ್ಕೆ ಬೆಳಗ್ಗೆ ಈ ಒಂದು ಕೆಲಸ ಮಾಡಿ ಸಾಕು!
ಸಲ್ಪ ಸಲ್ಪವೇ ಕಾಫಿ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಕಾಫಿಯ ಕೆಫೀನ್ ಕುಡಿಯುವ ಅರ್ಧ ಘಂಟೆಯಿಂದ 1 ಗಂಟೆಯೊಳಗೆ ರಕ್ತಸಂಚಾರ ಅಧಿಕವಾಗಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಆಮ್ಲದ ಪ್ರಮಾಣ ಹೆಚ್ಚಾದಾಗ, ಎದೆಯಲ್ಲಿ ಉರಿಯುಂಟಾಗಬಹುದು. ಹೀಗಾಗಿ ಪ್ರತಿ ಬಾರಿ ಸ್ವಲ್ಪ ಪ್ರಮಾಣದ ಕಾಫಿ ಕುಡಿಯುವುದನ್ನು ರೂಡಿಸಿಕೊಳ್ಳುವುದು ಉತ್ತಮ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.