Health Tips: ಗರಿಕೆ ಸಣ್ಣ ಹುಲ್ಲೆಂದು ಕಡೆಗಣಿಸಬೇಡಿ ಅದರಲ್ಲಿಯು ಅಡಗಿದೆ ಔಷಧಿ ಗುಣ

Life Style: ಗರಿಕೆ ಹುಲ್ಲಿನ್ನು ಹೆಚ್ಚಿನವರು ಇದನ್ನು ಸಂಪ್ರಾದಾಯಿಕ ಪೂಜೆಗಾಗಿ ಮಾತ್ರ ಬಳಸಲಾಗುತ್ತದೆ ಎಂದೇ ಭಾವಿಸಿರುತ್ತಾರೆ. ಆದರೆ ಅದನ್ನು ಹೊರತು ಪಡಿಸಿ ನೋಡುವುದಾದರೇ ಗರಿಕೆ ಹುಲ್ಲಿನಲ್ಲಿ ಅನೇಕ ರೀತಿಯ ಔಷಧಿ ಗುಣ ಹೊಂದಿದೆ. 

Written by - Zee Kannada News Desk | Last Updated : Apr 21, 2023, 07:09 PM IST
  • ಗರಿಕೆ ಹುಲ್ಲಿನಲ್ಲಿ ಅನೇಕ ರೀತಿಯ ಔಷಧಿ ಗುಣ ಹೊಂದಿದೆ
  • ಆಯುರ್ವೇದ ಔಷಧ ವಿಧಾನಗಳಲ್ಲಿ ವಿಶೇಷವಾಗಿ ಬಳಕೆ
  • ಆರೋಗ್ಯ ವರ್ಧಕವಾಗಿ ಗರಿಕೆ
Health Tips: ಗರಿಕೆ ಸಣ್ಣ ಹುಲ್ಲೆಂದು ಕಡೆಗಣಿಸಬೇಡಿ ಅದರಲ್ಲಿಯು ಅಡಗಿದೆ ಔಷಧಿ ಗುಣ title=

Burva Benefits: ಗರಿಕೆ ಹುಲ್ಲು ಮನೆಯ ಮುಂದೆ ಹಾಗೂ ಬಯಲು ಪ್ರದೇಶದಲ್ಲಿ ಹೇರಳವಾಗಿರುತ್ತದೆ. ಗರಿಕೆ ಎಂದೊಡನೆ ಮೊದಲು ನೆನಪಿಗೆ ಬರುವುದು ಗಣಪತಿ ಪೂಜೆ ವೇಳೆ ಬಳಸಲಾಗುತ್ತೆಂದು. ಗಣೇಶನ ಹಬ್ಬ ಆರಂಭ ಆದಗಿನಿಂದ ಮುಗಿಯುವವರೆಗೂ ಗರಿಕೆ ಹುಲ್ಲಿನದ್ದೇ ಸಂಭ್ರಮ.. ಹೆಚ್ಚಿನವರು ಇದನ್ನು ಸಂಪ್ರಾದಾಯಿಕ ಪೂಜೆಗಾಗಿ ಮಾತ್ರ ಬಳಸಲಾಗುತ್ತದೆ ಎಂದೇ ಭಾವಿಸಿರುತ್ತಾರೆ. ಆದರೆ ಅದನ್ನು ಹೊರತು ಪಡಿಸಿ ನೋಡುವುದಾದರೇ ಗರಿಕೆ ಹುಲ್ಲಿನಲ್ಲಿ ಅನೇಕ ರೀತಿಯ ಔಷಧಿ ಗುಣ ಹೊಂದಿದೆ. 

ಇದರಲ್ಲಿ ಕ್ಯಾಲ್ಸಿಯಂ, ರಂಜಕ, ಫೈಬರ್, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಹೇರಳವಾಗಿದೆ.  ಇದನ್ನು  ಆಯುರ್ವೇದ ಔಷಧ ವಿಧಾನಗಳಲ್ಲಿ ವಿಶೇಷವಾಗಿ ಬಳಸಲಾಗುತ್ತದೆ. ಗರಿಕೆ ಹುಲ್ಲಿನಲ್ಲಿ ವಿಶೇಷವಾದ ಔಷಧೀಯ ಗುಣ ಇರುವುದರಿಂದ ಸಾಕಷ್ಟು ರೋಗಗಳಿಗೆ ಮನೆ ಮದ್ದಾಗಿ ಬಳಸಲಾಗುತ್ತದೆ. 

ಇದನ್ನೂ ಓದಿ: ಕೊಲೆಸ್ಟ್ರಾಲ್ ಸಮಸ್ಯೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ ಈ ಒಂದು ಹಣ್ಣು!

ಇದು ಅನೇಕ ರೀತಿಯ ರೋಗ ನಿಯಂತ್ರಿಸುವುದರಿಂದ  ಆರೋಗ್ಯ ವರ್ಧಕ ಎಂದು ಹೇಳಲಾಗುತ್ತದೆ. ಗರಿಕೆ ರಸ ಸೇವನೆಯಿಂದ ಜೊತೆಗೆ ಮೈಬಣ್ಣ ಸುಧಾರಣೆ ಜೊತೆಗೆ ರಕ್ತವನ್ನು ಶುದ್ಧೀಕರಿಸಲು ಸಹಕರಿಸುತ್ತದೆ. 

ಇದನ್ನೂ ಓದಿ: Skin Care: ಬೇವಿನ ಜೊತೆ ಈ 3 ವಸ್ತುಗಳನ್ನು ಬೆರೆಸಿ ಮುಖಕ್ಕೆ ಹಚ್ಚಿದರೆ ಒಂದೇ ವಾರದಲ್ಲಿ ಬೆಳ್ಳಗಾಗುವುದು ತ್ವಚೆ!

ಗರಿಕೆಯಲ್ಲಿ ಸೈನೊಡಾನ್ ಡ್ಯಾಕ್ಟಿಲೋನ್ ಅಂಶವು  ಮಧುಮೇಹ ಮತ್ತು ಪಿಸಿಓಎಸ್‌ ನಲ್ಲಿ ರಕ್ತದ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ನಿಯಂತ್ರಿಸುತ್ತದೆ. ಹಾಗೂ ಆಗಾಗ ಇದರ ರಸ ಸೇವಿಸುವುದರಿಂದ  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಗಾಯ ಸೋಂಕು ಸೇರಿ ಹಲವು ಚರ್ಮ ರೋಗಗಳ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ದೇಹ ನಿರ್ವಿಷವಾಗುತ್ತದೆ. ಹಲ್ಲಿನ ಆರೋಗ್ಯ ಕಾಪಾಡುತ್ತದೆ. ಬಾಯಿ ಹುಣ್ಣು, ಗಾಯದ ಸಮಸ್ಯೆ ತಡೆಯುತ್ತದೆ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News