ನವದೆಹಲಿ: ಜಾಗತಿಕವಾಗಿ ತಂಬಾಕು ಸೇವನೆಯು ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ತಿಳಿದುಬಂದಿದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಈ ವಿಷಯದ ಬಗ್ಗೆ ಜಾಗೃತಿಮೂಡಿಸುವ ಸಲುವಾಗಿ ಪ್ರತಿವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಧೂಮಪಾನ ತಂಬಾಕು ಸೇವನೆಯ ಸಾಮಾನ್ಯ ರೂಪವಾಗಿದೆ. ಇದು ದೀರ್ಘಾವಧಿಯ ಪ್ರತಿಕೂಲ ಆರೋಗ್ಯ ಪರಿಣಾಮ ಹೊಂದಿರುವ ವ್ಯಸನಕಾರಿ ಅಭ್ಯಾಸವಾಗಿದೆ. ಸಿಗರೆಟ್‍ ತಯಾರಿಸಲು ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಚಟವಾಗಿ ಮಾರ್ಪಟ್ಟರೆ ವ್ಯಕ್ತಿಯ ಜೀವಕ್ಕೆ ಕುತ್ತುಂಟಾಗುತ್ತದೆ.


COMMERCIAL BREAK
SCROLL TO CONTINUE READING

ಇಂದು ಜಗತ್ತಿನಲ್ಲಿ ಕೋಟ್ಯಂತರ ಜನರು ಸಿಗರೇಟ್ ಸೇದುವ ದುಶ್ಚಟಕ್ಕೆ ದಾಸರಾಗಿದ್ದಾರೆ. ಒಮ್ಮೆ ಸಿಗರೇಟ್ ಸೇದುವ ಚಟ ವ್ಯಕ್ತಿಗೆ ಅಂಟಿಕೊಂಡರೆ ಅದರಿಂದ ಹೊರಬರುವುದು ತುಂಬಾ ಕಷ್ಟ. ಹೀಗಾಗಿ ಆದಷ್ಟು ಧೂಮಪಾನದಿಂದ ದೂರವಿರಬೇಕು. ಧೂಮಪಾನ ತ್ಯಜಿಸಲು ಹತ್ತಾರು ಮಾರ್ಗಗಳಿವೆ. ಈ ಹಾನಿಕಾರಕ ಅಭ್ಯಾಸವನ್ನು ತೊಡೆದುಹಾಕಲು ಪಾಲಿಸಬೇಕಾದ ಸಿಂಪಲ್ ಸಲಹೆಗಳು ಇಲ್ಲಿವೆ ನೋಡಿ.  


ಇದನ್ನೂ ಓದಿ: Diabetes: ಮಧುಮೇಹ ರೋಗಿಗಳಿಗೆ ಲವಂಗ ಪ್ರಯೋಜನಕಾರಿಯೇ? ಬಳಸುವ ಮೊದಲು ಸತ್ಯ ತಿಳಿದುಕೊಳ್ಳಿ


ಅಭ್ಯಾಸ ಕಡಿಮೆ ಮಾಡುತ್ತಾ ಬನ್ನಿ


ನಿಮಗೆ ಸಿಗರೇಟ್ ಸೇದುವ ಚಟವಿದ್ದರೆ ಒಂದೇ ದಿನಕ್ಕೆ ಬಿಟ್ಟುಬಿಡಬೇಡಿ. ನಿಧಾನವಾಗಿ ಪ್ರತಿದಿನ ಸಿಗರೇಟ್ ಸೇದುವುದನ್ನು ಕಡಿಮೆ ಮಾಡುತ್ತಾ ಬನ್ನಿ. ನಾನು ಏಕೆ ಸಿಗರೇಟ್ ಸೇದಬೇಕು..? ಅದರಿಂದ ನನಗೆ ಏನು ಪ್ರಯೋಜನವಿದೆ? ಎಂಬ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಕೇಳಿಕೊಳ್ಳಿ. ದಿನದಿಂದ ದಿನಕ್ಕೆ ಸಿಗರೇಟ್ ಸೇದುವ ಅಭ್ಯಾಸ ಕಡಿಮೆ ಮಾಡುತ್ತಾ ಬಂದು ಕೊನೆಗೊಂದು ದಿನ ಸಂಪೂರ್ಣವಾಗಿ ನಿಲ್ಲಿಸಿಬಿಡಿ.


ಬೇರೆ ಕೆಲಸದಲ್ಲಿ ತೊಡಗಿಸಿಕೊಳ್ಳಿ


ನಿಮಗೆ ಸಿಗರೇಟ್ ಸೇದುವ ಅಭ್ಯಾಸ ಬಿಡಬೇಕೆಂದರೆ ಮೊದಲು ಮಾಡಬೇಕಾಗಿರುವ ಕೆಲಸ ಬೇರೆ ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳುವುದು. ನಿಮ್ಮನ್ನು ನೀವು ಬೇರೆ ಕೆಲಸದಲ್ಲಿ ತೊಡಗಿಸಿಕೊಂಡರೆ ಸಿಗರೇಟ್ ಸೇದುವ ನಿಮ್ಮ ಗಮನ ಬೇರೆಕಡೆ ಹರಿಯುತ್ತದೆ. ಹೀಗಾಗಿ ಮಾಡುತ್ತಾ ಸಂಪೂರ್ಣವಾಗಿ ಸಿಗರೇಟ್ ಸೇದುವ ಅಭ್ಯಾಸದಿಂದ ಮುಕ್ತಿ ಪಡೆಯಬಹುದು.


ಲಘು ಆಹಾರ & ಚೂಯಿಂಗ್ ಗಮ್ ಜಗಿಯಿರಿ


ತಂಬಾಕಿನಲ್ಲಿ ನಿಕೋಟಿನ್ ಎಂಬ ವಿಷಕಾರಿ ಪದಾರ್ಥವಿದೆ. ಇದು ನಿಮ್ಮ ದೇಹ ಸೇರಿದರೆ ಮುಂದೆ ದೊಡ್ಡ ಅಪಾಯಗಳು ಎದುರಾಗುತ್ತವೆ. ಹೀಗಾಗಿ ನೀವು ಧೂಮಪಾನದಿಂದ ದೂರವಿರಲು ದಿನನಿತ್ಯ ಲಘು ಆಹಾರ, ಹಣ್ಣುಗಳು ಅಥವಾ ಚೂಯಿಂಗ್ ಗಮ್ ಜಗಿಯುತ್ತೀರಿ.


Mens Health Tips : ಪುರುಷರೆ ದೈಹಿಕ ದೌರ್ಬಲ್ಯಕ್ಕೆ ತಪ್ಪದೆ ಸೇವಿಸಿ ಕೇಸರಿ!


ಪ್ರತಿನಿತ್ಯ ವಾಯಾಮ ಮಾಡಿ


ಪ್ರತಿದಿನ ಮಾಡುವ ವ್ಯಾಯಾಮವು ಒತ್ತಡ ನಿಭಾಯಿಸಲು ಮತ್ತು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗುತ್ತದೆ. ಜಾಗಿಂಗ್ ಅಥವಾ ಧೀರ್ಘ ನಡಿಗೆಯಿಂದ ನಿಮ್ಮ ಆರೋಗ್ಯವು ಸುಧಾರಿಸುತ್ತದೆ.


ಮಧ್ಯಪಾನದಂತಹ ಚಟಗಳನ್ನು ನಿಲ್ಲಿಸಿ


ನೀವು ಧೂಮಪಾನ ತ್ಯಜಿಸಿ ಮಧ್ಯಪಾನವನ್ನು ಮುಂದುವರೆಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಮಧ್ಯಪಾನ, ಅತಿಯಾಗಿ ಕಾಫಿ ಸೇವಿಸುವುದು, ತಂಬಾಕು ಸೇವನೆ ಮುಂತಾದ ಕೆಟ್ಟ ಚಟಗಳಿಂದ ದೂರವಿರಿ


ಮತ್ತೆ ಮತ್ತೆ ಪ್ರಯತ್ನಿಸಿರಿ


ಅನೇಕರು ಕೆಲವು ದಿನಗಳ ಕಾಲ ಧೂಮಪಾನ ತ್ಯಜಿಸುತ್ತಾರೆ. ಮತ್ತೆ ಆ ಚಟಕ್ಕೆ ಮರಳುತ್ತಾರೆ. ಇದರಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹೀಗಾಗಿ ನೀವು ಧೂಮಪಾನ ತ್ಯಜಿಸುವುದರ ಬಗ್ಗೆ ಮತ್ತೆ ಮತ್ತೆ ಪ್ರಯತ್ನಿಸಿರಿ. ಒಂದು ದಿನ ಸಂಪೂರ್ಣವಾಗಿ ನಿಲ್ಲಿಸಿಬಿಡಿ. ಇದರಿಂದ ನಿಮ್ಮ ಆರೋಗ್ಯ ಸುಧಾರಣೆಯಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.