ತೂಕ ಕಳೆದುಕೊಳ್ಳಲು ಕಡಿಮೆ ತಿನ್ನಬೇಕು ಎಂದೇನಿಲ್ಲ !ಬೆಳಗಿನ ಉಪಹಾರದಲ್ಲಿ ಇದನ್ನು ಸೇವಿಸಿ ಸಾಕು !
Healthy breakfast for weight loss: ಕೆಲವರು ತೂಕ ಇಳಿಸಿಕೊಳ್ಳಲು ಬೆಳಗಿನ ಉಪಹಾರವನ್ನೂ ಸ್ಕಿಪ್ ಮಾಡುತ್ತಾರೆ. ಆದರೆ, ಹೀಗೆ ಮಾಡುವುದರಿಂದ ದೈಹಿಕವಾಗಿ ದುರ್ಬಲರಾಗುತ್ತಾರೆ.ತೂಕ ಕಳೆದುಕೊಳ್ಳಬೇಕು ಎಂದರೆ ಅನ್ನ ಆಹಾರ ಬಿಡಲೇ ಬೇಕು ಎಂದೇನಿಲ್ಲ.
Healthy breakfast for weight loss : ನಮ್ಮ ದಿನಚರಿಯಲ್ಲಿ ಬೆಳಗಿನ ಉಪಹಾರ ಅತ್ಯಂತ ಪ್ರಮುಖವಾಗಿರುತ್ತದೆ. ನಾವು ಬೆಳಗ್ಗೆ ಏನು ತಿನ್ನುತ್ತೇವೆ ಎನ್ನುವುದರ ಮೇಲೆಯೇ ನಮ್ಮ ಆರೋಗ್ಯದ ಗುಟ್ಟು ನಿಂತಿರುತ್ತದೆ. ಬೆಳಿಗ್ಗೆ ಏನು ತಿನ್ನುತ್ತೆವೆಯೋ ಅದರಿಂದ ಇಡೀ ದಿನದ ಶಕ್ತಿ ದೇಹಕ್ಕೆ ಸಿಗುತ್ತದೆ. ಬೆಳಗಿನ ಉಪಾಹಾರ ಪ್ರೋಟೀನ್, ಆರೋಗ್ಯಕರ ಕಾರ್ಬೋಹೈಡ್ರೇಟ್ , ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ದೇಹಕ್ಕೆ ಪೋಷಣೆಯನ್ನು ನೀಡುವುದಲ್ಲದೆ ದಿನವಿಡೀ ಆರೋಗ್ಯವಾಗಿರುವಂತೆ ಮಾಡುತ್ತದೆ.
ಕಡಿಮೆ ಕ್ಯಾಲೋರಿ ಆಹಾರ :
ಕೆಲವರು ತೂಕ ಇಳಿಸಿಕೊಳ್ಳಲು ಬೆಳಗಿನ ಉಪಹಾರವನ್ನೂ ಸ್ಕಿಪ್ ಮಾಡುತ್ತಾರೆ. ಆದರೆ, ಹೀಗೆ ಮಾಡುವುದರಿಂದ ದೈಹಿಕವಾಗಿ ದುರ್ಬಲರಾಗುತ್ತಾರೆ.ತೂಕ ಕಳೆದುಕೊಳ್ಳಬೇಕು ಎಂದರೆ ಅನ್ನ ಆಹಾರ ಬಿಡಲೇ ಬೇಕು ಎಂದೇನಿಲ್ಲ. ಬೆಳಗಿನ ಉಪಹಾರದಲ್ಲಿ ಕಡಿಮೆ ಕ್ಯಾಲೋರಿ ಆಹಾರ ಸೇವಿಸುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. ಹಾಗಾಗಿ ಬೆಳಗಿನ ಉಪಾಹಾರದಲ್ಲಿ 5 ಭಾರತೀಯ ಭಕ್ಷ್ಯಗಳನ್ನು ಪ್ರಯತ್ನಿಸಬಹುದು.
ಇದನ್ನೂ ಓದಿ : ಬೇಸಿಗೆಯಲ್ಲಿ ಕಬ್ಬಿನಹಾಲು ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಅದ್ಭುತ ಪ್ರಯೋಜನಗಳಿವು!
ಹೆಸರುಬೇಳೆ ದೋಸೆ :
ಪ್ರೋಟೀನ್-ಸಮೃದ್ಧ ಹೆಸರುಬೇಳೆ ದೋಸೆ ಪ್ರತಿ ಋತುನಲ್ಲಿಯೂ ಸೇವಿಸಬಹುದಾದ ಉತ್ತಮ ತಿಂಡಿಯಾಗಿದೆ.ತೂಕವನ್ನು ನಿಯಂತ್ರಿಸಲು ಪ್ರಯತ್ನಿಸುವವರಿಗೆ ಇದು ಬೆಸ್ಟ್ ಆಯ್ಕೆಯಾಗಿದೆ. ಬೆಳಗಿನ ಉಪಾಹಾರಕ್ಕಾಗಿ ಹೆಸರು ಬೆಲೆಯ ಒಂದು ದೋಸೆ ತಿಂದರೂ ಸಾಕು ದೀರ್ಘಕಾಲದವರೆಗೆ ಶಕ್ತಿಯುತವಾಗಿರುತ್ತೀರಿ.
ಹುರಿಗಡಲೆ :
ಹುರಿಗಡಲೆ ಒಂದು ಪೌಷ್ಟಿಕ ಆಹಾರವಾಗಿದ್ದು, ಇದು ಬೊಜ್ಜು ಕಡಿಮೆ ಮಾಡುವುದಲ್ಲದೆ ಶಕ್ತಿಯನ್ನೂ ನೀಡುತ್ತದೆ. ಹುರಿಗಡಲೆ ತಿನ್ನುವ ಮೂಲಕ, ಆಹಾರದ ಫೈಬರ್ ಮತ್ತು ಪ್ರೋಟೀನ್ ಎರಡರ ಪ್ರಯೋಜನವು ಸಿಗುತ್ತದೆ. ಇದು ಹಸಿವನ್ನು ತಣಿಸುತ್ತದೆ.
ಮಂಡಕ್ಕಿ :
ಮಂಡಕ್ಕಿಗೆ ಕಡಲೆ ಬೇಳೆ, ಕಡಲೆಕಾಯಿ ಮತ್ತು ಈರುಳ್ಳಿ-ಟೊಮೆಟೋಗಳಂತಹ ಆರೋಗ್ಯಕರ ತರಕಾರಿಗಳನ್ನು ಹಾಕಿ ಸೇವಿಸಬಹುದು.ಅವುಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿ ಕಂಡುಬರುತ್ತವೆ. ಅಲ್ಲದೆ ಇವುಗಳಲ್ಲಿ ಇರುವ ಪೋಷಕಾಂಶಗಳ ಪ್ರಮಾಣವೂ ಹೆಚ್ಚು. ಸಂಜೆಯ ಉಪಹಾರವಾಗಲಿ ಬೆಳಗಿನ ಉಪಹಾರವಾಗಲಿ ಮಂಡಕ್ಕಿ ತಿನ್ನುವ ಮೂಲಕ ಹಸಿವು ನೀಗಿಸಬಹುದು.
ಇದನ್ನೂ ಓದಿ : ಮಧುಮೇಹಿಗಳು ಕಲ್ಲಂಗಡಿ ಹಣ್ಣು ತಿಂದರೆ ಏನಾಗುತ್ತದೆ? ತಜ್ಞರು ಈ ಬಗ್ಗೆ ಹೇಳುವುದೇನು ?
ಉಪ್ಪಿಟ್ಟು :
ಇದು ಕಡಿಮೆ ಕ್ಯಾಲೋರಿ ಆಹಾರವಾಗಿದ್ದು, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ. ರವೆ ಮತ್ತು ತರಕಾರಿಗಳಿಂದ ತಯಾರಿಸಿದ ಉಪ್ಪಿಟ್ಟು ಆಹಾರದ ಫೈಬರ್‌ನಲ್ಲಿ ಸಮೃದ್ಧವಾಗಿದೆ. ಉಪ್ಪಿಟ್ಟು ಕಡುಬಯಕೆಗಳನ್ನು ನಿಯಂತ್ರಿಸಲು ಕೂಡಾ ಸಹಾಯ ಮಾಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.