Exercise for Healthy Hair : ಕೂದಲಿನ ಬೆಳವಣಿಗೆಗೆ ತೆಂಗಿನ ಎಣ್ಣೆ, ಹರಳೆಣ್ಣೆ ಬಳಸುವುದು, ಹೇರ್ ಮಾಸ್ಕ್ ಉಪಯೋಗಿಸುವುದು ಸರ್ವೇ ಸಾಮಾನ್ಯ. ಅನೇಕ ಜನರು ಸದೃಢ ಕೂದಲಿಗಾಗಿ ಸಾಕಷ್ಟು ತಂತ್ರಗಳನ್ನು ಮಾಡುತ್ತಾರೆ. ಕಾಡಲ್ಲಿರುವ ಸೊಪ್ಪನ್ನೂ ಸಹ ಕೂದಲಿಗೆ ಹಚ್ಚಿ ಪ್ರಯತ್ನಿಸುತ್ತಾರೆ. ಆದ್ರೆ, ಕೆಲವು ಫಿಟ್ನೆಸ್ ತರಬೇತುದಾರರು ತಮ್ಮ ಕೂದಲ ರಕ್ಷಣೆಯ ದಿನಚರಿಯಲ್ಲಿ ಕೆಲವು ವ್ಯಾಯಾಮವನ್ನು ಸೇರಿಸಲು ಸಲಹೆ ನೀಡುತ್ತಾರೆ. ವ್ಯಾಯಾಮವು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒಳ್ಳೆಯದಾದರೆ, ಅದು ನಮ್ಮ ಕೂದಲಿಗೆ ಸಹ ಒಳ್ಳೆಯದು. ಒಟ್ಟಾರೆ ವ್ಯಾಯಾಮ ಮಾಡಿದರೆ ಒಂದೇ ಕಲ್ಲಿನಲ್ಲಿ ಎರಡು ಮಾವಿನ ಹಣ್ಣು ಸಿಗುತ್ತದೆ.


COMMERCIAL BREAK
SCROLL TO CONTINUE READING

ರಕ್ತ ಪರಿಚಲನೆ ಸುಧಾರಿಸುತ್ತದೆ : ವ್ಯಾಯಾಮವು ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಅಲ್ಲದೆ, ರಕ್ತ ಕಣಗಳ ಆಮ್ಲಜನಕದ ಮಟ್ಟವನ್ನು ದ್ವಿಗುಣಗೊಳಿಸುತ್ತದೆ. ಇದು ಕೂದಲು ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ. ಕೋಶಕ ಪ್ರದೇಶ ಎಂದು ಕರೆಯಲ್ಪಡುವ ಕೂದಲಿನ ಮೂಲದಲ್ಲಿರುವ ಕೊಳವೆಯ ಆಕಾರದ ರಂಧ್ರಗಳು ಹಿಗ್ಗಲು ಸಹಾಯ ಮಾಡುತ್ತದೆ. ಈ ರಂಧ್ರದಿಂದ ಕೂದಲು ಬೆಳೆಯುತ್ತದೆ. ಈ ವ್ಯಾಯಾಮವನ್ನು ನೀವು ನಿಯಮಿತವಾಗಿ ಮಾಡಿದರೆ, ಕೂದಲು ಬೆಳೆಯುವ ಅವಕಾಶವಿದೆ. 


ಇದನ್ನೂ ಓದಿ: Health Tips: ಅಜೀರ್ಣ ಸಮಸ್ಯೆಗೆ ‘ಜೀರಿಗೆʼಯೇ ರಾಮಬಾಣ!


ಒತ್ತಡವನ್ನು ಕಡಿಮೆ ಮಾಡುತ್ತದೆ : ನೀವು ಯಾವುದೇ ರೀತಿಯ ವ್ಯಾಯಾಮವನ್ನು ಮಾಡಿದರೂ ಅದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ವ್ಯಾಯಾಮ ಮಾಡಿದಾಗ ಎಂಡಾರ್ಫಿನ್ ಎಂಬ ಒತ್ತಡದ ಹಾರ್ಮೋನುಗಳ ಬಿಡುಗಡೆಯಾಗುತ್ತದೆ. ಇದು ನಿಮ್ಮ ಮನಸ್ಥಿತಿಯನ್ನು ಸಂತೋಷವಾಗಿರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಒತ್ತಡ ಕಡಿಮೆಯಾಗಿ ಕೂದಲು ಉದುರುವುದು ನಿಲ್ಲುತ್ತದೆ. 


ಯಾವ ರೀತಿಯ ವ್ಯಾಯಾಮಗಳನ್ನು ಮಾಡಬಹುದು ? : ಎಲ್ಲಾ ರೀತಿಯ ವ್ಯಾಯಾಮವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಅನೇಕ ವೈದ್ಯಕೀಯ ತಜ್ಞರು ಸೂಚಿಸುತ್ತಾರೆ. ಆದಾಗ್ಯೂ, ಏರೋಬಿಕ್ ಮತ್ತು ಕಾರ್ಡಿಯೋ ರೀತಿಯ ವ್ಯಾಯಾಮಗಳು ಕೂದಲಿಗೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಈ ರೀತಿಯ ವ್ಯಾಯಾಮ ಮಾಡುವುದರಿಂದ ಕೂದಲು ಬೆಳೆಯುವ ಸ್ನಾಯುಗಳನ್ನು ಬಲಪಡಿಸುತ್ತದೆ ಹಾಗೂ ಕೂದಲು ಉದುರುವುದು ಕಡಿಮೆಯಾಗುತ್ತದೆ. 


ಇದನ್ನೂ ಓದಿ: Healthy Breakfast: ಬೆಳಗಿನ ಉಪಹಾರಕ್ಕೆ ಈ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ


ಕೂದಲು ಬೆಳವಣಿಗೆಗೆ ಆರೋಗ್ಯಕರ ಆಹಾರಗಳು : ವ್ಯಾಯಾಮದ ಹೊರತಾಗಿ, ಕೆಲವು ಆರೋಗ್ಯಕರ ಆಹಾರಗಳು ಕೂದಲಿನ ಬೆಳವಣಿಗೆಗೆ ಕಾರಣವಾಗಬಹುದು. ವಿಟಮಿನ್ ಮತ್ತು ಪ್ರೋಟೀನ್ ಭರಿತ ಆಹಾರಗಳು ಕೂದಲಿಗೆ ಬಹಳ ಮುಖ್ಯ. ಮೊಟ್ಟೆಗಳು, ತರಕಾರಿಗಳು ಮತ್ತು ಬೀಜಗಳನ್ನು ತಿನ್ನುವುದರಿಂದ ಕೂದಲು ದೇಹದ ಆರೋಗ್ಯದ ಜೊತೆಗೆ ಕೂದಲು ಬೆಳವಣಿಗೆಗೂ ಸಹಾಯವಾಗುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.