Health Tips: ಅಜೀರ್ಣ ಸಮಸ್ಯೆಗೆ ‘ಜೀರಿಗೆʼಯೇ ರಾಮಬಾಣ!

Health Benefits Of Cumin Seeds: ಊಟ ರುಚಿಯಾಗಿತ್ತು ಎಂದು ಹೊಟ್ಟೆತುಂಬಾ ಊಟ ಮಾಡುವವರು ಹೆಚ್ಚಾಗಿ ಅಜೀರ್ಣ ಸಮಸ್ಯೆಯಿಂದ ಬಳಲುತ್ತಾರೆ. ಇದಕ್ಕೆ ಜೀರಿಗೆಯೇ ರಾಮಬಾಣವಾಗಿದೆ.

Indigestion Problem: ಇಂದು ಬಹುತೇಕರು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಜೀರ್ಣ ಸಮಸ್ಯೆ ನಿವಾರಣೆಗೆ ವಿವಿಧ ರೀತಿಯ ಸರ್ಕಸ್ ಕೂಡ ಮಾಡುತ್ತಾರೆ. ಅಜೀರ್ಣ ಸಮಸ್ಯೆಯಿಂದ ಹೊಟ್ಟೆ ಭಾರವಾಗಿ ನರಕಯಾತನೆ ಪಡುತ್ತಾರೆ. ಊಟ ರುಚಿಯಾಗಿತ್ತು ಎಂದು ಹೊಟ್ಟೆತುಂಬಾ ಊಟ ಮಾಡುವವರು ಹೆಚ್ಚಾಗಿ ಅಜೀರ್ಣ ಸಮಸ್ಯೆಯಿಂದ ಬಳಲುತ್ತಾರೆ. ಇದಕ್ಕೆ ಜೀರಿಗೆಯೇ ರಾಮಬಾಣವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಅಜೀರ್ಣ ಆರೋಗ್ಯ ಸಮಸ್ಯೆಯು ಬಹುತೇಕರನ್ನು ಕಾಡುವ ಸಾಮಾನ್ಯ ಮತ್ತು ಗಂಭೀರ ಸಮಸ್ಯೆಯಾಗಿದೆ. ಅಜೀರ್ಣ ಎಂದರೆ ನಾವು ತಿಂದ ಆಹಾರವು ಚೆನ್ನಾಗಿ ಜೀರ್ಣವಾಗದಿರುವುದು. ಇದು ವಾಕರಿಕೆ, ಎದೆಯುರಿ, ವಾಂತಿ ಮುಂತಾದ ಲಕ್ಷಣಗಳನ್ನುಂಟು ಮಾಡುತ್ತದೆ.

2 /5

ನಿಮಗೆ ಕಾಡುವ ಅಜೀರ್ಣ ಸಮಸ್ಯೆಗೆ ಜೀರಿಗೆ ರಾಮಬಾಣವಾಗಿದೆ. ಇದಕ್ಕೆ ಅರ್ಧ ಚಮಚ ಜೀರಿಗೆ ಮತ್ತು ಕಲ್ಲು ಉಪ್ಪನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ. ಇದರಿಂದ ಬರುವ ರಸವನ್ನು ಕುಡಿದ್ರೆ ನಿಮ್ಮ ಹೊಟ್ಟೆ ಭಾರ ಕಡಿಮೆಯಾಗುತ್ತದೆ.

3 /5

ಜೀರಿಗೆಯನ್ನು ಹುರಿದು ಪುಡಿ ಮಾಡಬೇಕು. ಬಳಿಕ ಅದನ್ನು ಬಾಯಿಗೆ ಹಾಕಿಕೊಂಡು ಬಿಸಿನೀರು ಕುಡಿದರೂ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಓಂ ಕಾಳು ಮತ್ತು ಜೀರಿಗೆಯನ್ನು ಹುರಿದು ಪುಡಿ ಮಾಡಿ ಲೋಟ ನೀರಿಗೆ ಬೆರೆಸಿ ಕುದಿಸಿ ಅರ್ಧ ಲೋಟಕ್ಕೆ ಇಳಿಯುತ್ತಲೇ ಸೋಸಿ ಮಕ್ಕಳಿಗೆ ಕುಡಿಸಿದರೆ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ.

4 /5

ಜೀರಿಗೆ ಪುಡಿಯನ್ನು ನೀರಿಗೆ ಹಾಕಿ ಕುದಿಸಿ ಬೆಲ್ಲ, ಹಾಲು ಸೇರಿಸಿ ಕುಡಿಯುವುದರಿಂದ ದೇಹಕ್ಕೂ ತಂಪು ಮತ್ತು ನಿಮಗೆ ಚೈತನ್ಯವೂ ಸಿಗುತ್ತದೆ. ಇದು ರಕ್ತಹೀನತೆಯನ್ನೂ ಕಡಿಮೆ ಮಾಡುತ್ತದೆ.

5 /5

ಅಸ್ತಮಾ ರೋಗಿಗಳು ಹುರಿದ ಜೀರಿಗೆ ಪುಡಿ ಹಾಕಿದ ಬಿಸಿ ನೀರು ಕುಡಿಯುವುದರಿಂದ ದಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ. ಜೀರಿಗೆ ಅಜೀರ್ಣ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ನಿಮಗೆ ಮುಕ್ತಿ ನೀಡುತ್ತದೆ.