ನವದೆಹಲಿ: Symptoms Of Heart Attack - ಹೃದಯವನ್ನು ಸದೃಢವಾಗಿರಿಸಿಕೊಳ್ಳುವುದು (Healthy Heart) ಬಹಳ ಮುಖ್ಯ. ಏಕೆಂದರೆ ಒಂದು ವೇಳೆ ಅದು ಆರೋಗ್ಯವಂತವಾಗಿರದಿದ್ದರೆ, ನಿಮ್ಮ ಜೀವನದುದ್ದಕ್ಕೂ ನೀವು ಔಷಧಿಗಳ ಮೇಲೆ ಅವಲಂಬಿತರಾಗುತ್ತೀರಿ. ಇಂತಹ ಪರಿಸ್ಥಿತಿಯಲ್ಲಿ, ಬದಲಾಗುತ್ತಿರುವ ಜೀವನಶೈಲಿಯಲ್ಲಿ ನಿಮ್ಮ ಆಹಾರ (Control Cholesterol) ಮತ್ತು ವ್ಯಾಯಾಮಕ್ಕೆ ಗಮನ ನೀಡಲು ಪ್ರಯತ್ನಿಸಿ. ಒತ್ತಡವನ್ನು (Stay Away From Stress) ತೆಗೆದುಕೊಳ್ಳದಿರುವುದು ದೊಡ್ಡ ವಿಷಯ, ಏಕೆಂದರೆ ಇದು ಹೃದಯಾಘಾತಕ್ಕೆ ದೊಡ್ಡ ಕಾರಣವಾಗಿದೆ. ಇದಲ್ಲದೆ, ಹೆಚ್ಚಿದ ಕೊಲೆಸ್ಟ್ರಾಲ್ ಹೃದಯವನ್ನು ಅನರ್ಹಗೊಳಿಸುತ್ತದೆ. ಹಾಗಾದರೆ ಹೃದಯದ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಾಗ ಕಂಡುಬರುವ ಲಕ್ಷಣಗಳೇನು (Symptoms Of Heart Attack) ಎಂಬುದನ್ನು ತಿಳಿಯೋಣ ಬನ್ನಿ.

COMMERCIAL BREAK
SCROLL TO CONTINUE READING

ಹೃದಯಾಘಾತಕ್ಕೂ (Heart Attack) ಮುನ್ನ ಶರೀರ 6 ಸಂಕೇತಗಳನ್ನು ನೀಡುತ್ತದೆ (Six Signs Seen Before Heart Attack)

1. ಎದೆಯಲ್ಲಿನ ನೋವು ಹಾಗೂ ಅಸ್ವಸ್ಥತೆಯನ್ನು ಲೈಟಾಗಿ ಪರಿಗಣಿಸಬೇಡಿ. ಇದು ಹೃದಯಾಘಾತದ ಸಾಮಾನ್ಯ ಲಕ್ಷಣವಾಗಿದೆ.

2. ಆಯಾಸ, ಅಪಚನ ಹಾಗೂ ಹೊಟ್ಟೆನೋವು ಹಾರ್ಟ್ ಅಟ್ಯಾಕ್ ನ ಲಕ್ಷಣಗಳಾಗಿರುವ ಸಾಧ್ಯತೆ ಇದೆ.

3. ಶರೀರದ ಎಡಭಾಗದಲ್ಲಿ ಯಾವುದೇ ರೀತಿಯ ನೋವು ಕಾಣಿಸಿಕೊಂಡರೆ ಅದು ಹೃದಯ ಅನಾರೋಗ್ಯಕರವಾಗಿದೆ ಎಂಬುದರ ಸಂಕೇತ.

4. ತಲೆ ಸುತ್ತುವುದು ಕೂಡ ಹೃದಯ ಅನಾರೋಗ್ಯಕ್ಕೆ ಈಡಾಗಿದೆ ಎಂಬುದರ ಸಂಕೇತ ನೀಡುತ್ತದೆ.

5. ಗಂಟಲು ಹಾಗೂ ವಸಡುಗಳಲ್ಲಿನ ನೋವು ಕೂಡ ಹಾರ್ಟ್ ಅಟ್ಯಾಕ್ ಕುರಿತು ಸಂಕೇತ ನೀಡುತ್ತವೆ. ಹಾಗೆ ನೋಡಿದರೆ ಇವು ಹೃದಯಕ್ಕೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ. ಸಾಮಾನ್ಯವಾಗಿ ಶೀತಕ್ಕಾಲದಲ್ಲಿ ಗಂಟಲು ನೋವು ಹಾಗೂ ವಸಡುಗಳಲ್ಲಿನ ನೋವು ಸಾಮಾನ್ಯವಾಗಿರುತ್ತದೆ. ಆದರೆ ಕೆಲ ಸಂದರ್ಭಗಳಲ್ಲಿ ಎದೆಯಲ್ಲಿನ ನೋವು ಅಥವಾ ಒತ್ತಡದ ಕಾರಣ ಆ ನೋವು ಗಂಟಲು ಹಾಗೂ ವಸಡುಗಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತದೆ.


ಇದನ್ನೂ ಓದಿ-MBBS ಸಿಲೆಬಸ್ ನಲ್ಲಿ ಭಾರಿ ಬದಲಾವಣೆ, ತಪ್ಪದೆ ಓದಿ

5. ಬೇಗನೆ ದಣಿವು ಕಾಣಿಸಿಕೊಳ್ಳುವುದು ಕೂಡ ಹೃದಯಾಘಾತದ ಸಂಕೇತವಾಗಿದೆ. ಅದನ್ನು ದುರ್ಲಕ್ಷಿಸಬೇಡಿ. 


ಇದನ್ನೂ ಓದಿ-Coconut Water In Pregnancy: ಗರ್ಭಾವಸ್ಥೆಯಲ್ಲಿ ಎಳೆನೀರು ಸೇವನೆ ನಿಜಕ್ಕೂ ಲಾಭದಾಯಕವೇ?

(Disclaimer -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ, ಮನೆಮದ್ದು ಸಾಮಾನ್ಯ ಜ್ಹಾನವನ್ನು ಅವಲಂಭಿಸಿದೆ. ಅನುಸರಿಸುವ ಮುನ್ನ ನುರಿತ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಎಂದಿಗೂ ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.