MBBS ಸಿಲೆಬಸ್ ನಲ್ಲಿ ಭಾರಿ ಬದಲಾವಣೆ, ತಪ್ಪದೆ ಓದಿ

Family Adaptation Program In MBBS Course: MBBS ಪಠ್ಯಕ್ರಮದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಇನ್ಮುಂದೆ ಗ್ರಾಮವನ್ನು ದತ್ತು ತೆಗೆದುಕೊಳ್ಳಬೇಕು. ಇದಲ್ಲದೇ ವಿದ್ಯಾರ್ಥಿಗಳಿಗೆ ಮಹರ್ಷಿ ಚರಕ ಪ್ರಮಾಣ ವಚನ (Maharishi Charak Shapath) ಬೋಧಿಸಲಾಗುವುದು.  

Written by - Nitin Tabib | Last Updated : Apr 2, 2022, 03:04 PM IST
  • ಫೌಂಡೇಶನ್ ಕೋರ್ಸ್ ಆರಂಭ
  • ಸಿಲೆಬಸ್ ನಲ್ಲಿ ಯೋಗಾಬ್ಯಾಸ
  • ಮೊದಲ ವರ್ಷದಿಂದಲೇ ಫಿಲ್ಡ್ ವಿಸಿಟ್
MBBS ಸಿಲೆಬಸ್ ನಲ್ಲಿ ಭಾರಿ ಬದಲಾವಣೆ, ತಪ್ಪದೆ ಓದಿ title=
National Medical Council

ನವದೆಹಲಿ:Medical Education - ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಪದವಿಪೂರ್ವ ವೈದ್ಯಕೀಯ ಕಾರ್ಯಕ್ರಮಗಳಲ್ಲಿ ಮೆರಿಟ್ ಆಧಾರಿತ ವೈದ್ಯಕೀಯ ಶಿಕ್ಷಣವನ್ನು ಜಾರಿಗೆ ತರಲು ಸುತ್ತೋಲೆ (NMC Circular) ಹೊರಡಿಸಿದ್ದು, ಕೋರ್ಸ್‌ನ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಮಹರ್ಷಿ ಚರಕ್ ಪ್ರಮಾಣ (Charak Shapath) ವಚನವನ್ನು ಶಿಫಾರಸು ಮಾಡಿದೆ. ಎಂಬಿಬಿಎಸ್ ವಿದ್ಯಾರ್ಥಿಗಳು ಗ್ರಾಮವನ್ನು ದತ್ತು ತೆಗೆದುಕೊಳ್ಳಬೇಕು ಎಂದೂ ಕೂಡ ಇದರಲ್ಲಿ ಹೇಳಲಾಗಿದೆ.
ವಿದ್ಯಾರ್ಥಿಗಳಿಗೆ ಚರಕ ಪ್ರಮಾಣವಚನ ಅನಿವಾರ್ಯ

NMCಯ ಸುತ್ತೋಲೆಯ ಪ್ರಕಾರ, ವೈದ್ಯಕೀಯ ಶಿಕ್ಷಣವನ್ನು ನೀಡಲು ಆರಂಭಿಸುವ ಮೊದಲು ವಿದ್ಯಾರ್ಥಿಗಳಿಗೆ  ಮಹರ್ಷಿ ಚರಕ್ ಪ್ರಮಾಣ ವಚನ ಬೋಧಿಸಲಾಗುವುದು. MBBS ಗಾಗಿ ಹೊಸ ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣದ ಗುರಿ ಅರಿವಿನ (Cognitive), ಪರಿಣಾಮಕಾರಿ (Affective)  ಮತ್ತು ಸೈಕೋಮೋಟರ್ (Psychomotor) ಮೂರು ಕ್ಷೇತ್ರಗಳನ್ನು ಒಳಗೊಂಡಿದೆ.

ಇದನ್ನೂ ಓದಿ-350 ವಸ್ತುಗಳ ಮೇಲೆ ತೆರಿಗೆ ಹೆಚ್ಚಳ; ಹೊಟೇಲ್ ತಿಂಡಿ ಬೆಲೆ ದುಪ್ಪಟ್ಟು ಸಾಧ್ಯತೆ

ಹೊಸ ಪಠ್ಯಕ್ರಮ ಜಾರಿಗೊಳಿಸಲು ನಿರ್ದೇಶನಗಳು
ಆಗಸ್ಟ್ 2019 ರಲ್ಲಿ ಪರಿಚಯಿಸಲಾದ ಹೊಸ ಪಠ್ಯಕ್ರಮವು ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಲವಾದ ಅಡಿಪಾಯ ಮತ್ತು ಸಮಗ್ರ ಅಂಶಕ್ಕೆ ಸಮತೋಲಿತ ವಿಧಾನವನ್ನು ನೀಡುತ್ತದೆ. ಇದರಲ್ಲಿ ಕೌಟುಂಬಿಕ ದತ್ತು ಸ್ವೀಕಾರ ಕಾರ್ಯಕ್ರಮ (Family Adoption Program), ಯೋಗ, ಧ್ಯಾನ ಮತ್ತು ಸ್ಥಳೀಯ ಭಾಷೆ ಕಲಿಕೆ ಸೇರಿದಂತೆ ಫೌಂಡೇಶನ್ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಹೊಸ ಪಠ್ಯಕ್ರಮವನ್ನು ಜಾರಿಗೆ ತರಲು ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ-ನಾಳೆಯಿಂದ ಬದಲಾಗಲಿದೆ PF ಖಾತೆ ಈ ನಿಯಮ : 6 ಕೋಟಿ ಉದ್ಯೋಗಿಗಳು ಕಟ್ಟಬೇಕು ತೆರಿಗೆ 

ಗ್ರಾಮವನ್ನು ದತ್ತು ಪಡೆಯಲಿದ್ದಾರೆ MBBS ವಿದ್ಯಾರ್ಥಿಗಳು
ಗುರುವಾರ ಹೊರಡಿಸಿರುವ ಸುತ್ತೋಲೆಯಲ್ಲಿ MBBS ವಿದ್ಯಾರ್ಥಿಗಳು ಗ್ರಾಮವನ್ನು ದತ್ತು ತೆಗೆದುಕೊಳ್ಳಬೇಕು ಎಂದು ಹೇಳಲಾಗಿದೆ. ಸುತ್ತೋಲೆ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದ ಗ್ರಾಮವನ್ನೇ ದತ್ತು ಪಡೆಯಬೇಕು ಎನ್ನಲಾಗಿದೆ. 

ಹೊಸ ಪಠ್ಯಕ್ರಮದ ಕುರಿತು ಪ್ರತಿಕ್ರಿಯಿಸಿದ FAIMA ವೈದ್ಯರ ಸಂಘದ ಅಧ್ಯಕ್ಷ ಡಾ.ರೋಹನ್ ಕೃಷ್ಣನ್, ಪಠ್ಯಕ್ರಮದ ರಚನೆಯಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಕ್ಷೇತ್ರ ಭೇಟಿಗೆ ಈ ಮೊದಲು ಮೂರನೇ ವರ್ಷದಲ್ಲಿ ಕಳುಹಿಸಲಾಗುತ್ತಿತ್ತು, ಆದರೆ, ಇದೀಗ ಅದನ್ನು ಮೊದಲ ವರ್ಷದಲ್ಲಿಯೇ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ. 

ಇದನ್ನೂ ನೋಡಿ -

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News