ಬಾಯಿಯನ್ನು ಸ್ವಚ್ಛವಾಗಿಡುವ ಆಹಾರಗಳು:  ಉತ್ತಮ ಆರೋಗ್ಯ ಎಂದರೆ ಸಾಮಾನ್ಯವಾಗಿ ನಾವು ದೇಹದ ತೂಕ, ಚರ್ಮ ಮತ್ತು ಮೂಳೆಗಳ ಬಲವನ್ನು ಹೆಚ್ಚಿಸುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೇವೆ, ಆದರೆ ಹಲ್ಲುಗಳ ಆರೋಗ್ಯವನ್ನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ಬಾಯಿ ಆರೋಗ್ಯವಿಲ್ಲದೆ ಒಟ್ಟಾರೆ ಆರೋಗ್ಯವನ್ನು ಕಲ್ಪಿಸುವುದು ಅರ್ಥಹೀನ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಬಾಯಿಯ ಕೊಳಕಿನಿಂದ ಅನೇಕ ರೋಗಗಳು ಉದ್ಭವಿಸಬಹುದು. ಇದು ಹೊಟ್ಟೆಗೆ ಆಹಾರವನ್ನು ತಲುಪಿಸುವ ಮಾರ್ಗವಾಗಿದೆ. ಈ ಮಾರ್ಗವನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಹೊಟ್ಟೆಯೊಳಗೆ ಕೊಳೆ ಸೇರಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಬಾಯಿಯನ್ನು, ಹಲ್ಲುಗಳನ್ನು ಸ್ವಚ್ಛವಾಗಿರಿಕೊಳ್ಳುವುದು ಬಹಳ ಮುಖ್ಯ. ಹಲ್ಲುಗಳನ್ನು ಸ್ವಚ್ಛಗೊಳಿಸಲು, ಕೇವಲ ಬ್ರಷ್ ಮತ್ತು ಮೌತ್ವಾಶ್ ಸಾಕಾಗುವುದಿಲ್ಲ. ಇದಕ್ಕಾಗಿ, ಕೆಲವು ರೀತಿಯ ಆಹಾರಗಳ ಸೇವನೆಯೂ ಅಗತ್ಯವಾಗಿದೆ.


COMMERCIAL BREAK
SCROLL TO CONTINUE READING

ಹಲ್ಲುಗಳನ್ನು ಬಿಳುಪುಗೊಳಿಸುವ ಆಹಾರಗಳು:
ಹಲ್ಲುಗಳನ್ನು ಸ್ವಚ್ಛಗೊಳಿಸಲು ಬ್ರಷ್, ಹಲ್ಲು ಮತ್ತು ಮೌತ್ ವಾಶ್ ಬಳಸುತ್ತೇವೆ. ಇದರಿಂದ ಕುಳಿ ಸಮಸ್ಯೆ ಬರುವುದಿಲ್ಲ. ಆದರೆ 2 ವಿಶೇಷ ರೀತಿಯ ಆಹಾರ ತಿಂದರೂ ಬಾಯಿ ಸ್ವಚ್ಛವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ.


ಇದನ್ನೂ ಓದಿ- Diabetes Treatment: ಡಯಾಬಿಟಿಸ್ ರೋಗಿಗಳ ಚಿಕಿತ್ಸೆ ಇನ್ಮುಂದೆ ಮತ್ತಷ್ಟು ಸುಲಭವಾಗಲಿದೆ, ಹೇಗೆ ತಿಳಿಯಲು ಸುದ್ದಿ ಓದಿ


ಹಲ್ಲುಗಳನ್ನು ಸ್ವಚ್ಛವಾಗಿಡಲು ಈ 2 ಆಹಾರಗಳನ್ನು ಸೇವಿಸಿ:
1. ಡೈರಿ ಉತ್ಪನ್ನಗಳು: 

ಹಾಲು ಮತ್ತು ಅದರಿಂದ ತಯಾರಿಸಿದ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ. ನಮ್ಮ ಹಲ್ಲುಗಳೂ ಮೂಳೆಗಳೇ ಆಗಿರುವುದರಿಂದ ಹಾಲು ಕುಡಿಯಲೇಬೇಕು. ಇದು ದಂತಕವಚ ಎಂಬ ಹಲ್ಲುಗಳ ಹೊರ ಪದರವನ್ನು ರಕ್ಷಿಸುತ್ತದೆ.


2. ಚಾಕೊಲೇಟ್ :
ಚಾಕೊಲೇಟ್ ತಿನ್ನುವುದರಿಂದ ಹಲ್ಲು ಕೊಳೆಯುತ್ತದೆ ಎಂದು ಮಕ್ಕಳಿಗೆ ಸಾಮಾನ್ಯವಾಗಿ ಹೇಳಲಾಗುತ್ತದೆ, ಆದರೆ ಈ ಸಿಹಿ ಪದಾರ್ಥವು  ಹಲ್ಲಿನ ಸಮಸ್ಯೆಗಳನ್ನು ಗುಣಪಡಿಸುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಆದಾಗ್ಯೂ, ಒಂದು ದಿನದಲ್ಲಿ ಒಂದು ಅಥವಾ ಎರಡು ಚಾಕೊಲೇಟ್ ತುಂಡುಗಳನ್ನು ಮಾತ್ರ ತಿನ್ನಬಹುದು ಎಂಬುದನ್ನು ನೆನಪಿನಲ್ಲಿಡಿ.


ಇದನ್ನೂ ಓದಿ- Ayurveda: ಉಷ್ಣತೆಯಿಂದ ಪಾರಾಗಲು ಈ ಆಯುರ್ವೇದ ಆಹಾರಗಳನ್ನು ಪ್ರಯತ್ನಿಸಿ


ಈ ವಸ್ತುಗಳಿಂದ ದೂರವಿರಿ:
ಡೈರಿ ಉತ್ಪನ್ನಗಳು ಮತ್ತು ಚಾಕೊಲೇಟ್ ತಿನ್ನುವುದು ಹಲ್ಲುಗಳಿಗೆ ಪ್ರಯೋಜನಕಾರಿಯಾದರೂ, ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು, ಬೆಳಿಗ್ಗೆ ಎದ್ದ ನಂತರ ಮತ್ತು ರಾತ್ರಿ ಮಲಗುವ ಮೊದಲು ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ. ಸಕ್ಕರೆ, ಕಾಫಿ, ಹುಳಿ ಪದಾರ್ಥಗಳು ಮತ್ತು ಮದ್ಯಸಾರವನ್ನು ಒಳಗೊಂಡಿರುವ ಕೆಲವು ವಸ್ತುಗಳಿಂದ ನೀವು ದೂರವಿರಬೇಕು. ಆಲ್ಕೋಹಾಲ್ ಚಟದಿಂದಾಗಿ ಹಲ್ಲುಗಳ ಹಳದಿ ಬಣ್ಣವು ಹೆಚ್ಚಾಗುತ್ತದೆ. ಪ್ರತಿದಿನ ಮೌತ್ವಾಶ್ ಮಾಡಿ ಮತ್ತು ವಿಶೇಷವಾಗಿ ನಾಲಿಗೆಯನ್ನು ಸ್ವಚ್ಛಗೊಳಿಸಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.