ನವದೆಹಲಿ : ಹಿಂದಿ ಬಿಗ್ ಬಾಸ್ 13ರ  ವಿಜೇತ, ನಟ ಸಿದ್ಧಾರ್ಥ್ ಶುಕ್ಲಾ (Siddharth Shukla Death) ಗುರುವಾರ ನಿಧನರಾಗಿದ್ದಾರೆ. ತಮ್ಮ  40 ನೇ ವರ್ಷ ವಯಸ್ಸಿನಲ್ಲಿ ಹೃದಯಾಘಾತದಿಂದ (Heart attack) ಮೃತಪಟ್ಟಿದ್ದಾರೆ. ಹೃದಯಾಘಾತಎನ್ನುವುದು ಇಂದಿನ ದಿನಗಳಲ್ಲಿ ಬಹಳ ದೊಡ್ಡ ಸಮಸ್ಯೆಯಾಗಿದೆ. ಅದೆಷ್ಟೋ ಯುವಕರು,  ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹೃದಯಾಘಾತ ಎನ್ನುವುದು ಇಂಥವರಿಗೆ ಬರಬೇಕೆಂದಿಲ್ಲ. ಯಾರಿಗೆ ಬೇಕಾದರೂ ಹೃದಯಾಘಾತವಾಗಬಹುದು.  ಆದರೆ, ವಯಸ್ಸಾದಂತೆ, ಅದರ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಆದರೆ ಹೃದಯಾಘಾತವಾಗುವುದಕ್ಕೂ ಮುನ್ನ ಅದರ ಲಕ್ಷಣಗಳು ಗೋಚರಿಸುತ್ತವೆ. ದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. 


COMMERCIAL BREAK
SCROLL TO CONTINUE READING

ಹೃದಯಾಘಾತಕ್ಕೂ ಮುನ್ನ ಕಂಡುಬರುವ ಲಕ್ಷಣಗಳು ಯಾವುವೆಂದರೆ :
ಹೃದಯ ಬಡಿತ : ಒಬ್ಬ ವ್ಯಕ್ತಿಯು ಬಹಳ ಆತಂಕಪಟ್ಟಾಗ ಅಥವಾ ಅತಿಯಾದ ಉತ್ಸಾಹದಲ್ಲಿದ್ದಾಗ ಹೃದಯ ಬಡಿತ (Heart beat) ಹೆಚ್ಚು ಕಡಿಮೆ ಆಗುವುದು ಸಹಜ. ಆದರೆ, ಹೃದಯ ಬಡಿತವು ಕೆಲವು ಸೆಕೆಂಡುಗಳಿಗಿಂತ ಹೆಚ್ಚು ಕಾಲ ನಿಯಂತ್ರಣದಲ್ಲಿ ಇಲ್ಲದಂತೆ ಕಂಡು ಬಂದರೆ,  ಅದು ಅಪಾಯದ ಮುನ್ಸೂಚನೆಯಾಗಿರಬಹುದು. ಹಾಗಾಗಿ ಎದೆ ಬಡಿತದಲ್ಲಿ ಸ್ವಲ್ಪ ಮಟ್ಟಿನ ಏರುಪೇರು ಕಂಡುಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ.


ಇದನ್ನೂ  ಓದಿ : Healthy Breakfast Tips : ಬೆಳಗಿನ ಉಪಾಹಾರದಲ್ಲಿ ಈ 2 ಆಹಾರಗಳನ್ನ ತಪ್ಪದೆ ಸೇವಿಸಿ, ರೋಗಗಳಿಂದ ದೂರವಿರಿ! 


ತಣ್ಣನೆಯ ಬೆವರು, ವಾಂತಿ ಅಥವಾ ತಲೆಸುತ್ತುವುದು :  ಅನೇಕ ಜನರಿಗೆ ವಾಂತಿ(Vomiting), ವಾಕರಿಕೆ ಮುಂತಾದ ಲಕ್ಷಣಗಳು ಕಂಡು ಬರುತ್ತವೆ.  ಈ ಲಕ್ಷಣಗಳು ವಿಶೇಷವಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತವೆ. ಇದರ ಹೊರತಾಗಿ, ತಣ್ಣನೆಯ ಬೆವರು ಅಥವಾ ತಲೆಸುತ್ತುವ ಸಮಸ್ಯೆ ಇದ್ದರೂ, ಅದನ್ನು ನಿರ್ಲಕ್ಷಿಸಬೇಡಿ. 


ಮೂರ್ಛೆ : Health.com ಪ್ರಕಾರ, ಇದ್ದಕ್ಕಿದ್ದಂತೆ ಮೂರ್ಛೆ ಹೋದರೆ ಅಥವಾ ತುಂಬಾ ತಲೆ ಸುತ್ತುವ ಸಮಸ್ಯೆ ಎದುರಾದರೆ, ಇದು ಹೃದಯಕ್ಕೆ ಸಂಬಂಧಿಸಿದ (Heart disease) ಸಮಸ್ಯೆಯಿಂದಾಗಿ ಆಗಿರುತ್ತದೆ. ಇದನ್ನು ಅರ್ಥ ಮಾಡಿಕೊಂಡು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.  


ಇದನ್ನೂ  ಓದಿ : Diabetes: ನಿಮ್ಮ ಅಡುಗೆಮನೆಯಲ್ಲಿರುವ ಈ ಮಸಾಲೆಗಳು ಮಧುಮೇಹಕ್ಕೆ ರಾಮಬಾಣ


ಕೈಯಲ್ಲಿ ಅಥವಾ ಹಿಮ್ಮಡಿಗಳಲ್ಲಿ ಊತ :  ವ್ಯಕ್ತಿಯ ಪಾದಗಳು, ಕಾಲ್ಬೆರಳುಗಳು ಅಥವಾ ಹಿಮ್ಮಡಿಗಳಲ್ಲಿ ಊತದ ಸಮಸ್ಯೆ ಹೆಚ್ಚಾಗುತ್ತಿದ್ದರೆ ಅದು ಗಂಭೀರ ವಿಷಯವಾಗಿರಬಹುದು. ಒಬ್ಬ ವ್ಯಕ್ತಿಯ ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ, ಕೈ ಮತ್ತು ಕಾಲುಗಳಲ್ಲಿ ಊತವು ಹೆಚ್ಚಾಗಲು ಆರಂಭವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.


ಭುಜದ ನೋವು : ನಿಮ್ಮ ಭುಜಗಳಲ್ಲಿ ನಿರಂತರ ನೋವು ಕಾಣಿಸಿಕೊಳ್ಳುತ್ತಿದ್ದರೂ ಎಚ್ಚರದಿಂದ ಇರಬೇಕು. ಭುಜ ಮತ್ತು ಸೊಂಟದಲ್ಲಿ ನೋವು ಕಾಣಿಸಿಕೊಂಡರು ಎಚ್ಚರದಿಂದ ಇರಬೇಕು,ವೈದ್ಯರನ್ನು ಸಂಪರ್ಕಿಸಬೇಕು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ