Heart Disease: ಹೃದ್ರೋಗವನ್ನು ತಡೆಗಟ್ಟಲು ಈ ಸರಳ ಸಲಹೆಗಳನ್ನು ಪಾಲಿಸಿ
Heart Disease: ಮಾನಸಿಕ ಒತ್ತಡ, ಅನಾರೋಗ್ಯಕರ ಜೀವನಶೈಲಿ ಹಾಗೂ ಕೆಟ್ಟ ಆಹಾರ ಪದ್ಧತಿಯು ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ಪ್ರಮುಖ ಕಾರಣಗಳಾಗಿವೆ.
Heart Disease: ಇತ್ತೀಚಿನ ದಿನಗಳಲ್ಲಿ ಎಲ್ಲರ ಜೀವನಶೈಲಿಯೂ ಬದಲಾಗಿದ್ದು, ಸಣ್ಣಮಕ್ಕಳು-ಯುವಕರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಇಷ್ಟು ಚಿಕ್ಕ ಪ್ರಾಯದಲ್ಲಿಯೇ ಹೃದಯಾಘಾತ ಏಕಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಮಾನಸಿಕ ಒತ್ತಡ, ಅನಾರೋಗ್ಯಕರ ಜೀವನಶೈಲಿ ಹಾಗೂ ಕೆಟ್ಟ ಆಹಾರ ಪದ್ಧತಿಯು ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ಪ್ರಮುಖ ಕಾರಣಗಳಾಗಿವೆ. ಹೃದ್ರೋಗವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಪಾಲಿಸಬೇಕಾದ 6 ಪ್ರಮುಖ ಉಪಯುಕ್ತ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ದುಶ್ಚಟಗಳು: ದಿನನಿತ್ಯದ ಜೀವನದಲ್ಲಿ ಕೆಲವು ಅಂಶಗಳು ನಿಮ್ಮ ಅಪಾಯವನ್ನು ಹೆಚ್ಚಿಸಬಹುದು. ಉದಾಹರಣೆಗೆ ಧೂಮಪಾನ, ಮೂತ್ರಪಿಂಡ ಕಾಯಿಲೆ ಅಥವಾ ನಿಮ್ಮ ಪೂರ್ವಜರಲ್ಲಿದ್ದ ಆರಂಭಿಕ ಹೃದಯ ಕಾಯಿಲೆ. ಹೀಗೆ ನಿಮ್ಮ ಅಪಾಯಕಾರಿ ಅಂಶಗಳನ್ನು ಮೊದಲೇ ತಿಳಿದುಕೊಳ್ಳುವುದು ಉತ್ತಮ. ನಿಮ್ಮ ಕುಟುಂಬ ವೈದ್ಯರು ಉತ್ತಮ ಚಿಕಿತ್ಸೆ ನೀಡಲು ಇದು ಸಹಾಯ ಮಾಡುತ್ತದೆ. ಆದಷ್ಟು ದುಶ್ಚಟಗಳಿಂದ ಮುಕ್ತವಾಗಿ ಬದುಕುವುದನ್ನು ರೂಢಿಸಿಕೊಂಡರೆ ಹೃದ್ರೋಗ ಸಮಸ್ಯೆಯನ್ನು ದೂರವಿಡಬಹುದು.
ಇದನ್ನೂ ಓದಿ: ಈ ಲಕ್ಷಣಗಳು ನಿಮ್ಮ ದೇಹದಲ್ಲಿ ಕಾಣಿಸಿಕೊಂಡರೆ, ತಕ್ಷಣವೇ ಮದ್ಯ ಸೇವನೆ ನಿಲ್ಲಿಸಿ..!
ಆರೋಗ್ಯಕರ ಆಹಾರ ಸೇವನೆ: ತರಕಾರಿಗಳು, ಹಣ್ಣುಗಳು, ಧಾನ್ಯಗಳು, ದ್ವಿದಳ ಧಾನ್ಯಗಳು, ಬೀಜಗಳು, ಸಸ್ಯ ಆಧಾರಿತ ಪ್ರೋಟೀನ್‌ಗಳು, ಮಾಂಸಾಹಾರ ಮತ್ತು ಮೀನು ಸೇವನೆ ನಿಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕು. ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಸೇವಿಸಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು, ಸಂಸ್ಕರಿಸಿದ ಮಾಂಸ ಮತ್ತು ಹಣ್ಣುಗಳಿಂದ ಮಾಡಿದ ಸಿಹಿ ಪಾನೀಯಗಳನ್ನು ಸೇವಿಸುವುದು ಉತ್ತಮ ಆಯ್ಕೆ.
ದೈಹಿಕವಾಗಿ ಸಕ್ರಿಯರಾಗಿರಿ: ಆರೋಗ್ಯಕರ ಜೀವನದ ಪ್ರಮುಖ ಭಾಗವೇ ದೈಹಿಕವಾಗಿ ಸಕ್ರಿಯವಾಗಿರುವುದು. ಆರೋಗ್ಯವಾಗಿರಲು, ರೋಗ ಮತ್ತು ವಯಸ್ಸಾಗಂತೆ ನೋಡಿಕೊಳ್ಳಲು ಇದು ಒಂದು ಉತ್ತಮ ವಿಧಾನವಾಗಿದೆ. ವಯಸ್ಕರು ಪ್ರತಿವಾರ ಕನಿಷ್ಠ 150 ನಿಮಿಷಗಳ ಕಾಲ ಏರೋಬಿಕ್ ಚಟುವಟಿಕೆ ಅಥವಾ 75 ನಿಮಿಷ ದೈಹಿಕ ಚಟುವಟಿಕೆ ಮಾಡಬೇಕು.
ಇದನ್ನೂ ಓದಿ: ನಿತ್ಯ ಒಂದು ಲೋಟ ನಿಂಬೆ ಜ್ಯೂಸ್ ಕುಡಿಯಿರಿ: ಈ ರೋಗಗಳು ದೂರವಾಗುವ ಜೊತೆ ಸಿಗುತ್ತೆ 6 ಅದ್ಭುತ ಪ್ರಯೋಜನಗಳು
ತೂಕದ ಬಗ್ಗೆ ಕಾಳಜಿ ವಹಿಸಿ: ಯಾವುದೇ ಒಬ್ಬ ವ್ಯಕ್ತಿ ಆರೋಗ್ಯವಾಗಿದ್ದಾನೆಂದು ತಿಳಿಯುವುದೇ ಆತನ ತೂಕದಿಂದ. ನೀವು ಆರೋಗ್ಯಕರ ತೂಕವನ್ನು ಹೊಂದಿದ್ದೀರಾ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ನೀವು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ ಸಾಧ್ಯವಾದಷ್ಟು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸಿ. ಕಡಿಮೆ ಕ್ಯಾಲೊರಿ ಆಹಾರ ಸೇವಿಸುವುದು ಕೂಡ ನಿಮ್ಮ ಜೀವನಶೈಲಿಯ ಭಾಗವಾಗಿರಲಿ.
ತಂಬಾಕು ಮುಕ್ತವಾಗಿರಿ: ನೀವು ಧೂಮಪಾನ ಮಾಡುವ ಚಟವನ್ನಿಟ್ಟುಕೊಂಡಿದ್ದರೆ ಇಂದೇ ಬಿಟ್ಟುಬಿಡಿ. ನಿಮ್ಮ ಮನೆಯಲ್ಲಿ ಯಾರಾದರೂ ಧೂಮಪಾನ ಮಾಡಿದರೆ, ಅದನ್ನು ತ್ಯಜಿಸಲು ಪ್ರೋತ್ಸಾಹಿಸಿ. ನೀವು ಧೂಮಪಾನ ಅಥವಾ ತಂಬಾಕು ಉತ್ಪನ್ನಗಳನ್ನು ಬಳಸದಿದ್ದರೆ ಮುಂದೆಂದೂ ಅವುಗಳ ಸಹವಾಸಕ್ಕೆ ಹೋಗಬೇಡಿ.
ಆರೋಗ್ಯದ ಬಗ್ಗೆ ಕಾಳಜಿ: ನಿಮ್ಮ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸಿದರೆ ಅದು ದೀರ್ಘಾವಧಿಯ, ಆರೋಗ್ಯಕರ ಜೀವನ ನಡೆಸಲು, ಹೃದ್ರೋಗ ಅಥವಾ ಪಾರ್ಶ್ವವಾಯು ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಪ್ರತಿದಿನ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಪರಿಶೀಲಿಸುತ್ತಾ ಇರಬೇಕು. ವೈದ್ಯರು ನಿರ್ದೇಶಿಸಿದಂತೆ ಎಲ್ಲಾ ಔಷಧಿಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.