Tips To Keep Heart Healthy: ಸಾಕಷ್ಟು ಓಡಾಟದಿಂದ ಕೂಡಿದ್ದ ಇಂದಿನ ಜೀವನಶೈಲಿಯಲ್ಲಿ ಜನರ ಕಳಪೆ ಆಹಾರ ಪದ್ಧತಿ ಅವರನ್ನು ಹ್ರುದ್ರೋಗಕ್ಕೀಡು ಮಾಡುತ್ತಿದೆ.ಹೃದಯ ನಮ್ಮ ದೇಹದ ಒಂದು ಮಹತ್ವದ ಅಂಗವಾಗಿದ್ದು , ಇದರ ಮೇಲೆ ನಮ್ಮ ಶರೀರದ ಸಂಪೂರ್ಣ ಜವಾಬ್ದಾರಿ ಇರುತ್ತದೆ.  ಆದರೆ, ನಾವು ನಮಗರಿವಿಲ್ಲದಂತೆ ಮಾಡುವ ಸಣ್ಣ ತಪ್ಪುಗಳು ಹೃದಯದ ಹಾನಿಗೆ ಕಾರಣವಾಗುತ್ತವೆ. ನಾವೆಲ್ಲರೂ ನಮ್ಮ ದೈನಂದಿನ ಜೀವನದಲ್ಲಿ ನಮಗೆ ಅನಾರೋಗ್ಯಕರವಾದ ಹಲವು ಆಹಾರಗಳನ್ನು ಸೇವಿಸುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಹೃದಯ ಮತ್ತು ದೇಹದ ಬಗ್ಗೆ ಹೇಗೆ ಕಾಳಜಿ ವಹಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಹೃದಯವನ್ನು ಆರೋಗ್ಯವಾಗಿಡಲು, ಈ ವಿಷಯಗಳನ್ನು ನೆನಪಿನಲ್ಲಿಡಿ-
ಕಡಿಮೆ ಕ್ಯಾಲೋರಿ ಇರುವ ಆಹಾರವನ್ನು ಸೇವಿಸಿ

ಹೆಚ್ಚಿನ ಕ್ಯಾಲೋರಿ ಮತ್ತು ಸೋಡಿಯಂ ಹೊಂದಿರುವ ಆಹಾರ ಸೇವನೆಯನ್ನು ನೀವು ಆದಷ್ಟು ತ್ಯಜಿಸಬೇಕು. ಸ್ಥೂಲಕಾಯತೆ, ಮಧುಮೇಹ ಮತ್ತು ಹೃದ್ರೋಗ ಸೇರಿದಂತೆ ಹಲವು ಕಾಯಿಲೆಗಳಿಗೆ ಇದು ಕಾರಣವಾಗುತ್ತದೆ. ನೀವು ಈ ಕಾಯಿಲೆಗಳಿಂದ ದೂರವಿರಲು ಬಸುತ್ತಿದ್ದರೆ, ಇಂತಹ ಆಹಾರಗಳಿಂದ ಆದಷ್ಟು ಅಂತರ ಕಾಯ್ದುಕೊಳ್ಳಿ.

ತಟ್ಟೆಯಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಶಾಮೀಲುಗೊಳಿಸಿ 
ತರಕಾರಿಗಳು ಮತ್ತು ಹಣ್ಣುಗಳು ದೇಹಕ್ಕೆ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುವ ಉತ್ತಮ ಮೂಲಗಳಾಗಿವೆ. ತರಕಾರಿಗಳು ಮತ್ತು ಹಣ್ಣುಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಹಣ್ಣುಗಳು ಮತ್ತು ಸಸ್ಯಾಹಾರವು ಹೃದ್ರೋಗವನ್ನು ತಡೆಗಟ್ಟುವಲ್ಲಿ ತುಂಬಾ ಸಹಕಾರಿಯಾಗಿದೆ. ಆದ್ದರಿಂದ, ನೀವು ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳಬೇಕು.

ಧಾನ್ಯಗಳು
ಧಾನ್ಯಗಳು ಫೈಬರ್ ಮತ್ತು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ, ಇವು ರಕ್ತದೊತ್ತಡ ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ. ಆದ್ದರಿಂದ, ಸಂಸ್ಕರಿಸಿದ ಆಹಾರದ ಬದಲಿಗೆ, ಆಹಾರದಲ್ಲಿ ಧಾನ್ಯಗಳನ್ನು ಶಾಮೀಲುಗೊಳಿಸಿ.


ಇದನ್ನೂ ಓದಿ-ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡಿದ್ದ ಬಿಎಸ್ಎಫ್ ಯೋಧನ ಅಂಗಾಗ ದಾನ

ಉಪ್ಪನ್ನು ನಿಯಂತ್ರಿಸಿ
ನೀವು ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇವಿಸುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಏಕೆಂದರೆ ಅತಿಯಾದ ಉಪ್ಪು ಸೇವನೆ ನಿಮ್ಮನ್ನು ಅಧಿಕ ರಕ್ತದೊತ್ತಡದ ರೋಗಿಯನ್ನಾಗಿ ಮಾಡುತ್ತದೆ ಮತ್ತು ಇದು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಉಪ್ಪನ್ನು ಸೀಮಿತಗೊಳಿಸುವುದರಿಂದ, ನಿಮ್ಮ ಹೃದಯವನ್ನು ನೀವು ರೋಗಗಳಿಂದ ದೂರವಿಡಬಹುದು.


ಇದನ್ನೂ ಓದಿ-High BP: ಅಧಿಕ ರಕ್ತದೊತ್ತಡಕ್ಕೆ ಆಹ್ವಾನ ನೀಡುವ ಈ 5 ಸಂಗತಿಗಳಿಂದ ಇಂದೇ ಅಂತರ ಕಾಯ್ದುಕೊಳ್ಳಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.