Weight Loss Tips: ಈ ಹಳದಿ ಬಣ್ಣದ ಪದಾರ್ಥಗಳಲ್ಲಿ ಅದ್ಭುತ ಗುಣಗಳಿವೆ, ತೂಕ ಇಳಿಕೆಗೆ ರಾಮಬಾಣ

Weight Loss Foods: ತೂಕ ಇಳಿಕೆಗಾಗಿ ನೀವು ಈ ಮೊದಲು ಕೂಡ ಪ್ರಯತ್ನ ನಡೆಸಿರಬಹುದು. ಆದರೆ, ನಿಮ್ಮ ಮನಸ್ಸಿಗೆ ಹಿಡಿಸುವ ಫಲಿತಾಂಶ ನಿಮಗೆ ಸಿಗದೇ ಇರಬಹುದು. ಹೀಗಿರುವಾಗ ಕೆಲವು ಹಳದಿ ಬಣ್ಣದ ಪದಾರ್ಥಗಳನ್ನು ಟ್ರೈ ಮಾಡಿ ನೀವು ನೋಡಬಹುದು.  

Written by - Nitin Tabib | Last Updated : Oct 9, 2022, 12:05 PM IST
  • ದೈಹಿಕ ಚಟುವಟಿಕೆಗಳ ಕೊರತೆಯ ಹೊರತಾಗಿ,
  • ತೂಕ ಹೆಚ್ಚಾಗಲು ಮತ್ತೊಂದು ದೊಡ್ಡ ಕಾರಣವೆಂದರೆ
  • ನಾವು ಸರಿಯಾದ ಆಹಾರ ಕ್ರಮವನ್ನು ಅನುಸರಿಸದೆ ಇರುವುದು,
Weight Loss Tips: ಈ ಹಳದಿ ಬಣ್ಣದ ಪದಾರ್ಥಗಳಲ್ಲಿ ಅದ್ಭುತ ಗುಣಗಳಿವೆ, ತೂಕ ಇಳಿಕೆಗೆ ರಾಮಬಾಣ title=
Yellow Food For Weight Loss

Yellow Foods For Weight Loss: ದೈಹಿಕ ಚಟುವಟಿಕೆಗಳ ಕೊರತೆಯ ಹೊರತಾಗಿ, ತೂಕ ಹೆಚ್ಚಾಗಲು ಮತ್ತೊಂದು ದೊಡ್ಡ ಕಾರಣವೆಂದರೆ ನಾವು ಸರಿಯಾದ ಆಹಾರ ಕ್ರಮವನ್ನು ಅನುಸರಿಸದೆ ಇರುವುದು, ನಾವು ನಿಯಮಿತವಾಗಿ ಆರೋಗ್ಯಕರ ಆಹಾರವನ್ನು ಸೇವಿಸಿದರೆ, ತೂಕ ಏರಿಕೆಗೆ ಕಡಿವಾಣ ಬೀಳುವುದಲ್ಲದೆ, ಹೆಚ್ಚಾಗಿರುವ ತೂಕವೂ ಕೂಡ ಕಡಿಮೆಯಾಗಲು ಪ್ರಾರಂಭಿಸುತ್ತದೆ. ತೂಕವನ್ನು ಇಳಿಕೆ ಮಾಡಿಕೊಳ್ಳಲು ಪ್ರೋಟೀನ್ ಮತ್ತು ಫೈಬರ್ ನಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಲು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಆಹಾರ ತಜ್ಞ ಡಾ. ಆಯುಷಿ ಯಾದವ್ ಅವರ ಪ್ರಕಾರ, ನಾವು ಕೆಲವು ಹಳದಿ ಬಣ್ಣದ ಪದಾರ್ಥಗಳನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ, ಅದು ಹೆಚ್ಚುತ್ತಿರುವ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

ತೂಕ ಇಳಿಕೆ ಮಾಡುವ ಹಳದಿ ಬಣ್ಣದ ಆಹಾರಗಳು
1. ನಿಂಬೆ ಹಣ್ಣು

ಹಾಗೆ ನೋಡಿದರೆ ನಿಂಬೆ ಹಣ್ಣು ಹಲವಾರು ಪ್ರಯೋಜನಗಳನ್ನು ಹೊಂದಿದೆ, ಅದರಲ್ಲಿಯೂ ವಿಶೇಷವಾಗಿ ಒಂದು ವೇಳೆ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುತ್ತಿದ್ದರೆ, ನಿಂಬೆಯ ಬಳಕೆ ಒಂದು ಪರಿಣಾಮಕಾರಿ ಆಯ್ಕೆಯಾಗಿದೆ. ಇದು ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳ ಸಮೃದ್ಧ ಮೂಲವಾಗಿದೆ, ನಿಂಬೆಯ ಬಳಕೆ ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕುವುದರ ಜೊತೆಗೆ, ಚಯಾಪಚಯ ಕ್ರಿಯೆ ಕೂಡ ಹೆಚ್ಚಾಗುತ್ತದೆ. ನೀವು ಇದನ್ನು ಪಾನೀಯ ಮತ್ತು ಸಲಾಡ್ ರೂಪದಲ್ಲಿಸೇವಿಸಬಹುದು.

2. ಶುಂಠಿ
ನಮ್ಮ ಅಡುಗೆಮನೆಯಲ್ಲಿ ಅತ್ಯಾವಶ್ಯಕವಾಗಿ ಬಳಕೆಯಾಗುವ ಸಾಂಬಾರ ಪದಾರ್ಥಗಳಲ್ಲಿ ಶುಂಠಿ ಕೂಡ ಒಂದು, ಈ ಮಸಾಲೆ ಬಳಸಿ ಅನೇಕ ಪಾಕವಿಧಾನಗಳ ರುಚಿಯನ್ನು ಹೆಚ್ಚಿಸಬಹುದು. ನೀವು ಇದರ ಸಹಾಯದಿಂದ ಪಾನೀಯವನ್ನು ತಯಾರಿಸಿದರೆ, ನಂತರ ಹೆಚ್ಚುತ್ತಿರುವ ತೂಕವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಇದಕ್ಕಾಗಿ, ಒಂದು ಲೋಟ ನೀರನ್ನು ಬಿಸಿ ಮಾಡಿ ಮತ್ತು ಶುಂಠಿಯನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಮಿಶ್ರಣ ಮಾಡಿ. ಈ ಪಾನೀಯವನ್ನು ನೀವು ಬೆಳಗ್ಗೆ ಸೇವಿಸಿ, ಕೆಲವೇ ದಿನಗಳಲ್ಲಿ ಅಪೇಕ್ಷಿತ ಫಲಿತಾಂಶವು ಬರಲು ಪ್ರಾರಂಭಿಸುತ್ತದೆ.

3. ಹಳದಿ ಕ್ಯಾಪ್ಸಿಕಂ
ನೀವು ಹಸಿರು ಕ್ಯಾಪ್ಸಿಕಂ ಅನ್ನು ಹಲವು ಬಾರಿ ಸೇವಿಸಿರಬೇಕು, ಆದರೆ, ಹಳದಿ ಕ್ಯಾಪ್ಸಿಕಂ ಅನ್ನು ಒಮ್ಮೆ ಟ್ರೈ ಮಾಡಿ ನೋಡಿ. ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ, ಇದರಿಂದಾಗಿ ಇದು ಹೊಟ್ಟೆ ಮತ್ತು ಸೊಂಟದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್ ಚಯಾಪಚಯ ಕ್ರಿಯೆಯ ದರವನ್ನು ಸುಧಾರಿಸುತ್ತದೆ. ಕೆಲವರು ಇದನ್ನು ತರಕಾರಿಯಾಗಿ ಬೇಯಿಸಿ ತಿನ್ನುತ್ತಾರೆ ಅಥವಾ ನೀವು ಇದನ್ನು ಸಲಾಡ್ ಸಲಾಡ್ ರೂಪದಲ್ಲಿಯೂ ಕೂಡ ಸೇವಿಸಬಹುದು. 

ಇದನ್ನೂ ಓದಿ-ನಿಮಗೆ ಅಜೀರ್ಣ ಸಮಸ್ಯೆಯೇ? ಹಾಗಿದ್ದಲ್ಲಿ ಇಲ್ಲಿದೆ ಇದಕ್ಕೆ ಮನೆ ಮದ್ದು...!

4. ಬಾಳೆಹಣ್ಣು
ಬಾಳೆಹಣ್ಣು ಒಂದು ಅತ್ಯಂತ ಸಾಮಾನ್ಯ ಹಣ್ಣಾಗಿದ್ದು, ಇದನ್ನು ಬಹುತೇಕರು ಇಷ್ಟಪಡುತ್ತದೆ, ಬಾಳೆಹಣ್ಣು ತಿನ್ನುವುದು ಖಂಡಿತವಾಗಿಯೂ ತೂಕವನ್ನು ಕಡಿಮೆ ಮಾಡುತ್ತದೆ, ಆದರೆ ಇದನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬೇಕು ಎಂದು ನೆನಪಿನಲ್ಲಿಡಬೇಕು. ಇದು ಫೈಬರ್ನಲ್ಲಿ ಸಮೃದ್ಧವಾಗಿದೆ, ಇದರಿಂದಾಗಿ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿದ ಅನುಭವ ನೀಡುತ್ತದೆ. ಆದರೆ ಅತಿಯಾಗಿ ಸೇವನೆ ಬೇಡ.

ಇದನ್ನೂ ಓದಿ-Hair Care : ಕೂದಲು ಉದುರುವಿಕೆ ತಡೆಯಲು ಈ 2 ಎಣ್ಣೆ ಬಳಸಿ.. ಮ್ಯಾಜಿಕ್‌ ನೋಡಿ.!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News