ನವದೆಹಲಿ: ಆರೋಗ್ಯವಾಗಿರಲು ನಮಗೆ ಹಿಮೋಗ್ಲೋಬಿನ್ ಕೊರತೆ ಇರಬಾರದು. ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯಿಂದ ಅನೇಕ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಹಿಮೋಗ್ಲೋಬಿನ್ ಒಂದು ಪ್ರೋಟೀನ್, ಇದು ದೇಹದ ವಿವಿಧ ಭಾಗಗಳಿಗೆ ಆಮ್ಲಜನಕ ತಲುಪಿಸಲು ಕೆಲಸ ಮಾಡುತ್ತದೆ. ವ್ಯಕ್ತಿಯ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದರೆ, ಅದು ರಕ್ತಹೀನತೆಗೆ ಕಾರಣವಾಗಬಹುದು.


COMMERCIAL BREAK
SCROLL TO CONTINUE READING

ನಿಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆಯಿದ್ದರೆ, ಕೆಲವು ಆರೋಗ್ಯಕರ ಜ್ಯೂಸ್ ಸೇವಿಸಬಹುದು. ಇಂದು ನಾವು ನಿಮಗೆ ಕೆಲವು ಆರೋಗ್ಯಕರ ಪಾನೀಯಗಳ ಬಗ್ಗೆ ತಿಳಿಸಿಕೊಡುತ್ತೇವೆ. ಇವುಗಳನ್ನು ಕುಡಿಯುವುದರಿಂದ ನಿಮಗೆ ಶಕ್ತಿ ಸಿಗುತ್ತದೆ ಮತ್ತು ಹಿಮೋಗ್ಲೋಬಿನ್ ಮಟ್ಟವೂ ಹೆಚ್ಚಾಗುತ್ತದೆ.


1. ದಾಳಿಂಬೆ ಜ್ಯೂಸ್ ಕುಡಿಯಿರಿ


ದೇಹದಲ್ಲಿ ರಕ್ತವನ್ನು ಹೆಚ್ಚಿಸಲು ನೀವು ದಾಳಿಂಬೆ ರಸವನ್ನು ಕುಡಿಯಬಹುದು. ಅಲ್ಲದೆ ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸಲು ಇದು ಉತ್ತಮ ಆಯ್ಕೆ. ವಾಸ್ತವವಾಗಿ ದಾಳಿಂಬೆಯಲ್ಲಿ ಗಣನೀಯ ಪ್ರಮಾಣದ ಕಬ್ಬಿಣ ಮತ್ತು ವಿಟಮಿನ್ ಸಿ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇದರ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ರಕ್ತದ ಕೊರತೆ ದೂರವಾಗುತ್ತದೆ. ಇದರೊಂದಿಗೆ ಆಮ್ಲಜನಕ ಪೂರೈಕೆಯೂ ಉತ್ತಮ ರೀತಿಯಲ್ಲಿ ನಡೆಯಲಿದೆ.


ಇದನ್ನೂ ಓದಿ: ಮೊಟ್ಟೆ ಜೊತೆ ಈ ಪದಾರ್ಥಗಳನ್ನು ಬೆರೆಸಿ ತಿಂದರೆ ಸುಲಭವಾಗಿ ಇಳಿಯುತ್ತೆ ತೂಕ


2. ಬೀಟ್ರೂಟ್ ಜ್ಯೂಸ್ ಸೇವಿಸಿ


ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಲು ನೀವು ಬೀಟ್ರೂಟ್ ಜ್ಯೂಸ್ ಕುಡಿಯಬಹುದು. ಬೇಸಿಗೆಯಲ್ಲಿ ನಿಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಿದ್ದರೆ, ಬೀಟ್ರೂಟ್ ಸೇವಿಸಿ. ವಾಸ್ತವವಾಗಿ ಬೀಟ್ರೂಟ್ನಲ್ಲಿ ಬಹಳಷ್ಟು ಕಬ್ಬಿಣವಿದೆ. ಇದರೊಂದಿಗೆ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ಇದರಲ್ಲಿ ಕಂಡುಬರುತ್ತದೆ. ನೀವು ದಿನವಿಡೀ 1 ಕಪ್ ಬೀಟ್ರೂಟ್ ಜ್ಯೂಸ್ ಕುಡಿಯಬಹುದು.


3. ಪಾಲಕ್ ಜ್ಯೂಸ್ ಕುಡಿಯಿರಿ


ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಿದ್ದರೆ, ನೀವು ಪಾಲಕ್ ಜ್ಯೂಸ್ ಅಥವಾ ಸ್ಮೂಥಿ ಕುಡಿಯಬಹುದು. ಪಾಲಕ್ ಸೊಪ್ಪನ್ನು ಚಳಿಗಾಲದಲ್ಲಿ ಹೆಚ್ಚು ಬಳಸುತ್ತಾರೆ. ಆದರೆ ನೀವು ಬೇಸಿಗೆಯಲ್ಲೂ ಪಾಲಕ್ ಜ್ಯೂಸ್ ಸೇವಿಸಬಹುದು. ಪಾಲಕ್ ಸೊಪ್ಪು ಕಬ್ಬಿಣ, ವಿಟಮಿನ್ ಎ, ವಿಟಮಿನ್ ಸಿ ಯಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಇದು ತುಂಬಾ ಸಹಕಾರಿ.


ಇದನ್ನೂ ಓದಿ: ಬೊಜ್ಜು ಕರಗಿಸಲು ಕಲ್ಲಂಗಡಿ ಹಣ್ಣನ್ನು ಹೀಗೆ ತಿನ್ನಿ! ಕೆಲವೇ ದಿನಗಳಲ್ಲಿ ಸಿಗುವುದು ರಿಸಲ್ಟ್


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.) 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.