Hemoglobin: ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ
ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾದ್ರೆ ಬಹುತೇಕರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅದು ಕಡಿಮೆಯಾದರೆ ಯಾವ ಸಮಸ್ಯೆ ಬರುತ್ತದೆ ಅನ್ನೋದು ಗೊತ್ತಿರುವುದಿಲ್ಲ. ಹಿಮೋಗ್ಲೋಬಿನ್ ಎಂದರೆ ಕೆಂಪುರಕ್ತ ಕಣಗಳಲ್ಲಿರುವ ಒಂದು ಬಗೆಯ ಪ್ರೋಟೀನ್. ಇದು ದೇಹದಲ್ಲಿ ಆಮ್ಲಜನಕದ ಮೇಲುಸ್ತುವಾರಿ ನೋಡಿಕೊಳ್ಳುವ ವಿಭಾಗ. ಈ ವಿಭಾಗದಲ್ಲಿ ಎಡವಟ್ಟಾದರೆ ಉಳಿದೆಲ್ಲ ವಿಭಾಗದಲ್ಲೂ ಏರುಪೇರು ಉಂಟಾಗುತ್ತದೆ. ಹೀಗಾಗಿ ಇದರ ಮಟ್ಟದಲ್ಲಿ ತೀರಾ ಏರುಪೇರು ಆಗುವಂತಿಲ್ಲ. ಹಿಮೋಗ್ಲೋಬಿನ್ ಕಡಿಮೆಯಾದರೆ ಅದನ್ನು ರಕ್ತಹೀನತೆ ಅಥವಾ ಅನೀಮಿಯ ಎಂದು ಕರೆಯಲಾಗುತ್ತದೆ. ಇದನ್ನು ಸರಿತೂಗಿಸುವಂಥ ಆಹಾರಗಳು ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ....
Hemoglobin: ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾದ್ರೆ ಬಹುತೇಕರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅದು ಕಡಿಮೆಯಾದರೆ ಯಾವ ಸಮಸ್ಯೆ ಬರುತ್ತದೆ ಅನ್ನೋದು ಗೊತ್ತಿರುವುದಿಲ್ಲ. ಹಿಮೋಗ್ಲೋಬಿನ್ ಎಂದರೆ ಕೆಂಪುರಕ್ತ ಕಣಗಳಲ್ಲಿರುವ ಒಂದು ಬಗೆಯ ಪ್ರೋಟೀನ್. ಇದು ದೇಹದಲ್ಲಿ ಆಮ್ಲಜನಕದ ಮೇಲುಸ್ತುವಾರಿ ನೋಡಿಕೊಳ್ಳುವ ವಿಭಾಗ. ಈ ವಿಭಾಗದಲ್ಲಿ ಎಡವಟ್ಟಾದರೆ ಉಳಿದೆಲ್ಲ ವಿಭಾಗದಲ್ಲೂ ಏರುಪೇರು ಉಂಟಾಗುತ್ತದೆ. ಹೀಗಾಗಿ ಇದರ ಮಟ್ಟದಲ್ಲಿ ತೀರಾ ಏರುಪೇರು ಆಗುವಂತಿಲ್ಲ. ಹಿಮೋಗ್ಲೋಬಿನ್ ಕಡಿಮೆಯಾದರೆ ಅದನ್ನು ರಕ್ತಹೀನತೆ ಅಥವಾ ಅನೀಮಿಯ ಎಂದು ಕರೆಯಲಾಗುತ್ತದೆ. ಇದನ್ನು ಸರಿತೂಗಿಸುವಂಥ ಆಹಾರಗಳು ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ....
ಕಬ್ಬಿಣಯುಕ್ತ ಆಹಾರಗಳು: ಆಹಾರದಲ್ಲಿ ಕಬ್ಬಿಣದಂಶ ಹೆಚ್ಚಿದ್ದರೆ ರಕ್ತಹೀನತೆ ನಿವಾರಿಸಲು ನೆರವಾಗುತ್ತದೆ. ಮೀನು, ಕೆಂಪು ಮಾಂಸ, ಚಿಕನ್, ಕಾಳುಗಳು, ಬೇಳೆ ಕಾಳುಗಳು, ತೋಫು, ಹಸಿರು ಸೊಪ್ಪು ಮತ್ತು ತರಕಾರಿಗಳು, ಬ್ರೊಕೊಲಿ, ಒಣದ್ರಾಕ್ಷಿ, ಎಪ್ರಿಕಾಟ್.
ಇದನ್ನೂ ಓದಿ: ಈ ಮರದ ಒಂದು ಎಲೆಯನ್ನು ಬೆಳಗೆದ್ದು ಜಗಿಯಿರಿ.. ಇಡೀ ದಿನ ಬ್ಲಡ್ ಶುಗರ್ ಕಂಟ್ರೋಲ್‌ನಲ್ಲಿರುವುದು!
ವಿಟಮಿನ್ ಸಿ: ಕಬ್ಬಿಣಯುಕ್ತ ಆಹಾರವನ್ನು ಸರಿಯಾಗಿ ಹೀರಲ್ಪಡುವುದಕ್ಕೆ ವಿಟಮಿನ್ ʼCʼ ಅಂಶ ಅಗತ್ಯ. ಹೀಗಾಗಿ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ನಿಂಬೆ, ಬೆರ್ರಿಗಳು, ಕಿವಿ ಹಣ್ಣು, ಕ್ಯಾಪ್ಸಿಕಂ, ಟೊಮೇಟೊ ಇತ್ಯಾದಿಗಳು ದೈನಂದಿನ ಆಹಾರದಲ್ಲಿಬೇಕು.
ಫೋಲೇಟ್: ಹಿಮೋಗ್ಲೋಬಿನ್ ಉತ್ಪಾದನೆಯಲ್ಲಿ ವಿಟಮಿನ್ ಬಿ೯ ಅಥವಾ ಫೋಲೇಟ್ ಪ್ರಧಾನವಾಗಿ ಕೆಲಸ ಮಾಡುತ್ತದೆ. ಪಾಲಕ್ ಸೊಪ್ಪು, ಬ್ರೊಕೊಲಿ, ಅವಕಾಡೊ ಅಥವಾ ಬೆಣ್ಣೆ ಹಣ್ಣು, ಕಿತ್ತಳೆ ಹಣ್ಣು ಅಗತ್ಯವಾಗಿ ಬೇಕು.
ಬೀಟ್‌ರೂಟ್: ಈ ತರಕಾರಿಯಿಂದ ಹಲವು ರೀತಿಯ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ. ಇದರಲ್ಲಿ ಕಬ್ಬಿಣದಂಶ, ಫಾಲಿಕ್ ಆಮ್ಲ ಮತ್ತು ಪೊಟಾಶಿಯಂ ಒಟ್ಟಿಗೆ ದೊರೆಯುತ್ತದೆ. ಇವೆಲ್ಲವೂ ಹಿಮೋಗ್ಲೋಬಿನ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ಹೀಗಾಗಿ ನಿಯಮಿತವಾಗಿ ಬೀಟ್‌ರೂಟ್ ಸೇವಿಸಬೇಕು.
ದಾಳಿಂಬೆ: ಈ ಹಣ್ಣಿನಲ್ಲಿ ಕಬ್ಬಿಣ ಮತ್ತು ವಿಟಮಿನ್ ʼCʼ ಇವೆ. ಈ ಮೂಲಕ ಹಿಮೋಗ್ಲೋಬಿನ್ ಹೆಚ್ಚು ಉತ್ಪಾದನೆ ಆಗುವುದಕ್ಕೆ ನೆರವಾಗುತ್ತದೆ. ದಾಳಿಂಬೆ ರಸ ಕುಡಿಯುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ನೀರು & ನಿದ್ದೆ: ದಿನಕ್ಕೆ 8 ತಾಸು ನಿದ್ದೆ ಮತ್ತು 8 ಗ್ಲಾಸ್ ನೀರು ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯದಿದ್ದರೆ ಕೆಂಪುರಕ್ತಕಣಗಳ ಉತ್ಪಾದನೆಯಲ್ಲಿ ತೊಡಕಾಗುತ್ತದೆ. ಇದು ಹಿಮೋಗ್ಲೋಬಿನ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ನೀರಿನ ಕೊರತೆಯಾದರೆ ರಕ್ತದ ಸಾಂದ್ರತೆ ಮತ್ತು ಪ್ರಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. .
ಕೆಫೇನ್‌ಯುಕ್ತ ಪೇಯಗಳು: ಕೆಲವು ಆಹಾರಗಳು ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತವೆ. ಕಾಫಿ, ಚಹಾದಂತಹ ಕೆಫೇನ್‌ಯುಕ್ತ ಪೇಯಗಳು, ಕ್ಯಾಲ್ಶಿಯಂ ಸಾಂದ್ರವಾಗಿರುವ ಆಹಾರಗಳು, ನಾರುಭರಿತ ತಿನಿಸುಗಳನ್ನು ಊಟದ ಸಮಯದಲ್ಲಿ ದೂರ ಮಾಡಿ. ಇದರಿಂದ ಕಬ್ಬಿಣದಂಶ ಚೆನ್ನಾಗಿ ಹೀರಲ್ಪಡುತ್ತದೆ.
ಇದನ್ನೂ ಓದಿ: Diabetes Symptoms In Men: ಪುರುಷರ ಕಾಲು, ಪಾದಗಳಲ್ಲಿ ಕಂಡುಬರುವ ಈ ಲಕ್ಷಣಗಳು ಡಯಾಬಿಟಿಸ್ ಸಂಕೇತವೂ ಆಗಿರಬಹುದು!
ಆದಷ್ಟು ದೂರವಿರಿ: ಆಲ್ಕೋಹಾಲ್ ಮತ್ತು ಜಡ ಜೀವನ ಹಿಮೋಗ್ಲೋಬಿನ್ ಶತ್ರುಗಳು. ಆಲ್ಕೋಹಾಲ್ ಸೇವನೆಯಿಂದ ಕಬ್ಬಿಣದಂಶ ದೇಹ ಹೀರಿಕೊಳ್ಳುವುದಕ್ಕೆ ಅಡೆತಡೆ ಉಂಟಾಗುತ್ತದೆ. ಜಡ ಜೀವನವು ರಕ್ತ ಪರಿಚಲನೆಯ ಶತ್ರು. ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ ಕೆಂಪು ರಕ್ತಕಣಗಳ ಉತ್ಪಾದನೆ ಚೆನ್ನಾಗಿ ಆಗಿ, ರಕ್ತದ ಪರಿಚಲನೆಯೂ ಸರಾಗವಾಗಿರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.