Uric Acid: ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಅದು ಕೀಲುಗಳಲ್ಲಿ ವಿಪರೀತ ನೋವಿಗೆ ಕಾರಣವಾಗುತ್ತದೆ. ಯೂರಿಕ್ ಆಸಿಡ್ ಹೆಚ್ಚಾಗಲು ಹಲವು ಕಾರಣಗಳಿವೆ. ಆದರೂ ನಿಮ್ಮ ತಪ್ಪಾದ ಆಹಾರ ಪದ್ದತಿಯೂ ಇದಕ್ಕೆ ಕಾರಣವಾಗಿರಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಆರೋಗ್ಯ ತಜ್ಞರ ಪ್ರಕಾರ, ಯೂರಿಕ್ ಆಸಿಡ್ ಸಮಸ್ಯೆ ಇರುವವರಿಗೆ ಕೆಲವು ಆಹಾರಗಳನ್ನು ವಿಷಕ್ಕೆ ಸಮಾನ ಎನ್ನಲಾಗುತ್ತದೆ. ಈ ಆಹಾರಗಳ ಸೇವನೆಯಿಂದ ಯೂರಿಕ್ ಆಸಿಡ್ ವೇಗವಾಗಿ ಹೆಚ್ಚಾಗುತ್ತದೆ. ನಿಮಗೂ ಯೂರಿಕ್ ಆಸಿಡ್ ಸಮಸ್ಯೆ ಇದ್ದರೆ ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ಅಂತಹ ಆಹಾರಗಳೆಂದರೆ...
ಸಿಹಿ ತಿನಿಸುಗಳ ಸೇವನೆಯು ದೇಹದಲ್ಲಿ ಯೂರಿಕ್ ಆಸಿಡ್ ಅಂಶವನ್ನು ವೇಗವಾಗಿ ಹೆಚ್ಚಿಸುತ್ತದೆ. ಹಾಗಾಗಿ, ನಿಮಗೆ ಯೂರಿಕ್ ಆಸಿಡ್ ಸಮಸ್ಯೆಯಿದ್ದರೆ ಸಿಹಿ ತಿನಿಸುಗಳ ಸೇವನೆಯನ್ನು ಮಿತಗೊಳಿಸಿದರೆ ಒಳಿತು.
ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ, ನೀವು ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದರೆ ಬಿಯರ್,ವೈನ್ ನಂತಹ ಅಧಿಕ ಪ್ಯೂರಿನ್ ಪಾನೀಯಗಳ ಸೇವಣೆಯಿಯನ್ನು ತಪ್ಪಿಸಿ.
ಈ ಬದಲಾದ ಜೀವನಶೈಲಿಯಲ್ಲಿ ಸಂಸಕ್ರಿಸಿದ ಆಹಾರಗಳ ಬಳಕೆ ತುಂಬಾ ಹೆಚ್ಚಾಗಿದೆ. ಆದರೆ, ಸಂಸ್ಕರಿಸಿದ ಆಹಾರಗಳನ್ನು ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳ ಜೊತೆಗೆ ದೇಹದಲ್ಲಿ ಯೂರಿಕ್ ಆಸಿಡ್ ಕೂಡ ಹೆಚ್ಚಾಗುತ್ತದೆ.
ಯೂರಿಕ್ ಆಸಿಡ್ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಕೂಡ ಮಾಂಸಾಹಾರವನ್ನು ಸೇವಿಸಬಾರದು ಇದು ದೇಹಕ್ಕೆ ಹೆಚ್ಚು ಹಾನಿಯುಂಟು ಮಾಡುತ್ತದೆ.
ಸಾಕಷ್ಟು ಪ್ರಮಾಣದಲ್ಲಿ ಫೈಬರ್, ಪ್ರೊಟೀನ್ ಹೊಂದಿರುವ ಹಸಿರು ಬಟಾಣಿಗಳ ಸೇವನೆಯಿಂದಲೂ ಕೂಡ ಯೂರಿಕ್ ಆಸಿಡ್ ಹೆಚ್ಚಾಗುತ್ತದೆ.
ಬಡವರ ಬಾದಾಮಿ ಎಂತಲೇ ಕರೆಯಲ್ಪಡುವ ಕಡಲೆಬೀಜ ಆರೋಗ್ಯಕ್ಕೆ ಒಳ್ಳೆಯದೇ. ಆದರೆ, ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೊಟೀನ್ ಕಂಡುಬರುವುದರಿಂದ ಕಡಲೆಬೀಜದ ಸೇವನೆಯು ದೇಹದಲ್ಲಿ ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹ