Hepatitis A Symptoms: ಕಳೆದ ಕೆಲ ತಿಂಗಳುಗಳಲ್ಲಿ ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ ಹೆಪಟೈಟಿಸ್ ಎ ಪ್ರಕರಣಗಳು (Hepatitis A cases in Kerala) ವೇಗವಾಗಿ ಹೆಚ್ಚಾಗುತ್ತಿದೆ. ಪಿತ್ತಜನಕಾಂಗಕ್ಕೆ ಹಾನಿಯುಂಟು ಮಾಡುವ ಹೆಪಟೈಟಿಸ್ ಎ ಕಾಯಿಲೆಯಿಂದ ಇದುವರೆಗೆ 12 ಜನರು ಮೃತಪಟ್ಟಿದ್ದಾರೆ.  


COMMERCIAL BREAK
SCROLL TO CONTINUE READING

ಲಭ್ಯವಿರುವ ಮಾಹಿತಿಯ ಪ್ರಕಾರ, ಕೇರಳದ ಮಲಪ್ಪುರಂ, ಎರ್ನಾಕುಲಂ, ಕೋಝಿಕ್ಕೋಡ್ ಮತ್ತು ತ್ರಿಶೂರ್ ಪ್ರದೇಶಗಳಲ್ಲಿ ಹೆಪಟೈಟಿಸ್ ಎ ಪ್ರಕರಣಗಳು (Hepatitis A cases) ವೇಗವಾಗಿ ಹೆಚ್ಚಾಗುತ್ತಿದೆ. ಇದುವರೆಗೂ ರಾಜ್ಯದಲ್ಲಿ ಸುಮಾರು 2000 ಪ್ರಕರಣಗಳು ಪತ್ತೆಯಾಗಿದ್ದು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿರುವ ಕೇರಳ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ. 


ಹೆಪಟೈಟಿಸ್ ಎ ಕಾಯಿಲೆ: 
ಹೆಪಟೈಟಿಸ್ ಎ ರೋಗವು (Hepatitis A Disease) ಯಾವುದೇ ಗಂಭೀರ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ, ಹೆಪಟೈಟಿಸ್ ಎ ವೈರಸ್ ನೇರವಾಗಿ ಯಕೃತ್ತಿನ (Liver) ಮೇಲೆ ದಾಳಿ ಮಾಡುತ್ತದೆ, ಇದರಿಂದಾಗಿ ಕೆಲವು ರೋಗಿಗಳು ಕಾಮಾಲೆಗೆ ಒಳಗಾಗಬಹುದು. ಇನ್ನೂ ಕೆಲವರಿಗೆ ಯಕೃತ್ ಹಾನಿಯಾಗಬಹುದು. ಆರಂಭದಲ್ಲಿಯೇ 
ಈ ಸಮಸ್ಯೆಯನ್ನು ಗುರುತಿಸಿ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ಸಾವಿಗೂ ಕಾರಣವಾಗಬಹುದು. 


ಇದನ್ನೂ ಓದಿ- ದೇಹದಲ್ಲಿ ರಕ್ತದ ಅಂಶವನ್ನು ಹೆಚ್ಚಿಸಲಿವೆ ಈ 5 ಆಹಾರಗಳು...!


ಹೆಪಟೈಟಿಸ್ ಎ  ಮಾರಣಾಂತಿಕ ಸ್ವರೂಪ ಪಡೆಯಲು ಕಾರಣವೇನು? 
ಆರೋಗ್ಯ ತಜ್ಞರ ಪ್ರಕಾರ, ಕಲುಷಿತ ಆಹಾರ, ಕಲುಷಿತ ನೀರಿನ ಸೇವನೆ ಹೆಪಟೈಟಿಸ್ ಎ  ಮಾರಣಾಂತಿಕ ಸ್ವರೂಪವನ್ನು ಪಡೆಯಲು ಪ್ರಮುಖ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. 


ಹೆಪಟೈಟಿಸ್ ಎ ರೋಗದ ಲಕ್ಷಣಗಳೇನು?
ಮೊದಲೇ ತಿಳಿಸಿದಂತೆ ಹೆಪಟೈಟಿಸ್ ಎ ರೋಗವು ಯಾವುದೇ ಗಂಭೀರ ರೋಗ ಲಕ್ಷಣಗಳನ್ನು ಒಳಗೊಂಡಿರುವುದಿಲ್ಲ. ಆದರೂ, ಹೆಪಟೈಟಿಸ್ ಎ ರೋಗದ ಕೆಲವು ಸಾಮಾನ್ಯ ಲಕ್ಷಣಗಳೆಂದರೆ... 
>> ಏನೇ ತಿಂದರೂ ವಾಂತಿಯಾಗುವುದು 
>> ಆಯಾಸ/ದೌರ್ಬಲ್ಯ 
>> ತೀವ್ರ ಹೊಟ್ಟೆ ನೋವು 
>> ಹಸಿವಿನ ಕೊರತೆ 
>> ಅತಿಯಾದ ಜ್ವರ 
>> ಗಾಢ ಬಣ್ಣದ ಮೂತ್ರ 
>> ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು
>> ತೀವ್ರ ತುರಿಕೆ ಸಮಸ್ಯೆ 


ಇದನ್ನೂ ಓದಿ- Period Abnormalities: ಋತುಚಕ್ರದ ಸಮಯದಲ್ಲಿ ಈ ಐದು ಅಸಹಜತೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ!!


ಹೆಪಟೈಟಿಸ್ ಎ ಚಿಕಿತ್ಸೆ: 
ಹೆಪಟೈಟಿಸ್ ಎ ತಡೆಗಟ್ಟಲು ಚಿಕಿತ್ಸೆ ಲಭ್ಯವಿದೆ. ಹೆಪಟೈಟಿಸ್ ಎ ಲಸಿಕೆ ಅಥವಾ ಇಮ್ಯುನೊಗ್ಲಾಬ್ಯುಲಿನ್ ಎಂಬ ಪ್ರತಿಕಾಯದ ಚುಚ್ಚುಮದ್ದು ಈ ವೈರಸ್‌ನ ಸಂಪರ್ಕಕ್ಕೆ ಬಂದ ಎರಡು ವಾರಗಳಲ್ಲಿ ಈ ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. 


ಹೆಪಟೈಟಿಸ್ ಎ ನಿಂದ ದೂರ ಉಳಿಯಲು ಏನು ಮಾಡಬೇಕು? 
* ಆಗಾಗ್ಗೆ ಕೈ ತೊಳೆಯುತ್ತಿರಿ. 
* ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. 
* ಚೆನ್ನಾಗಿ ಕುದಿಸಿ ಶೋಧಿಸಿದ ನೀರನ್ನಷ್ಟೇ ಕುಡಿಯಿರಿ. 
* ಹೊರಗಿನ ಶೌಚಾಲಯಗಳನ್ನು ಬಳಸುವುದನ್ನು ತಪ್ಪಿಸಿ. 
* ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಿ. 
* ವಾಂತಿ, ಅತಿಸಾರದ ಸಂದರ್ಭದಲ್ಲಿ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.