ನಿಸರ್ಗದಲ್ಲಿ ಸಿಗುವ ಸಾವಿರಾರು ಹಣ್ಣುಗಳು ನಮ್ಮ ಆರೋಗ್ಯಕ್ಕೆ ಸಂಭಂದಿಸಿದಂತೆ ತುಂಬಾ ಉಪಯೋಗಕ್ಕೆ ಬರುತ್ತವೆ. ಸೇಬು ಹಣ್ಣು, ಕಿತ್ತಳೆ ಹಣ್ಣು, ದ್ರಾಕ್ಷಿ, ಬಾಳೆಹಣ್ಣು, ಹೀಗೆ ಎಲ್ಲ ರೀತಿಯ ಹಣ್ಣುಗಳು  ಆರೋಗ್ಯಕ್ಕೆ ಪ್ರಯೋಅಜನಕಾರಿಯಾಗಿವೆ. ಇಂದು ನಾವು ನಿಮಗಾಗಿ ಪೈನಾಪಲ್ ನಿಂದ ನಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಹೇಳುತ್ತಿದ್ದೇವೆ.


COMMERCIAL BREAK
SCROLL TO CONTINUE READING

1. ಪೈನಾಪಲ್ ಗೆ ರಕ್ತಸ್ರಾವ(Blood Bleeding)ವನ್ನು ತಡೆಗಟ್ಟುವ ಗುಣವಿದೆ. ಆಗತಾನೆ ಆದ ಗಾಯದ ಮೇಲೆ ಪೈನಾಪಲ್ ರಸವನ್ನು ಹಾಕಿದರೆ ರಕ್ತಸ್ರಾವ ನಿಲ್ಲುತ್ತದೆ.


ಇದನ್ನೂ ಓದಿ : Mistakes After Eating Food:ಊಟವಾದ ಬಳಿಕ ಅಪ್ಪಿ-ತಪ್ಪಿಯೂ ಇವುಗಳನ್ನು ಮಾಡಲೇ ಬಾರದು


2. ಪೈನಾಪಲ್ ಹಣ್ಣು ಸೇವಿಸುವುದರಿಂದ ಅಜೀರ್ಣ(Digestion), ಆಮಶಂಕೆ, ಹೊಟ್ಟೆಯಲ್ಲಿ ಆಗಾಗ ಕಾಣಿಸಿಕೊಳ್ಳುವ ತೊಂದರೆಗಳನ್ನೂ ನಿವಾರಿಸಲು ಸಾಧ್ಯವಿದೆ.


3. ಮಲಬದ್ಧತೆ, ಮೂತ್ರ ಕಟ್ಟುವಿಕೆ ಮತ್ತು ಮೂತ್ರದಲ್ಲಿ ಉರಿ ಸಮಸ್ಯೆಗಳು, ಪೈನಾಪಲ್ ಹಣ್ಣಿ(Pineapple)ನ ಸೇವನೆಯಿಂದ ದೂರ ಮಾಡಬಹುದು.


ಇದನ್ನೂ ಓದಿ : Boost Immunity : ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕರೀಜೀರಿಗೆ ಪೌಡರ್!


4. ಪೈನಾಪಲ್ ಹಣ್ಣಿನ ರಸವನ್ನು ಚರ್ಮ(Skin)ದ ಮೇಲೆ ಲೇಪಿಸಿಕೊಂಡರೆ ಕಜ್ಜಿ, ತುರಿಕೆ, ನೆವೆಯನ್ನುಉಂಟುಮಾಡುವ ಚರ್ಮ ಸಮಸ್ಯೆಗಳಿಂದ ಮುಕ್ತಿಪಡೆಯಲು ಸಾಧ್ಯವಿದೆ.


5. ಆಗಾಗ್ಗೆ ತಪ್ಪದೇ ಪೈನಾಪಲ್ ಹಣ್ಣಿನ ರಸ ಸೇವನೆಯಿಂದ, ದೇಹ(Body)ದಲ್ಲಿ ಕಂಡು ಬರುವ ಹಲವು ರೋಗಗಳ ನಿವಾರಣೆ ಸಾಧ್ಯವಿದೆ.


ಇದನ್ನೂ ಓದಿ : Vitamin B12- ವಿಟಮಿನ್ ಬಿ -12 ಕೊರತೆಯ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ


6. ಪೈನಾಪಲ್ ಹಣ್ಣಿಗೆ ಕರಿಮೆಣಸಿನ ಪುಡಿಯನ್ನು ಹಾಕಿಸೇವಿಸಿದರೆ ಕೆಮ್ಮು(Cough), ಕಫದ ಸಮಸ್ಯೆ ಕಡಿಮೆ ಆಗುತ್ತದೆ.


7. ಪೈನಾಪಲ್ ಹಣ್ಣಿನ ಹೋಳುಗಳನ್ನು ಜೇನುತುಪ್ಪ(Honey)ದೊಡನೆ ಸೇವಿಸುವುದರಿಂದ ಯಕೃತ್ತಿನದೋಷ ಮತ್ತು ಹಳದಿ ಕಾಮಾಲೆ ಗುಣವಾಗುತ್ತದೆ.


ಇದನ್ನೂ ಓದಿ : ಕಾಯಿಲೆಗಳಿಂದ ದೂರವಿರಬೇಕಾದರೆ ಮಲಗುವ ಮುನ್ನ ತಪ್ಪಿಯೂ ಈ ವಸ್ತುಗಳ ಸೇವನೆ ಬೇಡ


8. ಪೈನಾಪಲ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಅಸಿಡಿಟಿ ದೂರವಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.