ಕಾಯಿಲೆಗಳಿಂದ ದೂರವಿರಬೇಕಾದರೆ ಮಲಗುವ ಮುನ್ನ ತಪ್ಪಿಯೂ ಈ ವಸ್ತುಗಳ ಸೇವನೆ ಬೇಡ

ಕೈಗೆ ಸಿಕ್ಕ ತಿಂಡಿಯನ್ನು ರಾತ್ರಿ ಹೊತ್ತು ಸೇವಿಸುವುದು ಸರಿಯಾದ ಕ್ರಮವಲ್ಲ. ರಾತ್ರಿ ಹೊತ್ತು ಕೆಲ ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಗಣಿಸಬಹುದು. 

Written by - Ranjitha R K | Last Updated : May 27, 2021, 02:15 PM IST
  • ರಾತ್ರಿ ಹೊತ್ತು ಜಂಕ್ ಫುಡ್ ತಿನ್ನುವುದರಿಂದ ನಿದ್ದೆಯ ಮೇಲೆ ಪರಿಣಾಮ
  • ಮಲಗುವ ಮೊದಲು ಸಿಹಿತಿಂಡಿಯನ್ನು ಖಂಡಿತವಾಗಿಯೂ ಸೇವಿಸಬೇಡಿ
  • ಚಹಾದಲ್ಲಿರುವ ಕೆಫೀನ್ ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ.
ಕಾಯಿಲೆಗಳಿಂದ ದೂರವಿರಬೇಕಾದರೆ ಮಲಗುವ ಮುನ್ನ ತಪ್ಪಿಯೂ ಈ ವಸ್ತುಗಳ ಸೇವನೆ ಬೇಡ title=
ರಾತ್ರಿ ಹೊತ್ತು ಜಂಕ್ ಫುಡ್ ತಿನ್ನುವುದರಿಂದ ನಿದ್ದೆಯ ಮೇಲೆ ಪರಿಣಾಮ (file photo zee news)

ನವದೆಹಲಿ : ರಾತ್ರಿ ವೇಳೆ ಹಸಿವಾಗುತ್ತಿದ್ದರೆ ಕೈಗೆ ಏನು ಸಿಗುತ್ತದೋ ಅದನ್ನು ತಿನ್ನುವ ಅಭ್ಯಾಸ ಅನೇಕರಿಗೆ ಇರುತ್ತದೆ. ಇನ್ನು ಎಷ್ಟೋ ಜನ ರಾತ್ರಿ ಹೊತ್ತು ಏನು ತಿಂದರೂ ನಡೆಯುತ್ತದೆ ಎಂಬ ಮನೋಭಾವ ಹೊಂದಿರುತ್ತಾರೆ. ಆದರೆ ಈ ರೀತಿ ಕೈಗೆ ಸಿಕ್ಕ ತಿಂಡಿಯನ್ನು ರಾತ್ರಿ ಹೊತ್ತು ಸೇವಿಸುವುದು ಸರಿಯಾದ ಕ್ರಮವಲ್ಲ. ರಾತ್ರಿ ಹೊತ್ತು ಕೆಲ ಆಹಾರಗಳನ್ನು (food) ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಗಣಿಸಬಹುದು. ಹಾಗಿದ್ದರೆ ರಾತ್ರಿ ಹೊತ್ತು ದೂರವಿಡಬೇಕಾಗಿರಯವ ಆ ಆಹಾರ ವಸ್ತುಗಳು ಯಾವುವು ನೋಡೋಣ..

1. ಜಂಕ್ ಫುಡ್ : 
ನಿಮಗೆ ರಾತ್ರಿ ಹೊತ್ತು ಜಂಕ್ ಫುಡ್ (Junk food) ಸೇವಿಸುವ ಅಭ್ಯಾಸವಿದ್ದರೆ ಇಂದೇ ಬದಲಾಯಿಸಿಕೊಳ್ಳಿ. ರಾತ್ರಿ ಹೊತ್ತು ಜಂಕ್ ಫುಡ್ ತಿನ್ನುವುದರಿಂದ ನಿದ್ದೆಯ ಮೇಲೆ ಪರಿಣಾಮ . ಇನ್ನು ರಾತ್ರಿ ಹೊತ್ತು ಪಿಜ್ಹಾ ಬರ್ಗರ್ ನಂತಹ ತಿನಿಸುಗಳನ್ನು ಸೇವಿಸುವುದರಿಂದ ದೇಹ ತೂಕ ಹೆಚ್ಚಾಗುತ್ತದೆ . ಎದೆಯುರಿ ಸಮಸ್ಯೆ ಕೂಡಾ ಕಾಣಿಸಿಕೊಳ್ಳಬಹುದು.  . ಜಂಕ್ ಫುಡ್ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದನ್ನು ಸುಲಭವಾಗಿ ಜೀರ್ಣಿಸಿಕೊಳ್ಳುವುದು (Digestion) ಸಾಧ್ಯವಿಲ್ಲ, ಹಾಗಾಗಿ ರಾತ್ರಿ ಹೊತ್ತು ಜಣಕ್ ಫುಡ್ ಸೇವನೆ ಸಲ್ಲದು.  

ಇದನ್ನೂ ಓದಿ : ಸ್ಟ್ರೆಸ್ ಕಡಿಮೆಯಾಬೇಕಾ..? ಚೆನ್ನಾಗಿ ಹಣ್ಣು, ತರಕಾರಿ ತಿನ್ನಿ

2. ಸಿಹಿತಿಂಡಿ : 
ಮಲಗುವ ಮೊದಲು ಸಿಹಿತಿಂಡಿಯನ್ನು (sweets) ಖಂಡಿತವಾಗಿಯೂ ಸೇವಿಸಬೇಡಿ. ಯಾಕೆಂದರೆ ಸಿಹಿತಿಂಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲರಿಗಳಿರುತ್ತವೆ.  ಈ ಕಾರಣದಿಂದಾಗಿ, ಕಣ್ಣಿನ ಪೊರೆಯ ಸಮಸ್ಯೆಯೂ ಎದುರಾಗಬಹದು. 

3. ಚಹಾ : 
ಕೆಲವರಿಗೆ ಮಲಗುವ ಮುನ್ನ ಚಹಾ (Tea) ಸೇವನೆ ಅಭ್ಯಾಸವಿರುತ್ತದೆ. ಆದರೆ ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ ಇದೊಂದು ಅತ್ಯಂತ ಕೆಟ್ಟ ಅಭ್ಯಾಸ.  ಚಹಾದಲ್ಲಿರುವ ಕೆಫೀನ್ ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ.

ಇದನ್ನೂ ಓದಿ : 7 Weight Loss Mistakes: ತೂಕ ಇಳಿಸಿಕೊಳ್ಳಬೇಕೇ! ಹಾಗಿದ್ದರೆ ಬೆಳಿಗ್ಗೆ ಹೊತ್ತು ಈ 7 ತಪ್ಪುಗಳನ್ನು ಎಂದಿಗೂ ಮಾಡಬೇಡಿ

4. ಚಾಕೊಲೇಟ್  : 
ರಾತ್ರಿಯಲ್ಲಿ ಉತ್ತಮ ನಿದ್ರೆಗಾಗಿ ಕೆಫೀನ್ ಚಾಕೊಲೇಟ್ (Chocolate) ತಿನ್ನಬಾರದು. ಇದು ನರಗಳ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಬರುವುದಿಲ್ಲ. ಅಂದರೆ ಬಹಳ ಹೊತ್ತಿನವರೆಗೆ ಎಚ್ಚರವಾಗಿರಬೇಕಾಗುತ್ತದೆ. ನಿದ್ದೆ ಸರಿಯಾಗದಿದ್ದರೆ ಮತ್ತೆ ಅದು ಅನೇಕ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ.  

5. ಐಸ್ ಕ್ರೀಮ್ : 
ಇಸ್ ಕ್ರೀಮ್ ನಲ್ಲಿ (Ice cream) ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶ ಇರುತ್ತದೆ. ರಾತ್ರಿ ಹೊತ್ತು ಐಸ್ ಕ್ರೀಂ ಸೇವನೆ ಎಂದರೆ ದೇಹಕ್ಕೆ ಕೊಬ್ಬನ್ನು (fat) ಜೀರ್ಣಿಸಿಕೊಳ್ಳಲು ಅವಕಾಶ ಸಿಗುವುದಿಲ್ಲ.  ಇದಲ್ಲದೆ, ಐಸ್ ಕ್ರೀಂನಲ್ಲಿರುವ ಸಕ್ಕರೆ ನಿಮ್ಮ ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಬದಲಾಗುತ್ತದೆ. 

ಇದನ್ನೂ ಓದಿ : ಬೆಳಿಗ್ಗೆ ಎದ್ದ ಕೂಡಲೇ ನೀವೂ ಈ ತಪ್ಪು ಮಾಡುತ್ತಿದ್ದರೆ ತಕ್ಷಣ ತಿದ್ದಿಕೊಳ್ಳಿ

6. ಚಿಪ್ಸ್ ಹಾನಿಕಾರಕ : 
ರಾತ್ರಿ ಹೊತ್ತು ಹಸಿವಾಗುತ್ತಿದೆ ಎಂದರೆ ಕೈಗೆ ಸುಲಭವಾಗಿ ಸಿಗುವ ವಸ್ತುವೆಂದರೆ ಚಿಪ್ಸ್ (Chips) . ಆದರೆ ಚಿಪ್ಸ್ ಅನ್ನು ಕೂಡಾ ರಾತ್ರಿ ಜೀರ್ಣಿಸಿಕೊಳ್ಳುವುದು ಹೆಚ್ಚು ಕಷ್ಟ. ಸಂಸ್ಕರಿಸಿದ ಆಹಾರವು ಹೆಚ್ಚಿನ ಪ್ರಮಾಣದಲ್ಲಿ ಗ್ಲುಟಾಮೇಟ್ ಅನ್ನು ಹೊಂದಿರುತ್ತದೆ, ಇದು ನಿದ್ರೆಯ ತೊಂದರೆಗೆ ಕಾರಣವಾಗಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News