ಹೈ ಬಿಪಿಯನ್ನು ಕ್ಷಣಾರ್ಧದಲ್ಲಿ ಕಂಟ್ರೋಲ್ ಮಾಡಬಲ್ಲ ಟಾಪ್ 10 ಆರೋಗ್ಯಕರ ಆಹಾರಗಳಿವು
High Blood Pressure: ಈ ಒತ್ತಡಭರಿತ ಜೀವನಶೈಲಿ ಅತಿ ಚಿಕ್ಕ ವಯಸ್ಸಿನಲ್ಲಿ ಬಿಪಿ, ಶುಗರ್ ರೀತಿಯ ಸಮಸ್ಯೆಗಳು ಕಾಡುವುದು ಸರ್ವೇ ಸಾಮಾನ್ಯ. ಆದರೆ, ನಿಮ್ಮ ದೈನಂದಿನ ಆಹಾರದಲ್ಲಿ ಸ್ವಲ್ಪ ವಿಶೇಷ ಕಾಳಜಿ ವಹಿಸುವ ಮೂಲಕ ನೀವು ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು. ಈ ಲೇಖನದಲ್ಲಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಲ್ಲ ಆಹಾರಗಳ ಬಗ್ಗೆ ತಿಳಿಯೋಣ...
Foods To Control High Blood Pressure: ಸಾಮಾನ್ಯವಾಗಿ ಅಧಿಕ ರಕ್ತದೊತ್ತಡವನ್ನು ಮೂಕ ಕೊಲೆಗಾರ ಎಂತಲೇ ಬಣ್ಣಿಸಲಾಗುತ್ತದೆ. ಈ ಬದಲಾದ ಒತ್ತಡ ಭರಿತ ಜೀವನಶೈಲಿ, ಆಹಾರಪದ್ದತಿ ಸೇರಿದಂತೆ ಅಧಿಕ ರಕ್ತದೊತ್ತಡಕ್ಕೆ ಹಲವು ಕಾರಣಗಳಿರಬಹುದು. ಆದರೆ, ಈ ಹೈ ಬಿಪಿ ಸಮಸ್ಯೆಯು ಮೆದುಳಿನ ಕ್ಷೀಣತೆಯಂತಹ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ, ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ.
ಆರೋಗ್ಯ ತಜ್ಞರ ಪ್ರಕಾರ, ನಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು ಎನ್ನಲಾಗುತ್ತದೆ.
ಈ ಹತ್ತು ಆಹಾರಗಳ ಸಹಾಯದಿಂದ ಹೈ ಬಿಪಿಯನ್ನು ಸುಲಭವಾಗಿ ನಿಯಂತ್ರಿಸಬಹುದು:
ಯಾವುದೇ ಕಾಯಿಲೆಗೆ ವೈದ್ಯರಿಂದ ಸಲಹೆ ಪಡೆದು ಸರಿಯಾದ ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ ನಮ್ಮ ಆಹಾರ ಪದ್ದತಿಯ ಬಗ್ಗೆ ವಿಶೇಷ ಕಾಳಜಿ ವಹಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಲೇಖನದಲ್ಲಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಲ್ಲ ಆಹಾರಗಳ ಬಗ್ಗೆ ತಿಳಿಯೋಣ...
ಹಸಿರು ಸೊಪ್ಪು ತರಕಾರಿಗಳು:
ಹಸಿರು ಸೊಪ್ಪು ತರಕಾರಿಗಳಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿರುತ್ತದೆ. ಇದು ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸಲು ಪ್ರಯೋಜನಕಾರಿ ಆಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ಸೊಪ್ಪು ತರಕಾರಿಗಳನ್ನು ಸಲಾಡ್‌ಗಳು, ಸ್ಮೂಥಿಗಳ ರೂಪದಲ್ಲಿ ಸವಿಯುವುದರಿಂದ ಹೈ ಬಿಪಿ ಕಂಟ್ರೋಲ್ ಮಾಡುವಲ್ಲಿ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಈ ಹೂವಿನ ಗಿಡದ ಎಲೆಗಳ ನೀರು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಗೆ ಶತ್ರು, ಈ ರೀತಿ ಬಳಸಿ!
ಬಾಳೆಹಣ್ಣು:
ಪೊಟ್ಯಾಸಿಯಮ್‌ನ ಪ್ರಬಲ ಮೂಲವಾಗಿರುವ ಬಾಳೆಹಣ್ಣು ಕೂಡ ಆರೋಗ್ಯಕರವಾಗಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಕೊಡುಗೆ ನೀಡುತ್ತದೆ.
ಬೆಳ್ಳುಳ್ಳಿ:
ಆರೋಗ್ಯ ತಜ್ಞರ ಪ್ರಕಾರ, ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಸಂಯುಕ್ತವು ಸೌಮ್ಯವಾದ ರಕ್ತದೊತ್ತಡವನ್ನು ಸುಲಭವಾಗಿ ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ.
ಬೀಟ್ರೂಟ್:
ಬೀಟ್ರೂಟ್ ನಲ್ಲಿ ನೈಟ್ರೇಟ್-ಸಮೃದ್ಧವಾಗಿದ್ದು ಇದು ರಕ್ತನಾಳಗಳನ್ನು ಹಿಗ್ಗಿಸಲು , ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳು:
ನಿಮಗೆಲ್ಲರಿಗೂ ತಿಳಿದಿರುವಂತೆ ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ನಮ್ಮ ದೈನಂದಿನ ಆಹಾರದಲ್ಲಿ ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳ ಸೇವನೆಯಿಂದ ಹೈಬಿಪಿಯನ್ನು ನಿಯಂತ್ರಿಸಬಹುದು.
ನಟ್ಸ್:
ಬಾದಾಮಿ, ಸೂರ್ಯಕಾಂತಿ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಹೆರಳವಾಗಿದ್ದು, ಬೆಳಗಿನ ಉಪಹಾರದಲ್ಲಿ ಇವುಗಳ ಬಳಕೆಯಿಂದ ರಕ್ತದೊತ್ತಡವನ್ನು ಕಂಟ್ರೋಲ್ ಮಾಡಬಹುದು.
ಇದನ್ನೂ ಓದಿ- ಅಗಸೆ ಬೀಜಗಳು ನಿಮ್ಮ ಕೂದಲನ್ನು ರೇಷ್ಮೆಯಂತೆ ಹೊಳೆಯುವ ಹಾಗೆ ಮಾಡುತ್ತದೆ, ಈ ರೀತಿಯಾಗಿ ಮನೆಯಲ್ಲಿ ಹೇರ್ ಜೆಲ್ ತಯಾರಿಸಿ
ಓಟ್ಸ್:
ಸಾಮಾನ್ಯವಾಗಿ ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರು ತಮ್ಮ ಡಯಟ್ನಲ್ಲಿ ಓಟ್ಸ್ ಅನ್ನು ಸೇರಿಸುತ್ತಾರೆ. ಆದರೆ, ಓಟ್ಸ್ ನಲ್ಲಿ ಕಂಡು ಬರುವ ಬೀಟಾ-ಗ್ಲುಕನ್ ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಾತ್ರವಲ್ಲ, ಇದು ಬಿಪಿ ಕಂಟ್ರೋಲ್ ಮಾಡಲು ಅತ್ಯುತ್ತಮ ಆಹಾರ ಎಂತಲೇ ಹೇಳಲಾಗುತ್ತದೆ.
ನೇರಳೆ ಹಣ್ಣು:
ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ನೇರಳೆ ಹಣ್ಣಿನ ಬಳಕೆಯಿಂದಲೂ ಬಿಪಿಯನ್ನು ನಿಯಂತ್ರಣದಲ್ಲಿಡಬಹುದು.
ಫ್ಯಾಟಿ ಫಿಶ್:
ನಿಮ್ಮ ದೈನಂದಿನ ಆಹಾರದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಸಾಲ್ಮನ್, ಮ್ಯಾಕೆರೆಲ್ ಮತ್ತು ಟ್ರೌಟ್‌ನಂತಹ ಕೊಬ್ಬಿನ ಮೀನುಗಳನ್ನು ಸೇರಿಸಿ. ಕನಿಷ್ಠ ವಾರಕ್ಕೆರಡು ಬಾರಿ ಇದರ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ತುಂಬಾ ಪ್ರಯೋಜನಕಾರಿ ಆಗಿದೆ.
ಡಾರ್ಕ್ ಚಾಕೊಲೇಟ್:
ಡಾರ್ಕ್ ಚಾಕೊಲೇಟ್ ನಲ್ಲಿ ಕನಿಷ್ಠ 70% ಕೋಕೋ ಅಂಶ ಕಂಡು ಬರುತ್ತದೆ. ಇದು ರಕ್ತನಾಳಗಳ ವಿಶ್ರಾಂತಿಗೆ ಸಹಕಾರಿಯಾಗಿರುವುದರಿಂದ ಹೈ ಬಿಪಿ ಕಂಟ್ರೋಲ್ ಮಾಡುವಲ್ಲಿಯೂ ಪರಿಣಾಮಕಾರಿ ಎನ್ನಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.