ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದ್ದಂತೆಯೇ ಪಾದದಲ್ಲಿ ಕಾಣಿಸಿಕೊಳ್ಳುತ್ತದೆ ಈ ಲಕ್ಷಣಗಳು
High Cholesterol Warning Sign:ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು ಪಾದಗಳಲ್ಲಿಯೂ ಕಂಡುಬರುತ್ತವೆ. ಆದ್ದರಿಂದ ಪಾದದಲ್ಲಿ ಕಂಡು ಬರುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
High Cholesterol Warning Sign : ಸಾಮಾನ್ಯವಾಗಿ ಹೆಚ್ಚುತ್ತಿರುವ ತೂಕ ಮತ್ತು ಹೊಟ್ಟೆಯ ಕೊಬ್ಬಿನ ಕಾರಣದಿಂದ ಅಧಿಕ ಕೊಲೆಸ್ಟ್ರಾಲ್ ಅನ್ನು ಪತ್ತೆಹಚ್ಚುತ್ತೇವೆ. ಆದರೆ, ಇದನ್ನು ಇತರ ಹಲವು ವಿಧಾನಗಳಲ್ಲಿಯೂ ಕಂಡುಹಿಡಿಯಬಹುದು. ದೇಹದಲ್ಲಿ ಉತ್ಪತ್ತಿಯಾಗುವ ಕೆಟ್ಟ ಕೊಲೆಸ್ಟ್ರಾಲ್ ಮಧುಮೇಹ ಮತ್ತು ಹೃದಯಾಘಾತದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು ಪಾದಗಳಲ್ಲಿಯೂ ಕಂಡುಬರುತ್ತವೆ. ಆದ್ದರಿಂದ ಪಾದದಲ್ಲಿ ಕಂಡು ಬರುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಪಾದಗಳಲ್ಲಿ ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು ಹೇಗೆ ಕಂಡುಬರುತ್ತವೆ? :
1. ಪಾದಗಳು ತಣ್ಣಗಾಗುವುದು :
ಚಳಿಗಾಲದಲ್ಲಿ ಪಾದಗಳು ತಣ್ಣಗಾಗುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಬೇಸಿಗೆಯ ಸಮಯದಲ್ಲಿಯೂ ಪಾದಗಳು ತಣ್ಣಗಾಗುತ್ತಿದ್ದರೆ ಇದು ಎಚ್ಚರಿಕೆಯ ಗಂಟೆ ಎಂದು ಅರ್ಥ ಮಾಡಿಕೊಳ್ಳಬೇಕು. ಇದು ದೇಹದಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್‌ನ ಸಂಕೇತವನ್ನು ನೀಡುತ್ತದೆ.
ಇದನ್ನೂ ಓದಿ : ಉಪ್ಪು ತಿಂದರೆ ನೀರು ಕುಡಿಯಲೇ ಬೇಕು..ಅತಿಯಾದರೇ ಈ ಸಮಸ್ಯೆಗಳನ್ನು ಎದುರಿಸಲೇಬೇಕು..!
2. ಪಾದಗಳ ಚರ್ಮದ ಬಣ್ಣದಲ್ಲಿ ಬದಲಾವಣೆ :
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಪಾದಗಳಿಗೆ ರಕ್ತ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮವು ಪಾದಗಳ ಮೇಲೆ ಸ್ಪಷ್ಟವಾಗಿ ಕಂಡುಬರುತ್ತದೆ. ರಕ್ತದ ಕೊರತೆಯಿಂದಾಗಿ, ರಕ್ತದ ಮೂಲಕ ತಲುಪುವ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗುವುದರಿಂದ ಪಾದಗಳ ಚರ್ಮ ಮತ್ತು ಕಾಲುಗಳ ಉಗುರುಗಳ ಬಣ್ಣವು ಬದಲಾಗಲಾರಂಭಿಸುತ್ತದೆ.
3. ಕಾಲುಗಳಲ್ಲಿ ಸೆಳೆತ :
ಅನೇಕ ಜನರಿಗೆ ರಾತ್ರಿ ಮಲಗುವಾಗ ಕಾಲುಗಳಲ್ಲಿ ಸೆಳೆತ ಕಾಣಿಸಿಕೊಳ್ಳುತ್ತದೆ. ಇದು ಅಧಿಕ ಕೊಲೆಸ್ಟ್ರಾಲ್ ನ ಸಾಮಾನ್ಯ ಲಕ್ಷಣವಾಗಿದೆ. ಅಂದರೆ ನಿಮ್ಮ ದೇಹದ ಕೆಳಭಾಗದಲ್ಲಿರುವ ನರಗಳು ಹಾನಿಗೊಳಗಾಗುತ್ತಿವೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಪಾದಗಳ ಹೊರತಾಗಿ, ಹಿಮ್ಮಡಿ ಅಥವಾ ಕಾಲ್ಬೆರಳುಗಳಲ್ಲಿಯೂ ಸೆಳೆತ ಕಾಣಿಸಿಕೊಳ್ಳುತ್ತದೆ. ಇದು ನಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : Sweet Corn: 15 ದಿನದಲ್ಲಿ ತೂಕ ಇಳಿಸುತ್ತೆ ಮೆಕ್ಕೆಜೋಳ, ಆರೋಗ್ಯಕ್ಕಿದೆ ಭರಪೂರ ಲಾಭ!
4. ಪಾದಗಳಲ್ಲಿ ನೋವು :
ಅಧಿಕ ಕೊಲೆಸ್ಟ್ರಾಲ್‌ನಿಂದಾಗಿ ಪಾದಗಳಿಗೆ ರಕ್ತ ಪೂರೈಕೆಯಲ್ಲಿ ಅಡಚಣೆ ಉಂಟಾಗಿ ಆಮ್ಲಜನಕವು ಸರಿಯಾಗಿ ಪೂರೈಕೆಯಾಗದಿದ್ದಾಗ ತೀವ್ರ ನೋವು ಉಂಟಾಗುತ್ತದೆ. ಕೆಲವೊಮ್ಮೆ ಈ ನೋವು ಎಷ್ಟಿರುತ್ತದೆ ಎಂದರೆ ನಡೆದಾಡುವುದು ಕೂಡಾ ಸಾಧ್ಯವಾಗುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.