Pink salt benefits : ಮಸಾಲಾ, ಉಪ್ಪು, ಮೆಣಸು ಮತ್ತು ಗರಂ ಮಸಾಲಾ ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಬಳಸುವ ಅಗತ್ಯ ಪದಾರ್ಥ. ಎಲ್ಲಕ್ಕಿಂತ ಹೆಚ್ಚಾಗಿ ಉಪ್ಪು ದೇಹಕ್ಕೆ ಬಹಳ ಮುಖ್ಯ. ಯಾವ ರೀತಿಯ ಉಪ್ಪನು ಎಷ್ಟು ಸೇವಿಸಿದ್ರೆ ಒಳ್ಳೆಯದು ಎಂಬುವುದರ ಬಗ್ಗೆ ತಿಳಿದುಕೊಂಡಾಗ ಮಾತ್ರ ಆರೋಗ್ಯ ಉತ್ತಮವಾಗಿರುತ್ತದೆ.
ಭಾರತೀಯ ಊಟವು ಮಸಾಲೆಗಳಿಲ್ಲದೆ ಬಹುತೇಕ ಅಪೂರ್ಣವಾಗಿದೆ. ಇವುಗಳ ಜೊತೆಗೆ ಉಪ್ಪು ಬಹಳ ಮುಖ್ಯ. ಸಾಮಾನ್ಯವಾಗಿ ಅಡುಗೆಯಲ್ಲಿ ಎರಡು ಅಥವಾ ಮೂರು ರೀತಿಯ ಉಪ್ಪನ್ನು ಬಳಸಲಾಗುತ್ತದೆ. ಕಪ್ಪು ಉಪ್ಪು, ಕಲ್ಲು ಉಪ್ಪು ಮತ್ತು ಪಿಂಕ್ ಬಣ್ಣದ ಉಪ್ಪು ಎಂಬ ಮೂರು ರೀತಿಯ ಸಾಲ್ಟ್ಗಳಿವೆ. ಇವುಗಳಲ್ಲಿ ಕಲ್ಲು ಉಪ್ಪು ಅಥವಾ ಸಾಮಾನ್ಯ ಉಪ್ಪು ಹೆಚ್ಚು ಬಳಕೆಯಲ್ಲಿದೆ.
ಇದನ್ನೂ ಓದಿ: ಎಚ್ಚರಿಕೆ..! ವೇಗವಾಗಿ ಆಹಾರ ತಿನ್ನುತ್ತೀರಾ..? ಗಂಭೀರ ಆರೋಗ್ಯ ಸಮಸ್ಯೆ ಬರುತ್ತೆ
ಆದ್ರೆ ಈ ಮೂರರಲ್ಲಿ ಗುಲಾಬಿ ಬಣ್ಣದ ಉಪ್ಪು (Pink Salt) ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಗುಲಾಬಿ ಉಪ್ಪು ಮತ್ತು ಸಾಮಾನ್ಯ ಉಪ್ಪಿನ ನಡುವಿನ ವ್ಯತ್ಯಾಸವೇನು ಮತ್ತು ಪ್ರಯೋಜನಗಳೇನು ಎಂಬುದನ್ನು ಇಲ್ಲಿ ಕಂಡುಹಿಡಿಯೋಣ.. ಗುಲಾಬಿ ಉಪ್ಪು ಅಥವಾ ಕಲ್ಲು ಉಪ್ಪಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪೊಟ್ಯಾಸಿಯಮ್ನ ಸಾಕಷ್ಟು ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆ.
ಪಿಂಕ್ ಬಣ್ಣದ ಉಪ್ಪಿನಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಇರುತ್ತದೆ. ದೇಹದ ತೂಕವನ್ನು ಕಡಿಮೆ ಮಾಡಲು ಇವು ಸಹಕರಿಸುತ್ತವೆ. ಇದರಲ್ಲಿರುವ ಪೋಷಕಾಂಶಗಳು ಬೊಜ್ಜಿನ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಮಧುಮೇಹವನ್ನು ನಿಯಂತ್ರಿಸಲು ಇದು ತುಂಬಾ ಉಪಯುಕ್ತವಾಗಿದೆ. ಈ ಉಪ್ಪಿನಲ್ಲಿ ನೈಟ್ರಿಕ್ ಆಕ್ಸೈಡ್ ತುಂಬಾ ಹೆಚ್ಚಾಗಿರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹ ರೋಗಿಗಳಿಗೆ ಗುಲಾಬಿ ಬಣ್ಣದ ಉಪ್ಪು ತುಂಬಾ ಒಳ್ಳೆಯದು ಮತ್ತು ಸುರಕ್ಷಿತವಾಗಿದೆ.
ಇದನ್ನೂ ಓದಿ: ಸಣ್ಣಗಾಗಬೇಕೆ ? ನಿತ್ಯ ಈ ನೀರು ಸೇವಿಸಿ ! ಎರಡೇ ವಾರದಲ್ಲಿ ಪರಿಣಾಮ ತಿಳಿಯುವುದು
ಗುಲಾಬಿ ಉಪ್ಪಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದ್ದು ದಿನವಿಡೀ ಕಾರ್ಯನಿರ್ವಹಿಸಲು ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಅದೇ ಸಮಯದಲ್ಲಿ, ಅದರಲ್ಲಿರುವ ಸತುವು ದೇಹದ ಬೆಳವಣಿಗೆ ಸಹಾಯಕವಾಗಿದೆ. ಸಾಧ್ಯ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ರಂಜಕವು ಮೂಳೆಗಳಿಗೆ ಬಲವನ್ನು ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.