Tea For Weight Loss: ಮನೆಯಲ್ಲಿ ಮಾಡುವ ಸಾಮಾನ್ಯ ಚಹಾದಿಂದಲೂ ತೂಕ ಇಳಿಕೆ ಸಾಧ್ಯ!
Tea For Weight Loss: ಚಹಾವನ್ನು ಹೆಚ್ಚು ಕುಡಿಯುವುದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಆದರೆ, ಟೀ ಕುಡಿಯಲು ಕೆಲವು ಟ್ರಿಕ್ ಅಳವಡಿಸಿಕೊಳ್ಳುವ ಮೂಲಕ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
Tea For Weight Loss: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಮನೆಯಲ್ಲಿಯೇ ಸರಳವಾದ ಚಹಾವನ್ನು ಕುಡಿಯುವ ಮೂಲಕ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ತೂಕವನ್ನು ಕಳೆದುಕೊಳ್ಳಲು, ಚಹಾದ ಸೇವನೆಯನ್ನು ಕಡಿಮೆ ಮಾಡಲು ಸಲಹೆ ನೀಡಲಾಗುತ್ತದೆ. ಆದರೆ, ಕೆಲವು ವಿಶೇಷ ವಿಧಾನದ ಮೂಲಕ ಟೀ ಮಾಡಿ ಕುಡಿಯುವುದರಿಂದ ತೂಕ ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಈ ಟ್ರಿಕ್ ಅಳವಡಿಸಿಕೊಳ್ಳುವುದರಿಂದ ನಿಮ್ಮ ತೂಕ ಕಡಿಮೆಯಾಗುವುದರ ಜೊತೆಗೆ ಮಲಬದ್ಧತೆ, ಅಧಿಕ ಬಿಪಿ (High BP) ಸೇರಿದಂತೆ ಹಲವು ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ.
ತೂಕ ಇಳಿಸಿಕೊಳ್ಳಲು ಈ ಸಮಯದಲ್ಲಿ ಟೀ ಕುಡಿಯಿರಿ :
ಖಾಲಿ ಹೊಟ್ಟೆಯಲ್ಲಿ ಎಂದಿಗೂ ಚಹಾ (Tea) ಕುಡಿಯಬೇಡಿ. ಅಲ್ಲದೆ, ಆಹಾರವನ್ನು ಸೇವಿಸಿದ ತಕ್ಷಣ ಟೀ ಕುಡಿಯಬೇಡಿ. ನಿಮಗೆ ಸಂಪೂರ್ಣ ಸುಸ್ತು ಎನಿಸಿದಾಗ ಟೀ ಕುಡಿಯಬೇಕು, ಆಗ ಮಾತ್ರ ಅದರ ಲಾಭ ಸಿಗುತ್ತದೆ.
ಇದನ್ನೂ ಓದಿ- Weight Loss Tips: ಕೇವಲ 3 ತಿಂಗಳಿನಲ್ಲಿ ಹೊಟ್ಟೆ ಕರಗಿಸಲು ಸಿಂಪಲ್ ಟಿಪ್ಸ್
ತೂಕ ನಷ್ಟಕ್ಕಾಗಿ ಈ ರೀತಿ ಚಹಾ ತಯಾರಿಸಿ:
ಬೇಕಾಗಿರುವ ಪದಾರ್ಥಗಳು:
- ಚಹಾ ಎಲೆ
- ಲೆಮನ್
- ಕೋಕೋ ಪೌಡರ್ 2 ಟೀಸ್ಪೂನ್
- ಹಾಲು
- ಶುಗರ್
- ಒಂದು ಕಪ್ ನೀರು
ಇದನ್ನೂ ಓದಿ- Belly Fat Reduce: ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ 2 ಹಣ್ಣುಗಳಿಂದ ದೂರವಿರಿ
ಈ ರೀತಿ ಚಹಾ ತಯಾರಿಸಿ:
ಈ ಚಹಾವನ್ನು ತಯಾರಿಸಲು, ಮೊದಲು ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಿ. ಬಳಿಕ ನಿಂಬೆರಸವನ್ನು ಚೆನ್ನಾಗಿ ಹಿಂಡಿ ನೀರಿನಲ್ಲಿ ಮಿಕ್ಸ್ ಮಾಡಿ. ಪ್ರತ್ಯೇಕ ಕಪ್ನಲ್ಲಿ, ಕೋಕೋ ಪೌಡರ್ ಮತ್ತು ಸಕ್ಕರೆ ಮಿಶ್ರಣ ಮಾಡಿ. ಇದರ ನಂತರ, ನೀರು ಕುದಿಯಲು ಪ್ರಾರಂಭಿಸಿದಾಗ, ಅದಕ್ಕೆ ಚಹಾ ಎಲೆಗಳನ್ನು ಸೇರಿಸಿ. ನಂತರ ಹಾಲು ಸೇರಿಸಿ ಚೆನ್ನಾಗಿ ಕುದಿಸಿ. ಈಗ ಅದೇ ಕಪ್‌ನಲ್ಲಿ ಚಹಾವನ್ನು ಸೋಸಿಕೊಳ್ಳಿ. ಇದರಲ್ಲಿ ನೀವು ಕೋಕೋ ಪೌಡರ್ ಮತ್ತು ಸಕ್ಕರೆಯನ್ನು ಬೆರೆಸಿ ಕುಡಿಯಿರಿ. ಈ ರೀತಿ ಚಹಾ ತಯಾರಿಸಿ ಕುಡಿಯುವುದರಿಂದ ತೂಕ ಕಳೆದುಕೊಳ್ಳಬಹುದು (Weight Loss) ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.