Weight Loss Tips: ಕೇವಲ 3 ತಿಂಗಳಿನಲ್ಲಿ ಹೊಟ್ಟೆ ಕರಗಿಸಲು ಸಿಂಪಲ್ ಟಿಪ್ಸ್

Weight Loss Tips: ತೂಕವನ್ನು ಕಳೆದುಕೊಳ್ಳುವುದು ಯಾವುದೇ ಒಂದು ಸವಾಲಿಗಿಂತ ಕಡಿಮೆಯಿಲ್ಲ. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮದ ಸಹಾಯದಿಂದ, ನೀವು ಈ ಸವಾಲಿನಲ್ಲಿ ಯಶಸ್ವಿಯಾಗಬಹುದು. 

Written by - Yashaswini V | Last Updated : Mar 16, 2022, 12:54 PM IST
  • ತೂಕ ನಷ್ಟಕ್ಕೆ ಅನುಸರಿಸಬೇಕಾದ ಮೊದಲ ಟಿಪ್ಸ್ ಎಂದರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುವುದು
  • ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ 1-2 ಗ್ಲಾಸ್ ನೀರು ಕುಡಿಯಿರಿ, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ.

    ನಿಧಾನವಾಗಿ ಕುಳಿತು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ, ಇದರಿಂದಾಗಿ ಆಹಾರ ಸರಿಯಾಗಿ ಜೀರ್ಣವಾಗಲು ಸಹಕಾರಿ ಆಗುತ್ತದೆ. ಜೊತೆಗೆ ಏನಾದರೂ ತಿಂದ ಸ್ವಲ್ಪ ಸಮಯದ ನಂತರ ನಿಮಗೆ ಹಸಿವಾಗುವುದಿಲ್ಲ.
Weight Loss Tips: ಕೇವಲ 3 ತಿಂಗಳಿನಲ್ಲಿ ಹೊಟ್ಟೆ ಕರಗಿಸಲು ಸಿಂಪಲ್ ಟಿಪ್ಸ್  title=
Weight Loss Tips

Weight Loss Tips: ನೀವು ಸಹ ತೂಕ ಇಳಿಸಿಕೊಳ್ಳಲು ಬಯಸುವಿರಾ? ನಿಮ್ಮ ಉತ್ತರ ಹೌದು ಎಂದಾದರೆ, ಈ ಸುದ್ದಿ ನಿಮಗಾಗಿ ಮಾತ್ರ. ಪ್ರತಿಯೊಬ್ಬರೂ ಫಿಟ್ ಮತ್ತು ಸುಂದರವಾಗಿ ಕಾಣಲು ಬಯಸುತ್ತಾರೆ. ಆದರೆ ಜಂಕ್ ಫುಡ್ ಮತ್ತು ತಪ್ಪು ಜೀವನಶೈಲಿಯಿಂದ, ಅನೇಕ ಜನರಿಗೆ ಈ ಆಸೆ ಈಡೇರುವುದಿಲ್ಲ. 

ಡಯಟ್ ತಜ್ಞರಾದ ಡಾ.ರಂಜನಾ ಸಿಂಗ್ ಅವರು ತೂಕ ಇಳಿಸಿಕೊಳ್ಳಲು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ.  ಈ ಸಲಹೆಗಳನ್ನು ನಿಯಮಿತವಾಗಿ ಅನುಸರಿಸುವುದರಿಂದ ಸುಮಾರು ಮೂರು ತಿಂಗಳಲ್ಲಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು. ಹಾಗಿದ್ದರೆ ಆ ಸಲಹೆಗಳು ಯವುವು ಎಂದು ತಿಳಿಯೋಣ...

ಆರೋಗ್ಯಕರವಾಗಿ ತೂಕ ಇಳಿಸಲು ಈ ಸಿಂಪಲ್ ಟಿಪ್ಸ್ ಅನುಸರಿಸಿ :
1. ಕಡಿಮೆ ಕ್ಯಾಲೋರಿಗಳನ್ನು ಸೇವಿಸಿ:

ತೂಕ ನಷ್ಟಕ್ಕೆ  (Weight Loss) ಅನುಸರಿಸಬೇಕಾದ ಮೊದಲ ಟಿಪ್ಸ್ ಎಂದರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುವುದು. ಇದಕ್ಕಾಗಿ ನೀವು ಕಡಿಮೆ ಕ್ಯಾಲೋರಿ ಆಹಾರವನ್ನು ತಿನ್ನಲು ಪ್ರಾರಂಭಿಸಿ. ಬೆಳಗಿನ ಉಪಾಹಾರದಲ್ಲಿ ಓಟ್ಸ್, ಮಧ್ಯಾಹ್ನದ ಊಟದಲ್ಲಿ ದಾಲ್ ರೋಟಿ, ರಾತ್ರಿಯ ಊಟದಲ್ಲಿ ಲಘು ಆಹಾರ ಸೇವಿಸಿ. 

ಇದನ್ನೂ ಓದಿ- Belly Fat Reduce: ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ 2 ಹಣ್ಣುಗಳಿಂದ ದೂರವಿರಿ

2. ವರ್ಕೌಟ್‌ಗಳನ್ನು ಮಾಡುವುದು :
ಆರೋಗ್ಯ ತಜ್ಞರು ಹೇಳುವಂತೆ ದೈನಂದಿನ ಕ್ಯಾಲೊರಿ ಸೇವನೆಯ ಪ್ರಮಾಣದ ಬಗ್ಗೆ ನಿಗಾವಹಿಸುವುದರ ಜೊತೆಗೆ ನಿತ್ಯ ವ್ಯಾಯಾಮ ಅಥವಾ ಯಾವುದೇ ಫಿಟ್‌ನೆಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮಗಾಗಿ ಕೆಲವು ಚಟುವಟಿಕೆಗಳನ್ನು ಆರಿಸಿಕೊಳ್ಳಿ. ಇದಕ್ಕಾಗಿ, ನಿಮ್ಮ ದೈನಂದಿನ ದಿನಚರಿಯಲ್ಲಿ ನೀವು ವಾಕಿಂಗ್, ಯೋಗ, ಜಿಮ್ಮಿಂಗ್ ಅಥವಾ ಯಾವುದೇ ಕ್ರೀಡೆಯನ್ನು ಸೇರಿಸಬಹುದು.

3. 10 ಸಾವಿರ ಹೆಜ್ಜೆಗಳನ್ನು ನಡೆಯಿರಿ:
ಆರೋಗ್ಯಕರವಾಗಿ ತೂಕ ನಷ್ಟಕ್ಕಾಗಿ (Healthy Weight Loss Tips) ನೀವು ಇನ್ನೂ ಒಂದು ಪ್ರಮುಖ ಕೆಲಸವನ್ನು ಮಾಡಬೇಕು. ಅಂದರೆ ನಿತ್ಯ ಸುಮಾರು 10 ಸಾವಿರ ಹೆಜ್ಜೆ ನಡೆಯಬೇಕು. ಇದು ತುಂಬಾ ಸರಳವಾದ ವ್ಯಾಯಾಮ ಮತ್ತು ದಿನಕ್ಕೆ ಸುಮಾರು 400 ರಿಂದ 500 ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ- Health Tips: ಬೊಜ್ಜಿನ ಸಮಸ್ಯೆ ನಿಯಂತ್ರಣ ಹೇಗೆ? ಇಲ್ಲಿದೆ ನೋಡಿ ಸುಲಭ ಪರಿಹಾರ

ತೂಕ ಇಳಿಸಿಕೊಳ್ಳಲು ಈ ಸಲಹೆಗಳನ್ನು ಅನುಸರಿಸಿ:
>> ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ 1-2 ಗ್ಲಾಸ್ ನೀರು ಕುಡಿಯಿರಿ, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ.
>> ತಿನ್ನುವ ಅರ್ಧ ಗಂಟೆ ಮೊದಲು ಹೊಟ್ಟೆ ತುಂಬ ನೀರು ಕುಡಿದರೆ ಹೆಚ್ಚು ಆಹಾರ ಸೇವಿಸುವ ಬಯಕೆ ಕಡಿಮೆಯಾಗುತ್ತದೆ.
>> ಸಕ್ಕರೆ ಭರಿತ ಆಹಾರ ಸೇವನೆಯನ್ನು ಕಡಿಮೆ ಮಾಡಿ, ಏಕೆಂದರೆ ಅದು ವೇಗವಾಗಿ ತೂಕವನ್ನು ಹೆಚ್ಚಿಸುತ್ತದೆ.
>> ನಿಧಾನವಾಗಿ ಕುಳಿತು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ, ಇದರಿಂದಾಗಿ ಆಹಾರ ಸರಿಯಾಗಿ ಜೀರ್ಣವಾಗಲು ಸಹಕಾರಿ ಆಗುತ್ತದೆ. ಜೊತೆಗೆ ಏನಾದರೂ ತಿಂದ ಸ್ವಲ್ಪ ಸಮಯದ ನಂತರ ನಿಮಗೆ ಹಸಿವಾಗುವುದಿಲ್ಲ.
>>  ಹೆಚ್ಚು ಎಣ್ಣೆಯುಕ್ತ ಆಹಾರಗಳು, ಬರ್ಗರ್, ಪಿಜ್ಜಾ, ಚೀಸ್ ಇತ್ಯಾದಿಗಳನ್ನು ತಿನ್ನುವುದನ್ನು ತಪ್ಪಿಸಿ.
>> ನಿಮ್ಮ ಮನೆ 4-5 ಮಹಡಿಗಳಲ್ಲಿದ್ದರೆ ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಬಳಸಿ.

ಸೂಚನೆ: ಈ ಮಾಹಿತಿಯು ಸಾಮಾನ್ಯ ಮಾಹಿತಿಯಷ್ಟೇ. ಇದನ್ನು ಅಳವಡಿಸಿಕೊಳ್ಳುವ ಮೊದಲು ನಿಮ್ಮ ವೈದ್ಯರನ್ನು ಒಮ್ಮೆ ಸಂಪರ್ಕಿಸಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News