ಬೆಂಗಳೂರು : ಪದೇ ಪದೇ ಎದೆನೋವು ಕಾಣಿಸುತ್ತಿದ್ದರೆ ಅದು ಆತಂಕಕಾರಿ ವಿಷಯ. ಅನೇಕ ಬಾರಿ ಈ ಸಮಸ್ಯೆ ತುಂಬಾ ಹೆಚ್ಚಾಗುತ್ತದೆ. ಎದೆ ನೋವು ಕಾಣಿಸಿಕೊಂಡಾಗ ಅದಕ್ಕೆ ಆರಂಭದಲ್ಲಿಯೇ ಪರಿಹಾರ ಕಂಡುಕೊಳ್ಳುವುದು ಬಹಳ ಮುಖ್ಯ. ಸೌಮ್ಯವಾದ ಎದೆ ನೋವು ಕಾಣಿಸಿಕೊಂಡರೆ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.   ಆದರೆ ಎದೆನೋವು ತೀವ್ರವಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.  


COMMERCIAL BREAK
SCROLL TO CONTINUE READING

ಎದೆನೋವಿಗೆ ಮನೆಮದ್ದು :
ಬಾದಾಮಿ : 
ಆಹಾರ ತಿಂದ ನಂತರ ಎದೆ ನೋವು ಕಾಣಿಸಿಕೊಂಡರೆ ನಿವಾರಣೆಗೆ ದಿನನಿತ್ಯ ಬಾದಾಮಿಯನ್ನು ತಿನ್ನಬೇಕು. ಅಥವಾ ಬಾದಾಮಿ ಹಾಲನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ಎದೆನೋವಿನಿಂದ ಮುಕ್ತಿ ಸಿಗುತ್ತದೆ. ಇದಲ್ಲದೆ ನೆನೆಸಿದ ಬಾದಾಮಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಕೂಡಾ ಸಮಸ್ಯೆಗೆ ಪರಿಹಾರ ನೀಡುತ್ತದೆ. 


ಇದನ್ನೂ  ಓದಿ : ಈ ಅಡುಗೆ ಎಣ್ಣೆ ವೇಗವಾಗಿ ಹೆಚ್ಚಿಸುತ್ತದೆ ಕೊಲೆಸ್ಟ್ರಾಲ್ .! ಇಂದೇ ಅಡುಗೆ ಮನೆಯಿಂದ ಹೊರ ಹಾಕಿ 


ಆಪಲ್ ಸೈಡರ್ ವಿನೆಗರ್  : 
ಆಸಿಡ್ ರಿಫ್ಲಕ್ಸ್‌ನಿಂದ ಉಂಟಾಗುವ ಎದೆ ನೋವನ್ನು ನಿವಾರಿಸಲು ಆಪಲ್ ಸೈಡರ್ ವಿನೆಗರ್ ಅನ್ನು ಬಳಸಬಹುದು. ಆಹಾರ ಸೇವಿಸುವ ಮೊದಲು ಅಥವಾ ಆಹಾರ ಸೇವಿಸಿದ ನಂತರ  ಒಂದು ಲೋಟ ನೀರಿನಲ್ಲಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಿ ಕುಡಿಯಬೇಕು. ಹೀಗೆ ಮಾಡುವುದರಿಂದ ಎದೆನೋವಿನಿಂದ ಪರಿಹಾರ  ಸಿಗುತ್ತದೆ. 


ಬಿಸಿ ಪಾನೀಯಗಳು :
ಗ್ಯಾಸ್ ಮತ್ತು ಉಬ್ಬುವಿಕೆಯಿಂದ ಉಂಟಾಗುವ ಎದೆನೋವಿನ ಸಂದರ್ಭದಲ್ಲಿ, ಬಿಸಿ ಪಾನೀಯಗಳನ್ನು ಸೇವಿಸುವುದರಿಂದ ಗ್ಯಾಸ್  ಸಮಸ್ಯೆ ಕಡಿಮೆಯಾಗುತ್ತದೆ. ಇದರಿಂದ ಎದೆ ನೋವಿನಿಂದ ಪರಿಹಾರವನ್ನು  ಸಿಗುತ್ತದೆ. 


ಇದನ್ನೂ  ಓದಿ :  Ayurveda Tips : ನೀರು ಕುಳಿತಲೇ, ಹಾಲು ನಿಂತಲ್ಲೇ ಕುಡಿಯಬೇಕು : ಯಾಕೆ ಗೊತ್ತಾ?


ಅರಿಶಿನ ಹಾಲು  :
ಅರಿಶಿನವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಎದೆನೋವಿನಿಂದ ಮುಕ್ತಿ ಸಿಗುತ್ತದೆ. ಒಂದು ಲೋಟ ಬಿಸಿ ಹಾಲಿನಲ್ಲಿ ಒಂದು ಚಮಚ ಅರಿಶಿನವನ್ನು ಬೆರೆಸಿ ಕುಡಿಯಬಹುದು. ಇದು  ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ