ಕಣ್ಣಿನ ಸುತ್ತಾ ಕಾಡುವ ಡಾರ್ಕ್‌ ಸರ್ಕಲ್‌ ಮುಖದ ಅಂದವನ್ನು ಮರೆ ಮಾಡುತ್ತದೆ. ಸರಿಯಾದ ಪ್ರಮಾಣದಲ್ಲಿ ನಿದ್ದೆಯಾಗದಿದ್ದರೆ ಅಥವಾ ಹಾರ್ಮೋನ್‌ ಬದಲಾವಣೆಯಿಂದ ಕಪ್ಪು ವರ್ತುಲಗಳು ಕಣ್ಣಿನ ಸುತ್ತ ಕಾಣಿಸುತ್ತದೆ. ಕೆಲವೊಂದು ಬಾರಿ ಇದು ಅನುವಂಶಿವಾಗಿ ಸಹ ಬರುತ್ತದೆ. ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಮುನ್ನ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸೂಕ್ತ.


COMMERCIAL BREAK
SCROLL TO CONTINUE READING

ಕಣ್ಣಿನ ಸುತ್ತ ಕಾಣುವ ಡಾರ್ಕ್ ಸರ್ಕಲ್‌ಗೆ  ಮಾರುಕಟ್ಟೆಯಲ್ಲಿ ಅನೇಕ ತರಹದ ಪ್ರಾಡಕ್ಟ್‌ಗಳು ಬಂದಿವೆ. ಆದರೆ ಅವೆಲ್ಲ ಎಷ್ಟರಮಟ್ಟಿಗೆ ಉತ್ತಮವಾದದ್ದು ಎಂದು ಹೇಳುವುದು ಕಷ್ಟ. ಹಾಗಾಗಿ ಮನೆಯಲ್ಲಿಯೇ ಸಿಗುವ ಕೆಲವೊಂದು ವಸ್ತುಗಳಿಂದ ಕಣ್ಣಿನ ಸುತ್ತ ಮೂಡುವ ಕಪ್ಪು ವರ್ತುಲಗಳನ್ನು ಕಡಿಮೆ ಮಾಡಬಹುದು.


ಇದನ್ನು ಓದಿ: Health Tips: ಆಹಾರ ಸೇವನೆ ಬಳಿಕ ಸ್ನಾನ, ಊಟದ ನಂತರ ಹಣ್ಣು ಆರೋಗ್ಯಕ್ಕೆ ಹಾನಿಕರ!


ಡಾರ್ಕ್ ಸರ್ಕಲ್ ಸಮಸ್ಯೆಯಿಂದ ಹೊರಬರಲು ಸಹಕಾರಿಯಾಗಲಿವೆ ಈ ಮನೆಮದ್ದುಗಳು: ನೀವು ಡಾರ್ಕ್ ಸರ್ಕಲ್ ಅನ್ನು ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ನಿಮ್ಮ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ರಾಸಾಯನಿಕ ಆಧಾರಿತ ಔಷಧದಿಂದ ಇದನ್ನು ಶೀಘ್ರವಾಗಿ ಗುಣಪಡಿಸಬಹುದು. ಆದರೆ ಚರ್ಮವು ತುಂಬಾ ಸೂಕ್ಷ್ಮವಾಗಿರುವ ಕಾರಣಮನೆಮದ್ದುಗಳ ಮೂಲಕ ಅವುಗಳನ್ನು ಗುಣಪಡಿಸಬಹುದು. 


ಟೊಮ್ಯಾಟೋ: 
ಡಾರ್ಕ್ ಸರ್ಕಲ್‌ನಿಂದ ಮುಕ್ತಿ ಪಡೆಯಲು ಟೊಮ್ಯಾಟೋ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದು ಚರ್ಮವನ್ನು ಮೃದುವಾಗಿಯೂ ಮಾಡುತ್ತದೆ. ಒಂದು ಚಮಚ ಟೊಮ್ಯಾಟೋ ರಸಕ್ಕೆ ಒಂದು ಚಮಚ ನಿಂಬೆರಸ ಬೆರೆಸಿ ಕಣ್ಣುಗಳ ಬಳಿ ಇರುವ ಕಪ್ಪು ಕಲೆಗಳ ಮೇಲೆ ಹಚ್ಚಿ 10 ನಿಮಿಷ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ಇದನ್ನು ದಿನಕ್ಕೆ ಎರಡು ಬಾರಿ ಮಾಡಿ. ಇದಲ್ಲದೆ, ನೀವು ಪ್ರತಿದಿನ ಟೊಮೆಟೊ ಮತ್ತು ನಿಂಬೆ ರಸವನ್ನು ಬೆರೆಸಿ ಕುಡಿಯಬಹುದು. ಇದು ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.


ಆಲೂಗಡ್ಡೆ:
ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ ರಸವನ್ನು ತೆಗೆಯಿರಿ. ರಸವನ್ನು ಹತ್ತಿ ಬಟ್ಟೆಯಿಂದ ಕಣ್ಣಿನ ಸುತ್ತಾ ಲೇಪಿಸಿ.  ಆಲೂಗೆಡ್ಡೆ ರಸದಲ್ಲಿ ನೆನೆಸಿದ ಬಟ್ಟೆಯಿಂದ ಕಣ್ಣುಗಳನ್ನು ಹೊರತುಪಡಿಸಿ ಇಡೀ ಡಾರ್ಕ್ ಸರ್ಕಲ್ ಇರುವ ಜಾಗದಲ್ಲಿ ಹಚ್ಚಿ ಮತ್ತು 10 ನಿಮಿಷಗಳ ಕಾಲ ಬಿಡಿ. ಅದರ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.


ಟೀ ಬ್ಯಾಗ್‌ಗಳು:
ತಣ್ಣನೆಯ ಟೀ ಬ್ಯಾಗ್‌ಗಳು ಕಣ್ಣಿನ ಕೆಳಗಿರುವ ಕಪ್ಪು ವರ್ತುಲಗಳನ್ನು ನಿವಾರಿಸುತ್ತದೆ. ಟೀ ಬ್ಯಾಗ್ ಅನ್ನು ನೀರಿನಲ್ಲಿ ನೆನೆಸಿ ಫ್ರಿಜ್‌ನಲ್ಲಿ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಅದರ ನಂತರ ಕಣ್ಣುಗಳನ್ನು ಮುಚ್ಚಿ ಮತ್ತು ಆ ಟೀ ಬ್ಯಾಗ್ ಅನ್ನು ಡಾರ್ಕ್ ಸರ್ಕಲ್ ಮೇಲೆ ಇರಿಸಿ. ಇದನ್ನು ನಿಯಮಿತವಾಗಿ ಮಾಡಿ. ಇದರ ಉತ್ತಮ ಫಲಿತಾಂಶ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.


ಇದನ್ನು ಓದಿ: ಈ ಐದು ರೀತಿಯ ಆಹಾರಗಳಿಂದ ದೂರವಿರಿ .! ಜೀವನಪೂರ್ತಿ ಎದುರಾಗುವುದಿಲ್ಲ ಕಿಡ್ನಿ ಸಮಸ್ಯೆ


ತಣ್ಣನೆಯ ಹಾಲು:
ತಣ್ಣನೆಯ ಹಾಲು ಕಣ್ಣುಗಳು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ತಣ್ಣನೆಯ ಹಾಲನ್ನು ಹತ್ತಿ ಬಟ್ಟೆಯಲ್ಲಿ ನೆನೆಸಿ ಮತ್ತು ಕಣ್ಣಿನ ಡಾರ್ಕ್ ಸರ್ಕಲ್ ಮೇಲೆ ಇರಿಸಿ. ಇದನ್ನು ಮಾಡುವುದರಿಂದ ಪ್ರಯೋಜನವಾಗುತ್ತದೆ.


ಧ್ಯಾನ:
ಒತ್ತಡ, ನಿದ್ರೆಯ ಕೊರತೆ, ಹಾರ್ಮೋನ್ ಬದಲಾವಣೆ, ಜೀವನಶೈಲಿ ಬದಲಾವಣೆಯಿಂದ ಡಾರ್ಕ್ ಸರ್ಕಲ್ ಉಂಟಾಗುತ್ತದೆ. ಯೋಗ ಮತ್ತು ಧ್ಯಾನ ಕೂಡ ಡಾರ್ಕ್ ಸರ್ಕಲ್ ಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.