Joint Pain Relief: ಕೀಲು ನೋವಿನಿಂದ ತ್ವರಿತ ಪರಿಹಾರಕ್ಕಾಗಿ ಈ ಮನೆಮದ್ದುಗಳನ್ನು ಟ್ರೈ ಮಾಡಿ
Joint Pain Relief: ಅನಿಯಮಿತ ಆಹಾರ ಪದ್ಧತಿ, ತಪ್ಪಾದ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಕೀಲು ನೋವಿನ ಸಮಸ್ಯೆ ಸಾಮಾನ್ಯವಾಗಿದೆ. ಆದರೆ ಇದಕ್ಕೆ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದ ಪರಿಹಾರ ಪಡೆಯಬಹುದು.
ಕೀಲು ನೋವು ನಿವಾರಣೆಗೆ ಮನೆಮದ್ದು: ಮೊದಲೆಲ್ಲಾ ಕೀಲು ನೋವಿನ ಸಮಸ್ಯೆ ಒಂದು ವಯೋಸಹಜ ಕಾಯಿಲೆ ಆಗಿತ್ತು. ಆದರೆ, ಇಂದಿನ ಯುಗದಲ್ಲಿ ಹಲವರು ಚಿಕ್ಕ ವಯಸ್ಸಿನಲ್ಲಿಯೇ ಕೀಲು ನೋವಿನ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಅನಿಯಮಿತ ಆಹಾರ ಪದ್ಧತಿ, ತಪ್ಪಾದ ಜೀವನಶೈಲಿಯೂ ಇದಕ್ಕೆ ಬಹಳ ಮುಖ್ಯ ಕಾರಣ. ಕೀಲು ನೋವಿನ ಸಮಸ್ಯೆಯಿಂದ ದೀರ್ಘಕಾಲದವರೆಗೆ ಕೂರುವುದಾಗಲಿ, ನಡೆಯುವುದಾಗಲಿ ಬಹಳ ಕಷ್ಟಕರ ಎಂದೆನಿಸುತ್ತದೆ. ಇದು ಭವಿಷ್ಯದಲ್ಲಿ ಇನ್ನೂ ಹಲವು ರೋಗಗಳಿಗೆ ಆಹ್ವಾನವನ್ನು ನೀಡುತ್ತದೆ. ಆದರೆ, ನಿಮ್ಮ ಕೀಲು ನೋವಿಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಸುಲಭ ಪರಿಹಾರ ಪಡೆಯಬಹುದು.
ವಾಸ್ತವವಾಗಿ, ವಯಸ್ಸಾದಂತೆ, ಸ್ನಾಯುಗಳು ಹಿಗ್ಗಲು ಪ್ರಾರಂಭಿಸುತ್ತವೆ. ಇದರಿಂದಾಗಿ ಕೀಲುಗಳ ಸುತ್ತಲಿನ ನರಗಳಲ್ಲಿ ಊತದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಕಾರಣದಿಂದಾಗಿ ಕೀಲುಗಳಲ್ಲಿ ಬಿಗಿತ ಹೆಚ್ಚಾಗಿ ನೋವು ಕೂಡ ಉಲ್ಬಣಿಸುತ್ತದೆ. ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ನಿಮ್ಮ ಈ ಸಮಸ್ಯೆಗಳನ್ನು ತೊಡೆದುಹಾಕಬಹುದು.
ಕೀಲು ನೋವಿನಿಂದ ಪರಿಹಾರ ಪಡೆಯಲು ಅಡುಗೆಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ನೋಡಿ:-
ಒಂದು ಕಪ್ ಹಾಲಿಗೆ ಒಂದು ಚಮಚ ಅರಿಶಿನ, ಕಾಲು ಚಮಚ ತುರಿದ ಶುಂಠಿ ಮತ್ತು ಚಿಟಿಕೆ ಕರಿಮೆಣಸು ಸೇರಿಸಿ ಒಂದು ಕಪ್ ಹಾಲನ್ನು ಕುದಿಸಿ. ಗ್ಯಾಸ್ ಆಫ್ ಮಾಡಿ ಮತ್ತು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಮತ್ತು ಅದು ಉಗುರುಬೆಚ್ಚಗಿರುವಾಗ ಹಾಲು ಕುಡಿಯಿರಿ. ಪ್ರತಿದಿನ ಈ ಹಾಲನ್ನು ಕುಡಿಯುವುದರಿಂದ ಕೀಲು ನೋವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ- ಊಟದ ಬಳಿಕ ಮಾಡುವ ಈ ತಪ್ಪುಗಳು ದೇಹಕ್ಕೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು, ಎಚ್ಚರ!
ಕೀಲು ನೋವಿಗೆ ಈ ಹಣ್ಣುಗಳು ಪ್ರಯೋಜನಕಾರಿ:
ಕೀಲು ನೋವಿಗೆ ಸಿಟ್ರಸ್ ಹಣ್ಣುಗಳು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ವಿಟಮಿನ್ ಸಿ ಹೆಚ್ಚಾಗಿರುವ ನಿಂಬೆ ಮತ್ತು ಕಿತ್ತಳೆಯಂತಹ ಹಣ್ಣುಗಳನ್ನು ಸೇವಿಸುವುದರಿಂದ ಕೀಲು ನೋವು ಕಡಿಮೆ ಆಗುತ್ತದೆ. ಇದಲ್ಲದೆ, ಈ ಹಣ್ಣುಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.
ಮೊಣಕಾಲು ಮತ್ತು ಬೆನ್ನುನೋವಿಗೆ ಪರಿಹಾರ ನೀಡುತ್ತೆ ಶುಂಠಿ:
ಶುಂಠಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಶುಂಠಿ ಸೇವನೆಯಿಂದ ಶೀತ, ವಾಯು ಕಡಿಮೆ ಆಗುತ್ತದೆ. ಶುಂಠಿಯಲ್ಲಿ ಜಿಂಜೆರಾಲ್ ಎಂಬ ಅಂಶವಿದೆ. ಇದು ಕೀಲು ನೋವನ್ನು ಹೊರತುಪಡಿಸಿ ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ರಸವನ್ನು ಪ್ರತಿದಿನ ಸೇವಿಸುವುದರಿಂದ ನೋವು ನಿವಾರಣೆಯಾಗುತ್ತದೆ. ಶುಂಠಿಯ ರಸವನ್ನು ಒಂದು ನಿಂಬೆ ರಸ ಮತ್ತು ಅರ್ಧ ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಿರಿ. ಶುಂಠಿ ಎಣ್ಣೆಯಿಂದ ಮೊಣಕಾಲು ಮತ್ತು ಸೊಂಟದ ಬಾಧಿತ ಭಾಗವನ್ನು ಮಸಾಜ್ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ.
ಈರುಳ್ಳಿ ಬೆಳ್ಳುಳ್ಳಿ ಸೇವನೆಯಿಂದಲೂ ನಿವಾರಣೆ ಆಗುತ್ತೆ ಕೀಳು ನೋವು:
ತಜ್ಞರ ಪ್ರಕಾರ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆಯಿಂದ ಕೀಲು ನೋವು ನಿವಾರಣೆಯಾಗುತ್ತದೆ . ಅವುಗಳಲ್ಲಿರುವ ಅಂಶಗಳು ಕೀಲು ನೋವಿಗೆ ಪ್ರಯೋಜನಕಾರಿ. ಇದಕ್ಕಾಗಿ, ಹತ್ತು ಬೆಳ್ಳುಳ್ಳಿ ಮೊಗ್ಗುಗಳನ್ನು 100 ಗ್ರಾಂ ನೀರು ಅಥವಾ ಹಾಲಿನೊಂದಿಗೆ ಬೆರೆಸಿ ಕುಡಿಯಿರಿ. ಇದರಿಂದ ಶೀಘ್ರ ಪರಿಹಾರ ಪಡೆಯಬಹುದು.
ಇದನ್ನೂ ಓದಿ- ದೇಹದ ಈ ಭಾಗಕ್ಕೆ ಮಸಾಜ್ ಮಾಡಿದರೆ ನಿಯಂತ್ರಣಕ್ಕೆ ಬರುತ್ತದೆ Blood Sugar Level
ಅರಿಶಿನದ ಸಮರ್ಪಕ ಸೇವನೆ:
ಆಹಾರದಲ್ಲಿ ಸಾಕಷ್ಟು ಪ್ರಮಾಣದ ಅರಿಶಿನವನ್ನು ಪ್ರತಿದಿನ ಬೆರೆಸಿ ಸೇವಿಸುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ. ಅರಿಶಿನದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳು ಕೀಲುಗಳ ನಡುವಿನ ಉರಿಯೂತವನ್ನು ನಿವಾರಿಸುತ್ತದೆ.
ಒಮೆಗಾ 3 ಕೊಬ್ಬಿನಾಮ್ಲಗಳು ಕೀಲು ನೋವಿಗೆ ಪ್ರಯೋಜನಕಾರಿ:
ಬಾದಾಮಿಯಲ್ಲಿ ಒಮೆಗಾ 3 ಹೆಚ್ಚು ಕಂಡುಬರುತ್ತದೆ. ಇದಲ್ಲದೆ, ಮೀನು ಮತ್ತು ಕಡಲೆಕಾಯಿಯಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿವೆ. ಇವುಗಳ ಸೇವನೆಯಿಂದಲೂ ಕೀಲು ನೋವಿನಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.
ಬೆಚ್ಚಗಿನ ಎಣ್ಣೆಯು ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ:
ಕೀಲು ನೋವಿನಿಂದ ಬಳಲುತ್ತಿರುವವರು ಪೀಡಿತ ಪ್ರದೇಶವನ್ನು ತೆಂಗಿನಕಾಯಿ, ಆಲಿವ್, ಸಾಸಿವೆ, ಕ್ಯಾಸ್ಟರ್ ಅಥವಾ ಬೆಳ್ಳುಳ್ಳಿ ಎಣ್ಣೆಯಿಂದ ಮಸಾಜ್ ಮಾಡಿ. ಇದು ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.