ಮಧುಮೇಹದಿಂದ ಮಂಡಿ ನೋವಿನವರೆಗೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ನುಗ್ಗೆ ಸೊಪ್ಪು

ನುಗ್ಗೆ ಸೊಪ್ಪಿನ  ಪ್ರಯೋಜನಗಳು: ಮೊರಿಂಗ ಎಲೆಗಳು, ಡ್ರಮ್ ಸ್ಟಿಕ್ ಎಲೆಗಳು ಎಂದು ಕರೆಯಲ್ಪಡುವ ನುಗ್ಗೆ ಸೊಪ್ಪು ಹಲವು ಔಷಧೀಯ ಗುಣಗಳನ್ನು ಹೊಂದಿದ್ದು  ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ನುಗ್ಗೆ ಸೊಪ್ಪು ಮನುಷ್ಯರನ್ನು ಹತ್ತು ಹಲವು ರೋಗಗಳಿಂದ ದೂರ ಉಳಿಸಬಲ್ಲ ದಿವ್ಯೌಷಧ ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Jul 11, 2022, 07:39 AM IST
  • ನುಗ್ಗೆ ಸೊಪ್ಪಿನ ಸೇವನೆಯಿಂದ ಅನೇಕ ಗಂಭೀರ ಕಾಯಿಲೆಗಳಿಂದ ದೂರ ಉಳಿಯಬಹುದು.
  • ನುಗ್ಗೆ ಸೊಪ್ಪಿನಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ.
  • ನುಗ್ಗೆ ಸೊಪ್ಪಿನಲ್ಲಿ ಅನೇಕ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳು ಕಂಡು ಬರುತ್ತವೆ.
ಮಧುಮೇಹದಿಂದ ಮಂಡಿ ನೋವಿನವರೆಗೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ನುಗ್ಗೆ ಸೊಪ್ಪು title=
Drumstick leaves benefits

ನುಗ್ಗೆ ಸೊಪ್ಪಿನ ಪ್ರಯೋಜನಗಳು:  ಶತಮಾನಗಳಿಂದಲೂ ನುಗ್ಗೆ ಕಾಯಿ, ನುಗ್ಗೆ ಸೊಪ್ಪನ್ನು ಭಾರತೀಯ ಖಾದ್ಯಗಳಲ್ಲಿ ಬಳಸಲಾಗುತ್ತಿದೆ. ಸಾಮಾನ್ಯ ಭಾಷೆಯಲ್ಲಿ ನುಗ್ಗೆ ಸೊಪ್ಪು ಎಂದು ಕರೆಯಲಾಗುವ ಈ ಸೊಪ್ಪನ್ನು ಮೊರಿಂಗಾ ಎಲೆಗಳು, ಡ್ರಮ್ ಸ್ಟಿಕ್ ಎಲೆಗಳು ಎಂತಲೂ ಕರೆಯಲಾಗುತ್ತದೆ. ಇದು ಆರೋಗ್ಯಕ್ಕೆ ಅದ್ಭುತವಾದ ಪ್ರಯೋಜನಗಳನ್ನು ಹೊಂದಿವೆ. ನುಗ್ಗೆ ಸೊಪ್ಪಿನ ಸೇವನೆಯಿಂದ ಅನೇಕ ಗಂಭೀರ ಕಾಯಿಲೆಗಳಿಂದ ದೂರ ಉಳಿಯಬಹುದು. ನುಗ್ಗೆ ಸೊಪ್ಪಿನಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ನುಗ್ಗೆ ಸೊಪ್ಪನ್ನು ಬಳಸುವುದರಿಂದ ಮಧುಮೇಹ, ಅಧಿಕ ರಕ್ತದೊತ್ತಡ,  ಫಂಗಲ್ ಸೋಂಕುಗಳು, ಕೀಲು ನೋವು, ಹೃದಯದ ಆರೋಗ್ಯ, ಕ್ಯಾನ್ಸರ್ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ನುಗ್ಗೆ ಸೊಪ್ಪಿನಲ್ಲಿ ಅನೇಕ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳು ಕಂಡು ಬರುತ್ತವೆ. ಎಲೆಗಳು ಕಿತ್ತಳೆಗಿಂತ 7 ಪಟ್ಟು ಹೆಚ್ಚು ವಿಟಮಿನ್ ಸಿ ಮತ್ತು ಬಾಳೆಹಣ್ಣುಗಳಿಗಿಂತ 15 ಪಟ್ಟು ಹೆಚ್ಚು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಇದು ಕ್ಯಾಲ್ಸಿಯಂ , ಪ್ರೋಟೀನ್ , ಕಬ್ಬಿಣ ಮತ್ತು ಅಮೈನೋ ಆಮ್ಲಗಳನ್ನು ಸಹ ಹೊಂದಿದೆ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ- Weight Loss By Black Pepper: ಕರಿಮೆಣಸಿನಿಂದಲೂ ಕೂಡ ತೂಕ ಇಳಿಕೆಯಾಗುತ್ತದೆ, ಹೇಗೆ ಇಲ್ಲಿ ತಿಳಿದುಕೊಳ್ಳಿ

ನುಗ್ಗೆ ಸೊಪ್ಪಿನ ಪ್ರಯೋಜನಗಳು:
ಮೂಳೆಗಳನ್ನು ಬಲಪಡಿಸಲು:-

ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ- ಇದು ಮೂಳೆ ಮತ್ತು ಹಲ್ಲುಗಳನ್ನು ಗಟ್ಟಿಗೊಳಿಸುವುದರ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಕಾರಿ.

ಮಧುಮೇಹ:-
ನುಗ್ಗೆ ಸೊಪ್ಪಿನಲ್ಲಿ ಕಂಡುಬರುವ ಇನ್ಸುಲಿನ್ ತರಹದ ಪ್ರೋಟೀನ್‌ಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ. 

ಕ್ಯಾನ್ಸರ್:-
ನುಗ್ಗೆ ಸೊಪ್ಪಿನ ಎಳೆಗಳ ಸಾರಗಳು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುವಲ್ಲಿ ಸಹಕಾರಿ ಆಗಿದ್ದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಸಂಶೋಧನೆಗಳು ಕಂಡು ಹಿಡಿದಿವೆ.

ಇದನ್ನೂ ಓದಿ- Heart Attack Risk: ಈ ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ ಹೃದಯಾಘಾತದ ಅಪಾಯದಿಂದ ಪಾರಾಗಿ

ಹೃದಯದ ಆರೋಗ್ಯಕ್ಕೆ:-
ಮೊರಿಂಗಾ ಎಲೆಗಳು ಹೃದಯವನ್ನು ರಕ್ಷಿಸುತ್ತದೆ ಮತ್ತು ಹೃದಯರಕ್ತನಾಳದ ವ್ಯವಸ್ಥೆಯನ್ನು ಬೆಂಬಲಿಸುತ್ತದೆ ಎಂದು ಹೇಳಲಾಗುತ್ತದೆ. 

ಕೆಟ್ಟ ಕೊಲೆಸ್ಟ್ರಾಲ್:-
ನುಗ್ಗೆ ಸೊಪ್ಪು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಎನ್ನಲಾಗುತ್ತದೆ.

ಕೀಲು ನೋವು:- 
ನುಗ್ಗೆ ಸೊಪ್ಪು ಕ್ಯಾಲ್ಸಿಯಂ, ವಿಟಮಿನ್ ಕೆ ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ, ಇದು ಆರೋಗ್ಯಕರ ಮೂಳೆಗೆ ಕೊಡುಗೆ ನೀಡುವುದು ಮಾತ್ರವಲ್ಲ, ಕೀಲು ನೋವಿಗೂ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ.
 
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News