Home Remedies: ದದ್ದು, ತುರಿಕೆ ಹಾಗೂ ರಿಂಗ್ವರ್ಮ್ ಗಳಂತಹ ಸಮಸ್ಯೆಗಳು ಒಂದೊಮ್ಮೆ ಎದುರಾದರೆ, ಅವು ನಮ್ಮ ಅಕ್ಕಪಕ್ಕದಲ್ಲಿರುವವರಿಗೂ ಕೂಡ ಹರಡುವ ಅಪಾಯವಿರುತ್ತದೆ. ಹಾಗೆ ನೋಡಿದರೆ, ಈ ಸಮಸ್ಯೆಗಳು ಫಂಗಲ್ ಕಾಯಿಲೆಗಳಾಗಿವೆ. ಇವು ದೇಹದ ಯಾವುದೇ ಭಾಗದಲ್ಲಿ ಉಂಟಾಗುವ ಸಾಧ್ಯತೆ ಇರುತ್ತದೆ. ಪದೇ ಪದೇ ತುರಿಕೆ ಮಾಡಿಕೊಳ್ಳುವುದರಿಂದ ತ್ವಚೆ ಕೆಂಪಾಗುತ್ತದೆ. ಈ ಸಮಸ್ಯೆಗೆ ಪರಿಹಾರ ನಿಮ್ಮ ಮನೆಯಲ್ಲಿಯೇ ಇದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: 


ಅರಿಶಿಣ: ತ್ವಚೆಗೆ ಸಂಬಂಧಿಸಿದ ಹಲವು ಕಾಯಿಲೆಗಳಿಗೆ ಅರಿಶಿಣ ರಾಮಬಾಣ ಉಪಾಯವಾಗಿದೆ. ಅರಿಶಿಣದ ತುಣುಕುಗಳನ್ನು ನೀರಿನಲ್ಲಿ ಬೆರೆಸಿ ಅದರ ಪೇಸ್ಟ್ ತಯಾರಿಸಿಕೊಳ್ಳಿ ಹಾಗೂ ಈ ಪೇಸ್ಟ್ ಅನ್ನು ತುರಿಕೆ ಇರುವ ಭಾಗಕ್ಕೆ ಹಚ್ಚಿ. ಅದು ಒಣಗಿದ ಬಳಿಕ ಮತ್ತೊಮ್ಮೆ ಪೇಸ್ಟ್ ಅನ್ವಯಿಸಿ. ಕೆಲವು ದಿನಗಳವರೆಗೆ ಈ ಉಪಾಯವನ್ನು ನಿರಂತರವಾಗಿ ಅನುಸರಿಸಿದರೆ ದದ್ದು, ತುರಿಕೆ ಮಾಯವಾಗುತ್ತವೆ. 


ಬೇವಿನ ಎಲೆ: ಬೇವಿನ ಎಲೆಯ ಔಷಧೀಯ ಗುಣಗಳ ಕುರಿತು ನಮ್ಮೆಲ್ಲರಿಗೂ ತಿಳಿದೇ ಇದೆ. ದದ್ದು, ತುರಿಕೆ ಹಾಗೂ ರಿಂಗ್ವರ್ಮ್ ಗಳ ಚಿಕಿತ್ಸೆಗೆ ಬೇವಿನ ಎಲೆ ರಾಮಬಾಣ ಔಷಧಿಯಾಗಿದೆ. ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ತುರಿಕೆ ಇರುವ ಜಾಗಕ್ಕೆ ಅನ್ವಯಿಸಿ. ಈ ಎಲೆಗಳಲ್ಲಿ ಫಂಗಸ್ ಅನ್ನು ಹೊಡೆದೋಡಿಸುವ ಶಕ್ತಿ ಇದೆ. 


ಕೊಬ್ಬರಿ ಎಣ್ಣೆ: ಕೊಬ್ಬರಿ ಎಣ್ಣೆ ಹಲವು ರೋಗಗಳಿಗೆ ರಾಮಬಾಣ ಔಷಧಿಯಾಗಿದೆ. ಕೊಬ್ಬರಿ ಎಣ್ಣೆಯನ್ನು ಲೆಮನ್ ಗ್ರಾಸ್ ಹಾಗೂ ಎಳ್ಳೆಣ್ಣೆಯೊಂದಿಗೆ ಬೆರೆಸಿ ಈ ಪೇಸ್ಟ್ ಅನ್ನು ತುರಿಕೆ ಇರುವ ಭಾಗಕ್ಕೆ ಅನ್ವಯಿಸಿ. ಇದರಿಂದ ಸಮಸ್ಯೆ ಬೇಗ ನಿವಾರಣೆಯಾಗುತ್ತದೆ. ಆರೋಗ್ಯ ತಜ್ಞರು ಕೂಡ ಇದರ ಸಲಹೆ ನೀಡುತ್ತಾರೆ.


ಇದನ್ನೂ ಓದಿ: 


ಚಂಡು ಹೂವು: ಮದುವೆ ಸಮಾರಂಭ, ಔತಣಕೂಟಗಳ ಸೌಂದರ್ಯ ಹೆಚ್ಚಿಸಲು ಚೆಂಡು ಹೂವನ್ನು ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತದೆ. ಆದರೆ, ಈ ಹೂವು ದದ್ದು, ತುರಿಕೆ ಇತ್ಯಾದಿಗಳ ನಿವಾರಣೆಗೆ ಬಳಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಈ ಸುಂದರ ಹೂವುಗಳಲ್ಲಿ ಆಂಟಿಅಲರ್ಜಿ, ಆಂಟಿಫಂಗಲ್ ಗುಣಗಳಿದ್ದು, ಇವು ತುರಿಕೆಯಿಂದ ಪರಿಹಾರ ಒದಗಿಸುತ್ತವೆ. 


ಸ್ವರ್ಣಪತ್ರ: ಇಂಡಿಯನ್ ಸೆನ್ನಾ ಅಥವಾ ನೆಲವರಿಕೆ ಅಥವಾ ಸ್ವರ್ಣಪತ್ರಗಳನ್ನು ಪುಡಿ ಮಾಡಿ, ಅದರಿಂದ ಆಯಿಂಟ್ಮೆಂಟ್ ತಯಾರಿಸಿ. ಅದನ್ನು ದದ್ದು, ತುರಿಕೆ ಇತ್ಯಾದಿ ಚರ್ಮ ಸಮಸ್ಯೆ ಇರುವ ಭಾಗಕ್ಕೆ ಅನ್ವಯಿಸಿ. ಇದರಿಂದ ತಕ್ಷಣ ಪರಿಹಾರ ಸಿಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.