Headache Treatment: ಒತ್ತಡಭರಿತ ಜೀವನಶೈಲಿಯಲ್ಲಿ ತಲೆನೋವು ಸರ್ವೇ ಸಾಮಾನ್ಯವಾಗಿ ಬಾಧಿಸುವ ಸಮಸ್ಯೆ. ತಲೆನೋವಿಗೆ ಕಾರಣ ಸಾಕಷ್ಟಿವೆ. ಕೆಲವರಿಗೆ ಮಲಗಿ ನಿದ್ರೆ ಮಾಡಿದರೆ ತಲೆನೋವು ಕಡಿಮೆಯಾದರೆ, ಇನ್ನೂ ಕೆಲವರಿಗೆ ಗುಳಿಗೆ ಇಲ್ಲದೆ ನೋವು ಹೋಗುವುದೇ ಇಲ್ಲ. ಮತ್ತೂ ಕೆಲವರು ವಿಕ್ಸ್, ಜಂಡೂಬಾಮ್ ರೀತಿಯ ಔಷಧಿಗಳಿಗೆ ಅಡಿಕ್ಟ್ ಆಗಿರುತ್ತಾರೆ. ಆದರೆ, ಇದಾವುದೂ ಇಲ್ಲದೆ, ಕೆಲವು ಎಣ್ಣೆಗಳನ್ನು ಬಳಸಿ ತಲೆನೋವಿಗೆ ತಕ್ಷಣ ಪರಿಹಾರ ಪಡೆಯಬಹುದು. 


COMMERCIAL BREAK
SCROLL TO CONTINUE READING

ಹೌದು, ಕೆಲವು ಎಣ್ಣೆಗಳು/ತೈಲಗಳು ತಲೆನೋವಿಗೆ ನೈಸರ್ಗಿಕ ಪರಿಹಾರಗಳಾಗಿವೆ. ಇವುಗಳನ್ನು ಹಚ್ಚಿದರೆ ಸಾಕು ಯಾವುದೇ ಔಷಧಿ ಇಲ್ಲದೆಯೇ ತಲೆನೋವು ಮಾಯವಾಗುತ್ತದೆ. ಅಂತಹ ಎಣ್ಣೆಗಳೆಂದರೆ... 


ಪುದೀನಾ ಎಣ್ಣೆ: 
ದೇಹವನ್ನು ತಂಪಾಗಿಸುವ ಗುಣಕಾರಿ ಪುದೀನಾ ಎಣ್ಣೆಯನ್ನು ನೆಟ್ಟಿಗೆ ಹಚ್ಚುವುದರಿಂದ ಇದು ರಕ್ತದ ಹರಿವನ್ನು ಸರಾಗವಾಗಿಸಲು ಸಹಕಾರಿ. ಇದರ ಬಳಕೆಯಿಂದ ಕೂಡಲೇ ತಲೆನೋವಿನಿಂದ ಪರಿಹಾರ ಪಡೆಯಬಹುದು. 


ಇದನ್ನೂ ಓದಿ- ಸಕ್ಕರೆ ಬದಲು ಕಾಫಿಯಲ್ಲಿ ಇದನ್ನು ಬೆರೆಸಿ ಕುಡಿದ್ರೆ ಬಲೂನ್ ರೀತಿಯಿರುವ ಹೊಟ್ಟೆ ಚಪ್ಪಟೆಯಾಗುತ್ತೆ...! 


ನೀಲಗಿರಿ ತೈಲ: 
ಅತ್ಯುತ್ತಮ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ನೀಲಗಿರಿ ತೈಲವನ್ನು ಸಾಮಾನ್ಯವಾಗಿ ಶೀತ, ನೆಗಡಿಯ ಸಂದರ್ಭದಲ್ಲಿ ಹೆಚ್ಚು ಬಳಸಲಾಗುತ್ತದೆ. ನೀಲಗಿರಿ ತೈಲದ ಒಂದು ಹನಿಯನ್ನು ಹಣೆಯ ಎರಡೂ ಬದಿಗಳಿಗೆ ಸವರಿದರೆ ಕೂಡಲೇ ತಲೆನೋವು ಮಾಯವಾಗುತ್ತದೆ. 


ಇದನ್ನೂ ಓದಿ- ನಿತ್ಯ ಈ ಮಸಾಲೆಗಳನ್ನು ಬಳಸಿದ್ರೆ ಡಯಾಬಿಟಿಸ್ ರೋಗಿಗಳಲ್ಲಿ ಶುಗರ್ ಎಂದಿಗೂ ಹೈ ಆಗುವುದಿಲ್ಲ! 


ಕೊಬ್ಬರಿ ಎಣ್ಣೆ: 
ದೇಹದಲ್ಲಿ ಉಷ್ಣತೆ ಹೆಚ್ಚಾದಾಗಲೂ ತಲೆನೋವು ಕಾಣಿಸಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ನೆತ್ತಿಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಮಸಾಜ್ ಮಾಡುವುದರಿಂದ ನೈಸರ್ಗಿಕವಾಗಿ ತಲೆನೋವಿನಿಂದ ಪರಿಹಾರ ಪಡೆಯಬಹುದು. 


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.