Sneezing: ಹವಾಮಾನ ಬದಲಾವಣೆಯಿಂದಾಗಿ ಶೀತ, ನೆಗಡಿ ಸರ್ವೇ ಸಾಮಾನ್ಯವಾಗಿ ಕಾಡುವ ಸಮಸ್ಯೆ. ಆದರೆ, ಕೆಲವರಲ್ಲಿ ಶೀತದಿಂದ ಮಾತ್ರವಲ್ಲದೆ ಧೂಳು, ಅಲರ್ಜಿಯಿಂದಲೂ ಸೀನುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಆದರೆ, ಪದೇ ಪದೇ ಕಾಡುವ ಸೀನುವ ಸಮಸ್ಯೆಯಿಂದಾಗಿ ಇದು ದೈನಂದಿನ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡಬಹುದು. ಈ ಬಗ್ಗೆ ಚಿಂತಿಸುವ ಅವಶ್ಯಕತೆ ಇಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳ ಸಹಾಯದಿಂದ ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರವನ್ನು ಪಡೆಯಬಹುದು. 


COMMERCIAL BREAK
SCROLL TO CONTINUE READING

ಸೀನುವಿಕೆಗೆ ಕ್ಷಣಾರ್ಧದಲ್ಲಿ ಪರಿಹಾರ ನೀಡಬಲ್ಲ ಮನೆಮದ್ದುಗಳಿವು:
ಆಯುರ್ವೇದ ತಜ್ಞರ ಪ್ರಕಾರ, ಕೆಲವು ಸರಳ ಮನೆಮದ್ದುಗಳ ಸಹಾಯದಿಂದ ಸೀನುವ ಸಮಸ್ಯೆಗೆ ಕ್ಷಣಾರ್ಧದಲ್ಲಿ ಪರಿಹಾರವನ್ನು ಪಡೆಯಬಹುದು. ಅವುಗಳೆಂದರೆ... 


* ಉಗುರುಬೆಚ್ಚಗಿನ ನೀರು: 
ನಿಮಗೆ ಸೀನುವ ಸಮಸ್ಯೆ ಇದ್ದಾಗ ತಣ್ಣೀರಿನ ಬದಲಿಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದರಿಂದ ಗಂಟಲು, ಮೂಗಿನ ಕೊಳವೆಗಳಲ್ಲಿನ ಅಡಚಣೆಯಿಂದ ಸುಲಭ ಪರಿಹಾರ ಪಡೆಯಬಹುದು. 


ಇದನ್ನೂ ಓದಿ- ಸಿಹಿ ಕಡುಬಯಕೆ ನಿವಾರಣೆ, ಬೊಜ್ಜು ಮಧುಮೇಹದ ಅಪಾಯ ಕಡಿಮೆ ಮಾಡಬಲ್ಲ ಸಕ್ಕರೆಯ 5 ಪರ್ಯಾಯಗಳಿವು


* ಸೂಪ್: 
ಋತುಮಾನಕ್ಕೆ ಅನುಗುಣವಾಗಿಯೇ ಲಭ್ಯವಿರುವ ತರಕಾರಿಗಳ ಸೂಪ್ ಸೇವನೆಯೂ ಸಹ ಸೀನುವಿಕೆ ಸಮಸ್ಯೆಗೆ ಅತ್ಯುತ್ತಮ ಪರಿಹಾರ ನೀಡಬಲ್ಲ ಮನೆಮದ್ದಾಗಿದೆ. 


* ಶುಂಠಿ ಬಳಕೆ: 
ಶುಂಠಿ ಚಹಾ ಇಲ್ಲವೇ, ಶುಂಠಿಯ ಪೇಸ್ಟ್ ತಯಾರಿಸಿ ಅದರಲ್ಲಿ ಜೇನುತುಪ್ಪ ಬೆರೆಸಿ ತಿನ್ನುವುದರಿಂದ ಸೀನುವಿಕೆಯಿಂದ ಪರಿಹಾರ ಪಡೆಯಬಹುದು.


* ವಿಟಮಿನ್ ಸಿ ಸಮೃದ್ಧ ಹಣ್ಣುಗಳ ಸೇವನೆ: 
ಕಿತ್ತಳೆ, ನಿಂಬೆ, ದ್ರಾಕ್ಷಿಯಂತಹ ವಿಟಮಿನ್ ಸಿ ಸಮೃದ್ಧ ಹಣ್ಣುಗಳ ಸೇವನೆಯಿಂದಲೂ ಸೀನುವಿಕೆ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದಾಗಿದೆ. 


ಇದನ್ನೂ ಓದಿ- ಮಧುಮೇಹ ರೋಗಿಗಳು ಎಳನೀರನ್ನು ಕುಡಿಯಬಹುದೇ..? ಸಂದೇಹ ಬಗೆಹರಿಸಿಕೊಳ್ಳಿ


* ಸ್ಟೀಮ್: 
ನೀವು ಆಗಾಗ್ಗೆ ಸೀನುವಿಕೆಯಿಂದ ತೊಂದರೆಗೀಡಾಗಿದ್ದರೆ ಇದರಿಂದ ಪರಿಹಾರ ಪಡೆಯಲು ಸ್ಟೀಮ್ ಥೆರೆಪಿ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಇದಕ್ಕಾಗಿ ಒಂದು ಸ್ಟೀಲ್ ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಅದರಲ್ಲಿ ಮುಲಾಮು ಮಿಶ್ರಣ ಮಾಡಿ ಟವಲ್ ಸಹಾಯದಿಂದ ಮುಖವನ್ನು ಕವರ್ ಮಾಡಿ ಹಬೆಯನ್ನು ತೆಗೆದುಕೊಳ್ಳಿ. ಈ ರೀತಿ ಮಾಡುವುದರಿಂದ ಸೀನುವಿಕೆ ಕಡಿಮೆಯಾಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.