Blood Sugar Test In The Morning : ಮಧುಮೇಹ ರೋಗಿಗಳು ವೈದ್ಯರ ಬಳಿಗೆ ಹೋದಾಗ, ಸಾಮಾನ್ಯವಾಗಿ ಬೆಳಿಗ್ಗಿನ ರಕ್ತ ಪರೀಕ್ಷೆಯ ವರದಿಯನ್ನು ತರುವಂತೆ ಸೂಚಿಸುತ್ತಾರೆ. ಇದರ ಹಿಂದಿನ ನಿಜವಾದ ಕಾರಣ ಏನು ಎನ್ನುವುದನ್ನು ಯಾವತ್ತಾದರೂ ಯೋಚಿಸಿದ್ದೀರಾ? ವೈದ್ಯರು ಇಂತಹ ಪರೀಕ್ಷೆಗಳನ್ನು ಮಧ್ಯಾಹ್ನ, ಸಂಜೆ ಅಥವಾ ರಾತ್ರಿಯ ವೇಳೆಯಲ್ಲಿ ನಡೆಸುವಂತೆ ಸೂಚಿಸುವುದಿಲ್ಲ. ಸಾಮಾನ್ಯವಾಗಿ ಗ್ಲೂಕೋಸ್ ಮಟ್ಟವು ಬೆಳಿಗ್ಗೆ ಹೆಚ್ಚಾಗುತ್ತದೆ. ಇದು ನಮ್ಮ ದೇಹದಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿದೆ. ಹಾಗಿದ್ದರೆ ಯಾಕೆ ಬೆಳಗ್ಗಿನ ಹೊತ್ತಿನಲ್ಲಿಯೇ ಬ್ಲಡ್ ಶುಗರ್ ಹೆಚ್ಚಾಗುತ್ತದೆ ಎನ್ನುವುದನ್ನು ನೋಡೋಣ.
ದೇಹದಲ್ಲಿ ಕೆಲ ಬದಲಾವಣೆಗಳು ಸಂಭವಿಸುತ್ತವೆ :
ನಮ್ಮ ದೇಹದಲ್ಲಿ ಬೆಳಿಗ್ಗೆ ಕೆಲವು ಹಾರ್ಮೋನುಗಳು ಬದಲಾಗುತ್ತವೆ. ನಿಮಗೆ ಮಧುಮೇಹ ಇರಲಿ ಅಥವಾ ಇಲ್ಲದಿರಲಿ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಮಧುಮೇಹದಿಂದ ಬಳಲುತ್ತಿಲ್ಲವಾದಾಗ, ದೇಹವು ಅನೇಕ ವಿಷಯಗಳನ್ನು ಸಮತೋಲನಗೊಳಿಸಲು ಹೆಚ್ಚು ಇನ್ಸುಲಿನ್ ಅನ್ನು ಸ್ರವಿಸುತ್ತದೆ. ಆದರೆ, ನೀವು ಮಧುಮೇಹದಿಂದ ಬಳಲುತ್ತಿದ್ದರೆ ಎಷ್ಟೇ ಕಟ್ಟುನಿಟ್ಟಾದ ಡಯಟ್ ಚಾರ್ಟ್ ಅನ್ನು ಅನುಸರಿಸಿದರೂ, ರಾತ್ರಿಯ ಊಟ ಮತ್ತು ಉಪಹಾರದ ನಡುವೆ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಈ ರೋಗಿಗಳ ದೇಹದಲ್ಲಿ ಇನ್ಸುಲಿನ್ ಸಾಮಾನ್ಯವಾಗಿ ಕೆಲಸ ಮಾಡುವುದಿಲ್ಲ. ರಾತ್ರಿಯಲ್ಲಿ ಬಿಡುಗಡೆಯಾಗುವ ಎಪಿನ್ಫ್ರಿನ್, ಗ್ಲುಕಗನ್ ಮತ್ತು ಕಾರ್ಟಿಸೋಲ್ನಂತಹ ಬೆಳವಣಿಗೆಯ ಹಾರ್ಮೋನ್ಗಳು ನಿಮ್ಮ ದೇಹದ ಇನ್ಸುಲಿನ್ ಪ್ರತಿರೋಧವನ್ನು ಬಲಪಡಿಸುತ್ತದೆ. ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸುವುದು ಖಚಿತ.
ಇದನ್ನೂ ಓದಿ : ಸಿಹಿ ಕಡುಬಯಕೆ ನಿವಾರಣೆ, ಬೊಜ್ಜು ಮಧುಮೇಹದ ಅಪಾಯ ಕಡಿಮೆ ಮಾಡಬಲ್ಲ ಸಕ್ಕರೆಯ 5 ಪರ್ಯಾಯಗಳಿವು
ಬೆಳಿಗ್ಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಾಗಲು 3 ದೊಡ್ಡ ಕಾರಣಗಳು :
1. ಒಂದೋ ಔಷಧಿಯನ್ನು ಹೆಚ್ಚು ತೆಗೆದುಕೊಂಡಿರುತ್ತೀರಿ, ಇಲ್ಲ ಕಡಿಮೆ ಸೇವಿಸಿರುತ್ತೀರಿ.
2. ರಾತ್ರಿಗೂ ಮುನ್ನ ದೇಹದಲ್ಲಿ ಸಾಕಷ್ಟು ಪ್ರಮಾಣದ ಇನ್ಸುಲಿನ್ ಕೊರತೆ.
3. ನೀವು ಮಲಗುವ ಮುನ್ನ ಕೆಲವು ಸಿಹಿ ಪದಾರ್ಥಗಳನ್ನು ಸೇವಿಸಿರಬಹುದು.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಏನು ಮಾಡಬೇಕು? :
ನಿಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದರೆ, ಅಸಡ್ಡೆ ಮಾಡಬೇಡಿ. ಏಕೆಂದರೆ ಇದು ಮೂತ್ರಪಿಂಡದ ಕಾಯಿಲೆ ಮತ್ತು ಹೃದಯಾಘಾತದಂತಹ ಅನೇಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ನೋಡೋಣ.
ಇದನ್ನೂ ಓದಿ : ತೆಂಗಿನ ಎಣ್ಣೆ ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆಯಾ? ಇಲ್ಲಿ ತಿಳಿದುಕೊಳ್ಳಿ!
-ಸಂಜೆ ಲಘುವಾಗಿ ಏನ್ನನಾದರೂ ತಿನ್ನಿ. ರಾತ್ರಿ 8 ರಿಂದ 9 ಗಂಟೆಯೊಳಗೆ ಊಟ ಮಾಡಿ.
-ಊಟದ ನಂತರ ತಕ್ಷಣ ಮಲಗಬೇಡಿ, ಬದಲಿಗೆ ವಾಕ್ ಮಾಡಲು ಪ್ರಯತ್ನಿಸಿ.
-ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಯನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಯಾವ ಔಷಧಿಯು ಸಕ್ಕರೆಯನ್ನು ಹೆಚ್ಚಿಸುತ್ತದೆ ಎನ್ನುವ ಜ್ಞಾನ ನಮಗೆ ಇರುವುದಿಲ್ಲ.
-ರಾತ್ರಿ ವೇಳೆ ಸಿಹಿ ತಿನ್ನದಿರಲು ಪ್ರಯತ್ನಿಸಿ.
-ರಾತ್ರಿ ಮಲಗುವ ಮುನ್ನ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಯುಕ್ತ ತಿಂಡಿಗಳನ್ನು ಸೇವಿಸಿ.
ಸೂಚನೆ: ಈ ಲೇಖನ ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಮಾಹಿತಿಯನ್ನು ಜೀ ಮೀಡಿಯಾ ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ