Home Remedies: ಕೊರೊನಾ ಸೋಂಕಿನ ನಂತರ ಕಳೆದುಕೊಂಡ ವಾಸನೆ ಗ್ರಹಿಕೆಯ ಶಕ್ತಿ ಮತ್ತು ರುಚಿ ಮರಳಿ ಪಡೆಯುವುದು ಹೇಗೆ?
Home Remedies:ಕರೋನಾ ವೈರಸ್ ಸೋಂಕಿನ ನಂತರ, ಅನೇಕ ಜನರಲ್ಲಿ ವಾಸನೆ ಮತ್ತು ರುಚಿಯ ಸಾಮರ್ಥ್ಯವು ಮೊದಲಿಗಿಂತ ಹೆಚ್ಚು ದುರ್ಬಲವಾಗಿರುತ್ತದೆ ಅಥವಾ ಬಹುತೇಕ ಇಲ್ಲವಾಗಿರುತ್ತದೆ. ಅದನ್ನು ಮರಳಿ ಪಡೆಯಲು ಸಾಧ್ಯವೇ? ಯಾವುದಾದರು ಮನೆಮದ್ದುಗಳು ನಿಮಗೆ ಸಹಾಯ ಮಾಡಬಲ್ಲವೇ ಬನ್ನಿ ತಿಳಿದುಕೊಳ್ಳೋಣ.
ನವದೆಹಲಿ: Home Remedies - ಕೊವಿಡ್-19 ಲಕ್ಷಣಗಳ (Covid-19 Symptoms) ಕುರಿತು ಹೇಳುವುದಾದರೆ, ಇವುಗಳಲ್ಲಿ ಜ್ವರ, ಶೀತ, ಮೂಗು ಸೋರುವಿಕೆ, ಆಯಾಸದ ಜೊತೆಗೆ ವಾಸನೆ ಮತ್ತು ರುಚಿಯ ಸಾಮರ್ಥ್ಯ ಕಳೆದುಕೊಳ್ಳುವಿಕೆಗಳು ಪ್ರಮುಖ ಲಕ್ಷಣಗಳೆಂದು ಹೇಳಲಾಗುತ್ತದೆ. ಕೊರೊನಾ ವೈರಸ್ ಮೊದಲ ಅಲೆಯ ಕಾಲದಲ್ಲಿಯೂ ಕೂಡ ಇವೆ ಲಕ್ಷಣಗಳು ರೋಗಿಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದವು. ಕೊವಿಡಿ -19 ಎರಡನೆಯ ಅಲೆಯಲ್ಲಿ ಈ ಲಕ್ಷಣಗಳ ಜೊತೆಗೆ ರೋಗಿಗಳಲ್ಲಿ ಬೇರೆ ಲಕ್ಷಣಗಳೂ ಕೂಡ ಕಾಣಿಸಿಕೊಳ್ಳುತ್ತಿವೆ. ನಿಮ್ಮಲ್ಲಿಯೂ ಕೂಡ ಈ ಲಕ್ಷಣಗಳು ಕಂಡುಬಂದಿದ್ದರೆ. ಹೆದರದೆ ಟೆಸ್ಟ್ ಮಾಡಿಸಿಕೊಳ್ಳಿ ಮತ್ತು ನಿಮ್ಮನ್ನು ನೀವು ಐಸೊಲೆಟ್ ಮಾಡಿಕೊಂಡು ಪಾಲಿಸಬೇಕಾದ ನಿಯಮಗಳನ್ನು ಪಾಲಿಸಿ. ಆದರೆ, ಕೊರೊನಾ ಸೋಂಕಿನ ಕಾರಣ ಕಳೆದು ಹೋಗಿರುವ ವಾಸನೆ ಮತ್ತು ರುಚಿಯ ಸಾಮರ್ಥ್ಯವನ್ನು ಮರಳಿ ಹೇಗೆ ಪಡೆಯಬೇಕು. ಈ ಕೆಳಗೆ ಸೂಚಿಸಲಾಗಿರುವ ಕೆಲ ಮನೆಮದ್ದುಗಳು ನಿಮಗೆ ಸಹಕಾರಿಯಾಗಲಿವೆ.
ವಾಸನೆ ಗ್ರಹಿಕೆ ಮತ್ತು ರುಚಿ ಸಾಮರ್ಥ್ಯ ಏಕೆ ಕಳೆದುಹೋಗುತ್ತದೆ? Loss Of Smell and Taste
ಕೊರೊನಾವೈರಸ್ (Coronavirus) ಬಗ್ಗೆ ಇದುವರೆಗೆ ನಡೆಸಲಾಗಿರುವ ಸಂಶೋಧನೆಯ ಪ್ರಕಾರ, ರುಚಿಯ ಕೊರತೆಗೆ ಕಾರಣವೆಂದರೆ ನಾಲಿಗೆಯ ತಂತ್ರ ಕಾರ್ಯನಿರ್ವಹಿಸದಿರುವಿಕೆ. ಆದರೆ ಇದು ಮೂಗಿಗೆ ಸಹ ಸಂಬಂಧಿಸಿದೆ. ವಾಸ್ತವದಲ್ಲಿ ಕರೋನಾ ಸೋಂಕಿನ ನಂತರ ವಾಸನೆ ಶಕ್ತಿ ಹದಗೆಡುತ್ತದೆ ಮತ್ತು ಇದು ನಿಮ್ಮ ರುಚಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕರೋನಾ ಸೋಂಕಿನ ಸಮಯದಲ್ಲಿ, ವೈರಸ್ ಮೂಗಿನಲ್ಲಿರುವ ವಾಸನೆಯ ಕೋಶಗಳನ್ನು ನಾಶಪಡಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಕೋಶಗಳು ಮತ್ತೆ ರೂಪುಗೊಂಡರೂ, ಅನೇಕ ರೋಗಿಗಳಲ್ಲಿ ಕರೋನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡ ನಂತರ ದೀರ್ಘಕಾಲದವರೆಗೆ ವಾಸನೆ ಮಾಡುವ ಸಾಮರ್ಥ್ಯವು ಹಿಂತಿರುಗುವುದಿಲ್ಲ ಅಥವಾ ಶಾಶ್ವತವಾಗಿ ಕಳೆದುಹೋಗುತ್ತದೆ ಎನ್ನಲಾಗುತ್ತದೆ.
ವಾಸನೆ ಗ್ರಹಿಕೆ ಸಾಮರ್ಥ್ಯ ಮರಳಿ ಪಡೆಯಲು ಸಹಕರಿಸುತ್ತವೆ ಈ ನೈಸರ್ಗಿಕ ಔಷಧಿಗಳು
1. ಅಜ್ವಾಯಿನ್ (Ajwain or Carrom Seeds) - ಪಚನ ಶಕ್ತಿ ಹೆಚ್ಚಿಸಲು, ಶೀತ-ಮೂಗು ಸೋರುವಿಕೆಯಿಂದ ರಕ್ಷಣೆ ನೀಡುವ ಸೆಲರಿ ಅಥವಾ ಅಜ್ವಾಯಿನ್ ಅಥವಾ ಕ್ಯಾರಮ್ ಸೀಡ್, ಮೂಗಿನ ವಾಸನೆ ಗ್ರಹಿಕೆ ಸಾಮರ್ಥ್ಯ ಹೆಚ್ಚಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಕರವಸ್ತ್ರದಲ್ಲಿ ಸ್ವಲ್ಪ ಅಜ್ವಾಯಿನ್ ಗಂಟು ಕಟ್ಟಿ ಅದನ್ನು ಆಘ್ರಾಣಿಸಿ. ಅಜ್ವಾಯಿನ್ ವಾಸನೆ ಶೀತ ಕಡಿಮೆ ಮಾಡಲು ನೆರವಾಗುತ್ತದೆ.
2. ಪುದೀನಾ (Mint Leaves) - ಮೂಗು, ಗಂಟಲು ಹಾಗೂ ಎದೆಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಪುದೀನಾ ಉತ್ತಮ ಮನೆಮದ್ದಾಗಿದೆ. ಇದು ನಿಮ್ಮ ಬಾಯಿ ಕಳೆದುಕೊಂಡ ರುಚಿ ಮರುಕಳಿಸಲು ಕೂಡ ಸಹಕಾರಿಯಾಗಿದೆ. ಇದಕ್ಕಾಗಿ ನೀವು ಸುಮಾರು 10-15 ಪುದಿನಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಹಾಗೂ ಅದರಲ್ಲಿ ಜೇನುತುಪ್ಪ ಬೆರೆಸಿ ದಿನದಲ್ಲಿ ಎರಡು ಬಾರಿ ಸೇವಿಸಬೇಕು. ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಸಮಸ್ಯೆ ದೂರಾಗಲಿದೆ.
ಇದನ್ನೂ ಓದಿ- 'Corona Vaccine ಫಾರ್ಮುಲಾ ಹಂಚಿಕೊಳ್ಳಲು ಅದು ಪಾಕ ವಿಧಾನ ಅಲ್ಲ'
3. ಹಸಿ ಶುಂಠಿ (Ginger) - ಹಸಿ ಶುಂಠಿಯಲ್ಲಿ ಆಂಟಿ ವೈರಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಗಳಿರುತ್ತವೆ. ಇದು ಶೀತ ಮತ್ತು ಕೆಮ್ಮು ನಿವಾರಣೆಗೆ ಒಂದು ಉತ್ತಮ ಮನೆಮದ್ದಾಗಿದೆ. ಹಸಿ ಶುಂಠಿ ಘಾಟವಾಸನೆಯಿಂದ ಕೂಡಿರುತ್ತದೆ ಮತ್ತು ಇದರ ರುಚಿ ಕೂಡ ಸ್ವಲ್ಪ ಖಾರವಾಗಿರುತ್ತದೆ. ಹೀಗಾಗಿ ಇದು ಮುಚ್ಚಿನ ಮೂಗನ್ನು ಮತ್ತೆ ಸಕ್ರೀಯಗೊಳಿಸಿ ವಾಸನೆ ಮತ್ತು ರುಚಿಯ ಸಾಮರ್ಥ್ಯವನ್ನು ಮರಳಿ ಪಡೆಯಲು ಸಹಕರಿಸುತ್ತಿದೆ.
ಇದನ್ನೂ ಓದಿ- ಗಂಟಲು ಹಿಡಿಯುವುದು ಕೂಡ ಕೊರೊನಾ ಲಕ್ಷಣವೇ? ನಿರ್ಲಕ್ಷಿಸಬೇಡಿ ತಕ್ಷಣ ಟೆಸ್ಟ್ ಮಾಡಿಸಿ
(ಸೂಚನೆ- ಯಾವುದೇ ಉಪಾಯಗಳನ್ನು ಅನುಸರಿಸುವ ಮೊದಲು ತಜ್ಞರು ಹಾಗೂ ವೈದ್ಯರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಯಾವುದೇ ಮಾಹಿತಿಯನ್ನು ಪುಷ್ಟೀಕರಿಸುವುದಿಲ್ಲ)
ಇದನ್ನೂ ಓದಿ- Coronavirus recovery: ಮನೆಯಲ್ಲಿದ್ದುಕೊಂಡು ಎರಡೇ ವಾರದಲ್ಲಿ ಕರೋನಾವನ್ನು ಹೊಡೆದೋಡಿಸಬಹುದು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.