ಕರೋನಾ ವರದಿಯು ಸಕಾರಾತ್ಮಕವಾಗಿ ಬಂದರೆ ಭಯಪಡಬೇಡಿ. ಸಕಾರಾತ್ಮಕ ಚಿಂತನೆಯಿಂದ ರೋಗವನ್ನು ಸೋಲಿಸಲು ಪ್ರಯತ್ನಿಸಿ. ರೋಗಲಕ್ಷಣಗಳು ಆರಂಭಿಕ ಸ್ಥಿತಿಯಲ್ಲಿದ್ದರೆ, 14 ದಿನಗಳಲ್ಲಿ ವೈರಸ್ ಅನ್ನು ಹೇಗೆ ಸೋಲಿಸಬಹುದು ಎನ್ನುವುದನ್ನು ಕಲಿಯಿರಿ.
ನವದೆಹಲಿ: ದೇಶದಲ್ಲಿ ಪ್ರತಿದಿನ ಕರೋನಾ ಸೋಂಕಿತರ (Coronavirus) ಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಆಕ್ಸಿಜನ್ ಕೊರತೆ ಎದುರಾಗಿದೆ. ಸರಿಯಾದ ಸಮಸಯಕ್ಕೆ ಆಕ್ಸಿಜನ್ ದೊರೆಯದ ಕಾರಣ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕರೋನಾ ರಿಪೋರ್ಟ್ ಪಾಸಿಟಿವ್ (Positive report) ಬಂದರೆ ತಮ್ಮನ್ನು ಮನೆಯಲ್ಲಿ 14 ದಿನಗಳವರೆಗೆ ಐಸೋಲೇಟ್ (Isolate) ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ. ಈ ವೇಳೆ ವೈದ್ಯರೊಡನೆ ನಿರಂತರ ಸಂಪರ್ಕದಲ್ಲಿದ್ದು ವೈದ್ಯರು ನೀಡುವ ಔಷಧಿಗಳನ್ನು ತಪ್ಪದೇ ಸೇವಿಸುವುದರಿಂದ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ವೈದ್ಯರ ಪ್ರಕಾರ, ಶೇಕಡಾ 80 ಕ್ಕಿಂತ ಹೆಚ್ಚು ಕರೋನಾ ರೋಗಿಗಳು ಮನೆಯಿಂದಲೆ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಕರೋನಾ ವರದಿ ಪಾಸಿಟಿವ್ ಬಂತೆಂದರೆ ಭಯಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದ ವೈದ್ಯರ ಸಲಹೆಯಂತೆ ನಡೆದುಕೊಂಡರೆ ಮನೆಯಲ್ಲಿದ್ದುಕೊಂಡೇ ಕರೋನಾ ವಿರುದ್ಧ ಗೆಲ್ಲಬಹುದು. ಒತ್ತಡ, ಉದ್ವೇಗ ಮತ್ತು ಭಯದಿಂದ ದೇಹದ ಆಮ್ಲಜನಕದ ಮಟ್ಟ ಇಳಿಯಲು ಪ್ರಾರಂಭಿಸುತ್ತದೆ. ದೇಹದ ಆಕ್ಸಿಜನ್ ಲೆವೆಲ್ ಕಡಿಮೆಯಾದರೆ, ಅಪಾಯ ಎದುರಾಗಬಹುದು.
ರೋಗಿಯ ಕರೋನಾ ವರದಿಯು ಪಾಸಿಟಿವ್ ಬಂದ ದಿನದಿಂದ ಮುಂದಿನ 4 ದಿನಗಳವರೆಗೆ ಬಹಳ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ವೈರಸ್ ಅತ್ಯಂತ ಶಕ್ತಿಯುತವಾಗಿರುತ್ತದೆ. ದೇಹದಲ್ಲಿ ಹರಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುತ್ತದೆ. ಈ ಸಮಯದಲ್ಲಿ ವೈರಸ್ ರೋಗಿಯ ಮೂಗು ಮತ್ತು ಗಂಟಲಿನಲ್ಲಿ ಉಳಿದಿರುತ್ತದೆ. ಈ ಸಮಯದಲ್ಲಿ, ವೈದ್ಯರು ಶಿಫಾರಸು ಮಾಡಿದ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಉಸಿರಾಟದ ವ್ಯಾಯಾಮ ಮಾಡಿ, ಸ್ಟೀಮ್ ತೆಗೆದುಕೊಳ್ಳುವುದು, ಬಿಸಿ ನೀರು ಕುಡಿಯುವುದು ಅಗತ್ಯ. ಅಲ್ಲದೆ, ಈ ಹೊತ್ತಿನಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸಿಬೇಕು. ದೇಹದ ಉಷ್ಣತೆ ಮತ್ತು ಆಮ್ಲಜನಕದ ಮಟ್ಟವನ್ನು ಪರೀಕ್ಷಿಸುತ್ತಿರಬೇಕು.
ಆರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದಲ್ಲಿ ಸೋಂಕು ಶ್ವಾಸಕೋಶವನ್ನು ತಲುಪುತ್ತದೆ. ಒಮ್ಮೆ ಶ್ವಾಸಕೋಶ ತಲುಪಿದರೆ, ಸೋಂಕಿನಿಂದಾಗಿ, 8 ರಿಂದ 10 ದಿನಗಳಲ್ಲಿ ಕೋವಿಡ್ ನ್ಯುಮೋನಿಯಾ ಅಪಾಯವಿರುತ್ತದೆ. ಆದ್ದರಿಂದ ರೋಗಲಕ್ಷಣಗಳಿಗೆ ಸಂಬಂಧಿಸಿದಂತೆ ನಿಮ್ಮ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರಿ. ನೀವು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದರೆ ಮತ್ತು ಸ್ಥಿತಿ ಸಾಮಾನ್ಯವಾಗಿದ್ದರೆ, ರೋಗಿಯ ಜ್ವರವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದರೆ ದೇಹದಲ್ಲಿ ನೋವು ಮತ್ತು ದೌರ್ಬಲ್ಯವಿರುತ್ತದೆ. ಆದ್ದರಿಂದ ಈ ಸಮಯದಲ್ಲಿ, ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸಬೇಕು. ಸರಿಯಾಗಿ ನೀರು ಕುಡಿಯಬೇಕು. ಸ್ಟೀಮ್ ತೆಗೆದುಕೊಳ್ಳುತ್ತಿರಬೇಕು. ಅಲ್ಲದೆ ದೇಹದ ಟೆಂಪರೇಚರ್ ಮತ್ತು ಆಮ್ಲಜನಕದ ಮಟ್ಟವನ್ನು ಪರೀಕ್ಷಿಸುತ್ತಿರಬೇಕು.
ನೀವು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದರೆ, ಈ ಹಂತದಲ್ಲಿ ನೀವು ವೈರಸ್ ನ ಅಪಾಯ ಕಡಿಮೆಯಾಗಲು ಆರಂಭವಾಗುತ್ತದೆ. ಈ ಸಮಯದಲ್ಲಿ ಉತ್ತಮ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ,. ವ್ಯಾಯಾಮ ಮಾಡುವುದರಿಂದ ಕಳೆದುಹೋದ ಶಕ್ತಿಯನ್ನು ಮರಳಿ ಪಡೆಯಬಹುದು ಮತ್ತು ದೇಹ ದೌರ್ಬಲ್ಯವನ್ನು ಕೂಡಾ ದೂರ ಮಾಡಬಹುದು. ಆದರೆ ನೆನಪಿಡಿ, ನಿಮ್ಮ ವರದಿ ನೆಗೆಟಿವ್ ಬರುವವರೆಗೆ ಐಸೋಲೇಶನ್ ನಲ್ಲಿರುವುದು ಅತೀ ಅವಶ್ಯಕ.
ಸೋಂಕಿತ ವ್ಯಕ್ತಿ, ಎಲ್ಲಾ ಸಮಯದಲ್ಲೂ ಮೂರು-ಪದರದ ಮಾಸ್ಕ್ ಧರಿಸಬೇಕು ಮತ್ತು ಪ್ರತಿ 6-8 ಗಂಟೆಗಳಿಗೊಮ್ಮೆ ಅದನ್ನು ಬದಲಾಯಿಸುತ್ತಿರಬೇಕು -ಪಾತ್ರೆ, ಟವೆಲ್, ಬೆಡ್‌ಶೀಟ್, ಬಟ್ಟೆ ಇತ್ಯಾದಿಗಳನ್ನು ಪ್ರತ್ಯೇಕವಾಗಿಟ್ಟುಕೊಳ್ಳಬೇಕು - ಸಾಬೂನು ನೀರು ಮತ್ತು ಸ್ಯಾನಿಟೈಜರ್‌ನಿಂದ ನಿಮ್ಮ ಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಿರಬೇಕು ಆರೋಗ್ಯಕರ ಆಹಾರವನ್ನು ತಿನ್ನುವುದರ ಮೂಲಕ ದೈಹಿಕವಾಗಿ ಸದೃಢರಾಗಿರುವ ಜೊತೆ ಮಾನಸಿಕವಾಗಿ ಸದೃಢರಾಗಿರುವುದು ಕೂಡಾ ಬಹಳ ಮುಖ್ಯ, ಆದ್ದರಿಂದ ಸಕಾರಾತ್ಮಕ ಚಿಂತನೆಯನ್ನು ಇಟ್ಟುಕೊಳ್ಳಿ, ಉತ್ತಮ ಪುಸ್ತಕಗಳನ್ನು ಓದಿ, ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಫೋನ್‌ನಲ್ಲಿ ಮಾತನಾಡಿ.