ಬೆಳಗ್ಗೆ ಖಾಲಿ ಹೊಟ್ಟೆಗೆ ಈ ನಾಲ್ಕು ಪಾನೀಯ ಕುಡಿದರೆ ವಾರಗಳಲ್ಲಿ ಕಡಿಮೆಯಾಗುವುದು belly fat
Belly Fat Reducing Tips : ಕೆಲವು ಆರೋಗ್ಯಕರ ಪಾನೀಯಗಳನ್ನು ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡುವುದು ಸಾಧ್ಯವಾಗುತ್ತದೆ. ಈ ಪಾನೀಯಗಳಲ್ಲಿ ಕಂಡುಬರುವ ನೈಸರ್ಗಿಕ ಪೋಷಕಾಂಶಗಳು ದೇಹದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ.
Belly Fat Reducing Tips : ಹೊಟ್ಟೆಯ ಭಾಗದ ಕೊಬ್ಬು ಬಹುತೇಕ ಎಲ್ಲಾ ವಯಸ್ಸಿನವರ ಸಮಸ್ಯೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಅನೇಕ ರೀತಿಯ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು, ನಿಯಮಿತ ವ್ಯಾಯಾಮದ ಹೊರತಾಗಿ, ಅಧಿಕ ಸಮಯದವರೆಗೆ ಕುಳಿತಲ್ಲೇ ಕುಳಿತುಕೊಳ್ಳುವ ಅಭ್ಯಾಸವನ್ನು ಕೂಡಾ ತಪ್ಪಿಸಬೇಕು. ಇದಲ್ಲದೆ, ಕೆಲವು ಆರೋಗ್ಯಕರ ಪಾನೀಯಗಳನ್ನು ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡುವುದು ಸಾಧ್ಯವಾಗುತ್ತದೆ. ಈ ಪಾನೀಯಗಳಲ್ಲಿ ಕಂಡುಬರುವ ನೈಸರ್ಗಿಕ ಪೋಷಕಾಂಶಗಳು ದೇಹದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ. ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೇನು-ನಿಂಬೆ ಮತ್ತು ಉಗುರು ಬೆಚ್ಚಗಿನ ನೀರು :
ಇದು ಪ್ರಪಂಚದಾದ್ಯಂತ ಜನರು ಪ್ರಯತ್ನಿಸುವ ಸುಲಭ ಮತ್ತು ಜನಪ್ರಿಯ ಪಾಕವಿಧಾನವಾಗಿದೆ. ನಿಂಬೆ ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ. ನಿಂಬೆಯು ಪೆಕ್ಟಿನ್ ಎಂಬ ಫೈಬರ್ ಅನ್ನು ಹೊಂದಿರುತ್ತದೆ. ಇದು ಕೊಬ್ಬನ್ನು ಕರಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಬೆಳಿಗ್ಗೆ ಉಗುರುಬೆಚ್ಚಗಿನ ನೀರಿನಲ್ಲಿ ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಫಲಿತಾಂಶ ಬಹಳ ಬೇಗ ಸಿಗುತ್ತದೆ.
ಇದನ್ನೂ ಓದಿ : ಮಾನ್ಸೂನ್‌ನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ
ನೆಲ್ಲಿ ರಸ :
ನೆಲ್ಲಿಕಾಯಿಯಲ್ಲಿ ಕ್ರೋಮಿಯಂ ಎಂಬ ಅಂಶವಿದ್ದು ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಆಂಟಿ ಏಜಿಂಗ್ ಅಂಶಗಳಿಂದ ಸಮೃದ್ಧವಾಗಿರುವ ಹಣ್ಣಾಗಿದ್ದು, ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುವ ಮೂಲಕ, ಕರುಳಿನ ಚಲನೆಯು ಸುಧಾರಿಸುತ್ತದೆ. ಇದು ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಚಯಾಪಚಯವನ್ನು ಹೆಚ್ಚಿಸುತ್ತದೆ. ತಾಜಾ ನೆಲ್ಲಿಕಾಯಿಯ ರಸ ತೆಗೆದು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಕುಡಿಯಿರಿ. ಅದೇ ರೀತಿ ನೆಲ್ಲಿಕಾಯಿ ಸಿರಪ್ ಅಥವಾ ಮೊದಲೇ ತಯಾರಿಸಿದ ಜ್ಯೂಸ್ ಅನ್ನು ಸಹ ನೀರಿನಲ್ಲಿ ಬೆರೆಸಿ ಕುಡಿಯಬಹುದು.
ಜೀರಿಗೆ ನೀರು :
ಜೀರಿಗೆ ಹೊಟ್ಟೆಯನ್ನು ತಂಪಾಗಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಜೀರಿಗೆ ನೈಸರ್ಗಿಕ ನಿರ್ವಿಶೀಕರಣ ಅಂಶಗಳಿಂದ ಸಮೃದ್ಧವಾಗಿದೆ ಮತ್ತು ಕಡಿಮೆ ಕ್ಯಾಲೋರಿ ಆಹಾರವಾಗಿದೆ. ಜೀರಿಗೆಯು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಇದರಿಂದ ದೇಹದ ಚಯಾಪಚಯ ಕೂಡಾ ಉತ್ತಮವಾಗಿರುತ್ತದೆ. ಅದಕ್ಕಾಗಿಯೇ ಜೀರಿಗೆ ಬೆರೆಸಿದ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವಂತೆ ಹೇಳಲಾಗುತ್ತದೆ.
ಇದನ್ನೂ ಓದಿ : Brown Rice For Obesity: ಬೊಜ್ಜಿನ ಸಮಸ್ಯೆಯಿಂದ ನೀವೂ ತೊಂದರೆಗೊಳಗಾಗಿದ್ದೀರಾ? ಈ ರೈಸ್ ಅನ್ನು ಒಮ್ಮೆ ಟ್ರೈ ಮಾಡಿ ನೋಡಿ
ಸೊಂಪಿನ ನೀರು :
ಈ ಆರೋಗ್ಯಕರ ಮಸಾಲೆಯೊಂದಿಗೆ ಇತರ ಮಸಾಲೆಗಳಾದ ಜೀರಿಗೆ, ಒಮಕಾಳು ಮತ್ತು ಮೆಂತ್ಯವನ್ನು ಹಾಕಿ ರಾತ್ರಿಯಿಡೀ ನೆನೆಸಿ ಮತ್ತು ಮರುದಿನ ಆ ನೀರನ್ನು ಕುದಿಸಿ ಕುಡಿಯಿರಿ. ಸೊಂಫು ಅಜೀರ್ಣವನ್ನು ಕಡಿಮೆ ಮಾಡುವ ಮತ್ತು ಹೊಟ್ಟೆ ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ. ಅದರ ಸೇವನೆಯು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿರುತ್ತದೆ. ಇದು ಜೀರ್ಣ ಕ್ರಿಯೆಯನ್ನು ಬಲಪಡಿಸುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.