Diabetes Symptoms: ಶರೀರದ ಈ ಭಾಗ ಹಳದಿ ಬಣ್ಣಕ್ಕೆ ತಿರುಗಿದರೆ ತಕ್ಷಣ ಎಚ್ಚೆತ್ತುಕೊಳ್ಳಿ! ಈ ಲಕ್ಷಣವಾಗಿರಬಹುದು

Diabetes Warning Sign: ಡಯಾಬಿಟಿಸ್ ರೋಗಿಗಳ ಶರೆರದಲ್ಲಿ ಬ್ಲಡ್ ಶುಗರ್ ಹೆಚ್ಚಾದಾಗ, ಶರೀರದಲ್ಲಿ ವಿವಿಧ ರೀತಿಯ ಅಡಚಣೆಗಳು ಎದುರಾಗುತ್ತವೆ. ಅವುಗಳ ಲಕ್ಷಣಗಳನ್ನು ಕಂಡುಹಿಡಿಯುವುದು ತುಂಬಾ ಮುಖ್ಯ.   

Written by - Nitin Tabib | Last Updated : Aug 2, 2022, 01:48 PM IST
  • ಮಧುಮೇಹ ರೋಗಿಗಳ ಜೀವನವು ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ,
  • ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ತೀವ್ರ ನಿಗಾವಹಿಸಬೇಕಾಗುತ್ತದೆ,
  • ಅದರಲ್ಲೂ ವಿಶೇಷವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪದೇ ಪದೇ ಅವರು ಪರೀಕ್ಷಿಸಬೇಕಾಗುತ್ತದೆ.
Diabetes Symptoms: ಶರೀರದ ಈ ಭಾಗ ಹಳದಿ ಬಣ್ಣಕ್ಕೆ ತಿರುಗಿದರೆ ತಕ್ಷಣ ಎಚ್ಚೆತ್ತುಕೊಳ್ಳಿ! ಈ ಲಕ್ಷಣವಾಗಿರಬಹುದು title=
Diabetes Symptoms

Diabetes Symptoms in Finger Nails: ಮಧುಮೇಹ ರೋಗಿಗಳ ಜೀವನವು ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ, ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ತೀವ್ರ ನಿಗಾವಹಿಸಬೇಕಾಗುತ್ತದೆ, ಅದರಲ್ಲೂ ವಿಶೇಷವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪದೇ ಪದೇ ಅವರು ಪರೀಕ್ಷಿಸಬೇಕಾಗುತ್ತದೆ. ಈ ಕುರಿತು ನಮ್ಮ ದೇಹ ಅನೇಕ ಸಂಕೇತಗಳನ್ನು ನೀಡುತ್ತದೆ, ಆ ಸಂಕೇತಗಳನ್ನು ಸರಿಯಾದ ಸಮಯಕ್ಕೆ ಗುರುತಿಸುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಅನೇಕ ಇತರ ರೋಗಗಳ ಅಪಾಯ ಎದುರಾಗುತ್ತದೆ. ಮಧುಮೇಹ ನಮ್ಮ ಉಗುರುಗಳ ಮೂಲಕ ಸಂಕೇತ ನೀಡುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಮಧುಮೇಹದಲ್ಲಿ ಗ್ಲುಕೋಸ್ ಮಟ್ಟದ ಹೆಚ್ಚಳ ನಮ್ಮ ಕೈಗಳ ಉಗುರುಗಳಿಗೆ ಸಂಬಂಧಿಸಿದೆಯೇ? ಬನ್ನಿ ತಿಳಿದುಕೊಳ್ಳೋಣ.

ಮಧುಮೇಹಿಗಳ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆಯೇ?
ಕೈಗಳ ಉಗುರುಗಳು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದಾಗ, ಅನೇಕ ಜನರು ತಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗಿದೆ ಎಂದು ಹೆದರುತ್ತಾರೆ. ಆದರೆ ಬಹುತೇಕ ಆರೋಗ್ಯ ತಜ್ಞರು ಹಳದಿ ಉಗುರುಗಳು ಮಧುಮೇಹದೊಂದಿಗೆ ನೇರ ಸಂಬಂಧವನ್ನು ಹೊಂದಿಲ್ಲ ಮತ್ತು ಅಂತಹ ಫಲಿತಾಂಶ ಯಾವುದೇ ಫಲಿತಾಂಶ ಸಂಶೋಧನೆಯಲ್ಲಿ ಬಹಿರಂಗಗೊಂಡಿಲ್ಲ ಎಂದು ಹೇಳುತ್ತಾರೆ. ಉಗುರುಗಳ ಹಳದಿ ಬಣ್ಣವು ದೇಹದಲ್ಲಿನ ಇತರ ಸಮಸ್ಯೆಗಳ ಸಂಕೆತವಾಗಿರಬಹುದು, ಇವುಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳ ಅಥವಾ ಕಾಮಾಲೆ ರೂಗ ಕೂಡ ಶಾಮೀಲಾಗಿವೆ.

ಮೂತ್ರಪಿಂಡದ ಕಾಯಿಲೆಯಿಂದ ಉಗುರುಗಳು ಹಳದಿ ಬಣ್ಣಕ್ಕೆ ತಿರುಗಬಹುದು
ಸಾಮಾನ್ಯವಾಗಿ ಮಧುಮೇಹದಿಂದಾಗಿ ಮೂತ್ರಪಿಂಡದ ಕಾಯಿಲೆಯು ರೋಗಿಗಳಲ್ಲಿ ಕಂಡುಬರುತ್ತದೆ, ನಂತರ ರಕ್ತಹೀನತೆ ರೋಗವು ಸಾಮಾನ್ಯವಾಗಿದೆ. ರಕ್ತದ ಕೊರತೆಯಿಂದಾಗಿ, ಉಗುರುಗಳ ಬಣ್ಣವು ತಿಳಿ ಹಳದಿ ಬಣ್ಣಕ್ಕೆ ಬದಲಾಗುತ್ತವೆ. ಆದರೆ, ಇದು ತುಂಬಾ ಅಪರೂಪ. 

ಮಧುಮೇಹದಲ್ಲಿ ರಕ್ತಹೀನತೆ ಏಕೆ?
ರಕ್ತಹೀನತೆ ಎಂದರೆ ದೇಹದಲ್ಲಿ ರಕ್ತದ ಕೊರತೆ, ಮಧುಮೇಹದ ಸಮಯದಲ್ಲಿ ಇದು ಸಂಭವಿಸುವ ಹಿಂದೆ ಹಲವು ಕಾರಣಗಳಿರಬಹುದು, ಆದರೆ ಇದಕ್ಕೆ ಮುಖ್ಯ ಕಾರಣವೆಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುವುದು, ರಕ್ತನಾಳಗಳಲ್ಲಿ ಊತ ಅಥವಾ ರಕ್ತ ಹೆಪ್ಪುಗಟ್ಟುವಿಕೆ ಇತ್ಯಾದಿಗಳು. ಇಂತಹ ಪರಿಸ್ಥಿತಿಯಲ್ಲಿ, ಮೂತ್ರಪಿಂಡದ ರಕ್ತನಾಳಗಳಲ್ಲಿ ಬದಲಾವಣೆಗಳು ಬರಲು ಪ್ರಾರಂಭಿಸುತ್ತವೆ. ಮೂತ್ರಪಿಂಡವು ಸರಿಯಾಗಿದ್ದರೆ, ಕೆಂಪು ರಕ್ತ ಕಣಗಳ ಉತ್ಪಾದನೆಯು ಸರಿಯಾಗಿರುತ್ತದೆ ಮತ್ತು ಎರಿಥ್ರೋಪೊಯೆಟಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದು ಮೂಳೆ ಮಜ್ಜೆಗೆ ಪ್ರಯೋಜನಕಾರಿಯಾಗಿದೆ. ಇನ್ನೊಂದೆಡೆ, ಮೂತ್ರಪಿಂಡದ ಕಾಯಿಲೆಯಲ್ಲಿ, ಈ ಪ್ರಕ್ರಿಯೆಯಲ್ಲಿ ಅಡಚಣೆ ಎದುರಾಗುತ್ತದೆ ಮತ್ತು ನಮ್ಮ ಮೂತ್ರಪಿಂಡಗಳು ರಕ್ತವನ್ನು ಸರಿಯಾಗಿ ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ-ಭೋಜನದ ವೇಳೆ ಮಾಡುವ ಈ ನಾಲ್ಕು ತಪ್ಪು ಭಾರೀ ಸಮಸ್ಯೆಗಳನ್ನು ಉಂಟು ಮಾಡಬಹುದು .!

ಉಗುರುಗಳು ಏಕೆ ಹಳದಿ ಬಣ್ಣಕ್ಕೆ ತಿರುಗುತ್ತವೆ?
ಉಗುರಿನ ನೈಸರ್ಗಿಕ ಬಣ್ಣವು ಗುಲಾಬಿಯಾಗಿರುತ್ತದೆ. ಆದರೆ ದೇಹದಲ್ಲಿ ಕೆಲವು ಸಮಸ್ಯೆಗಳಿದ್ದಾಗ, ಅದರ ಬಣ್ಣವು ಹಳದಿ ಬಣ್ಣಕ್ಕೆ ತಿರುಗಬಹುದು. ದೇಹದಲ್ಲಿ ಜೀವಸತ್ವಗಳು ಮತ್ತು ಖನಿಜಗಳ ಕೊರತೆಯಿರುವಾಗ ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ಇದೇ ವೇಳೆ ಇದು ಸೋರಿಯಾಸಿಸ್, ಥೈರಾಯ್ಡ್ ಮತ್ತು ಅಧಿಕ ಕೊಲೆಸ್ಟ್ರಾಲ್ನ ಸಂಕೇತವೂ ಆಗಿರಬಹುದು.

ಇದನ್ನೂ ಓದಿ-ಈ ನಾಲ್ಕು ಎಣ್ಣೆಯನ್ನು ಅಡುಗೆಗೆ ಬಳಸಿದರೆ ಹೃದ್ರೋಗ ಹತ್ತಿರವೂ ಸುಳಿಯುವುದಿಲ್ಲ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ  ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News