ಬೆಂಗಳೂರು : ಚಳಿಗಾಲದಲ್ಲಿ ಬಿಸಿಬಿಸಿ ಟೀ ಅಥವಾ ಕಾಫಿ ಕುಡಿಯುವುದರಿಂದ ದೇಹಕ್ಕೆ  ಹಿತ ಅನುಭವವಾಗುತ್ತದೆ. ಆದರೆ, ಇದು ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ತರುತ್ತದೆ. ಚಳಿಗಾಲದಲ್ಲಿ ಕೂದಲು ಮತ್ತು ತ್ವಚೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾದಾಗ ಕ್ರೀಮ್‌ಗಳಿಂದ ಚರ್ಮವನ್ನು ತೇವಗೊಳಿಸುವುದು ಮತ್ತು ಸಾಕಷ್ಟು ನೀರಿನಿಂದ ಹೈಡ್ರೀಕರಿಸಿರುವುದರಿಂದ  ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ  ಚಳಿಗಾಲದಲ್ಲಿ ಕೂದಲಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ, ಚಳಿಗಾಲದಲ್ಲಿ ಕೂದಲು ಶುಷ್ಕವಾಗುತ್ತದೆ.  ತಲೆಹೊಟ್ಟು ಸಮಸ್ಯೆ ಕಾಣಿಸಿಕೊಳ್ಳುತ್ತದೆ. 


COMMERCIAL BREAK
SCROLL TO CONTINUE READING

ಎಷ್ಟು ಬಾರಿ ಕೂದಲು ತೊಳೆಯಬೇಕು? : 
ಆರೋಗ್ಯಕರ ಮತ್ತು ಹೊಳೆಯುವ ಕೂದಲನ್ನು ಹೊಂದುವುದು ಬಹಳ ಮುಖ್ಯ. ಆದರೆ, ಇದರ ಹಿಂದೆ ಮಾಡಬೇಕಾದ ಕೆಲಸ ಬಹಳಷ್ಟಿದೆ. ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ಪೋಷಣೆಗಿಂತ ಇನ್ನೂ ಅನೇಕ ಕ್ರಮಗಳ ಅಗತ್ಯವಿರುತ್ತದೆ. ಕೂದಲನ್ನು ಧೂಳು ಮತ್ತು ತಲೆಹೊಟ್ಟು ಮುಕ್ತವಾಗಿಡುವುದು ಬಹಳ ಮುಖ್ಯ . ಇಲ್ಲದಿದ್ದರೆ ಕೂದಲು ಉದುರುವ ಸಮಸ್ಯೆ ಎದುರಾಗುತ್ತದೆ. ಎಷ್ಟು ಬಾರಿ ಕೂದಲು ತೊಳೆಯಬೇಕು, ಯಾವ ರೀತಿಯ ಶಾಂಪೂ ಬಳಸಬೇಕು ? ಕಂಡಿಷನರ್ ಅನ್ನು ಹೇಗೆ ಬಳಸಬೇಕು ?  ಕೂದಲ ಬೆಳವಣಿಗೆಗೆ ಏನು ತಿನ್ನಬೇಕು ಎನ್ನುವಂಥಹ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಇದರ ಜೊತೆಗೆ ಅತಿಯಾಗಿ ಕಾಡುವ ಪ್ರಶ್ನೆ ಎಂದರೆ ಕೂದಲನ್ನು ತಣ್ಣೀರಿನಿಂದ ತೊಳೆಯಬೇಕೋ? ಬಿಸಿ ನೀರಿನಿಂದ  ತೊಳೆಯಬೇಕೋ ಎನ್ನುವುದು.


ಇದನ್ನೂ ಓದಿ : ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಇಲ್ಲಿವೆ ಸುಲಭ ಪರಿಹಾರಗಳು...!


ಕೂದಲಿಗೆ ಯಾವ ನೀರು ಉತ್ತಮ ? : 
ವೈದ್ಯರು ನೀಡಿದ ಸೂಚನೆಗಳ ಪ್ರಕಾರ, ಬಿಸಿನೀರು ಕೂದಲಿಗೆ ತುಂಬಾ ಹಾನಿಕಾರಕವಾಗಿದೆ. ಏಕೆಂದರೆ ಇದು ಕೂದಲನ್ನು ನಿರ್ಜಲೀಕರಣಗೊಳಿಸುತ್ತದೆ, ಶುಷ್ಕವಾಗಿಸುತ್ತದೆ. ಹೀಗಾಗಿ ತಣ್ಣೀರು ಕೂದಲಿಗೆ ಉತ್ತಮವಾಗಿದೆ. ತಣ್ಣೀರು   ಕೂದಲನ್ನು ಹಾನಿಗೊಳಿಸುವುದಿಲ್ಲ. ಕೂದಲಿಗೆ ಸಾಧ್ಯವಾದಷ್ಟು ತಣ್ಣೀರು ಅಥವಾ ಸಾಮಾನ್ಯ ತಾಪಮಾನದ ನೀರನ್ನು ಬಳಸುವುದು ಮುಖ್ಯ. ಕಂಡಿಷನರ್ ಅಥವಾ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿದರೆ ಅವುಗಳನ್ನು ನೀರಿನಿಂದ ಚೆನ್ನಾಗಿ ತೊಳೆಯುವುದು ಸಹ ಮುಖ್ಯವಾಗಿದೆ. ಅಲ್ಲದೆ, ಪ್ರತಿಯೊಂದು ಕೂದಲಿನ ಪ್ರಕಾರಕ್ಕೂ ವಿಭಿನ್ನವಾದ ಕೂದಲ ರಕ್ಷಣೆಯ ನಿಯಮಗಳು ಬೇಕಾಗುತ್ತವೆ.  


ಎಣ್ಣೆಯುಕ್ತ ಕೂದಲಿನ ಆರೈಕೆ :  
ಕೂದಲು ತುಂಬಾ ಎಣ್ಣೆಯುಕ್ತವಾಗಿದ್ದರೆ, ಅದನ್ನು ಪ್ರತಿದಿನ ತೊಳೆಯುವುದು ಉತ್ತಮ. ಹೀಗೆ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ. ಆದರೂ  ಎಣ್ಣೆಯುಕ್ತ ಕೂದಲನ್ನು ಶಾಂಪೂ ಮತ್ತು ಕಂಡಿಷನರ್ ನಿಂದ ಮಿತವಾಗಿ ತೊಳೆಯಬೇಕು. ಕೂದಲು ಉದುರುವಿಕೆ ಸಮಸ್ಯೆ ಇದ್ದರೆ, ವಾರಕ್ಕೆ ಎರಡು ಬಾರಿ ಸಲ್ಫೇಟ್ ರಹಿತ ಶಾಂಪೂಗಳಿಂದ ಕೂದಲನ್ನು ತೊಳೆಯಬೇಕು. ಈ ಶ್ಯಾಂಪೂಗಳು ಕೂದಲಿನ ನೈಸರ್ಗಿಕ ತೈಲಗಳನ್ನು ಉಳಿಸಿ, ಕೂದಲು ಶುಷ್ಕವಾಗುವುದನ್ನು ತಡೆಯುತ್ತದೆ. 


ಇದನ್ನೂ ಓದಿ : ವಾರದಲ್ಲಿ 3 ಬಾರಿ ಪೇರಳೆ ಜ್ಯೂಸ್ ಕುಡಿಯಿರಿ: ಈ ಕಾಯಿಲೆಗಳಿಂದ ಪಡೆಯಿರಿ ಶಾಶ್ವತ ಮುಕ್ತಿ


ಕರ್ಲಿ ಕೂದಲ ನಿರ್ವಹಣೆ ಹೇಗೆ ? : 
ಕರ್ಲಿ ಕೂದಲನ್ನು ನಿರ್ವಹಿಸುವುದು ಕಷ್ಟ. ಕರ್ಲಿ ಕೂದಲನ್ನು ಸೌಮ್ಯವಾದ ಅಥವಾ ಸಲ್ಫೇಟ್ ಮುಕ್ತ ಶಾಂಪೂ ಅಥವಾ ಕಂಡಿಷನರ್‌ನಿಂದ ವಾರಕ್ಕೆ ಎರಡು ಅಥವಾ ಮೂರು ಬಾರಿ ತೊಳೆಯಬಹುದು. ಕೂದಲು ಉದುರುವುದನ್ನು ತಪ್ಪಿಸಲು ಒದ್ದೆ ಕೂದಲನ್ನು ಬಾಚಬಾರದು. ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸುವುದು ಉತ್ತಮ. ಏಕೆಂದರೆ ಇದು ಕೂದಲಿನ ಬುಡವನ್ನು ಒಡೆಯುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.