ನವದೆಹಲಿ: ದೇಶಾದ್ಯಂತ ಕರೋನಾವೈರಸ್ ವೇಗವಾಗಿ ಹರಡುತ್ತಿದೆ. ಈ ಮಧ್ಯೆ ಸ್ಟೀಮ್ ತೆಗೆದುಕೊಳ್ಳುವುದರಿಂದ ಕರೋನಾವೈರಸ್ ಅನ್ನು ಮಣಿಸಬಹುದು ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ. ಕರೋನಾವೈರಸ್ ವಿರುದ್ಧ ರಕ್ಷಣೆ ಪಡೆಯಲು ಸ್ಟೀಮ್ ಎಷ್ಟು ಪರಿಣಾಮಕಾರಿ ಎಂದು ನಾವು ನಿಮಗೆ ತಿಳಿಸಲಿದ್ದೇವೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಸ್ಟೀಮ್ ತೆಗೆದುಕೊಳ್ಳುವುದರ ಬಗ್ಗೆ ಹಲವು ಸಂಶೋಧನೆಗಳು ನಡೆದಿದ್ದು ಇದರಿಂದಾಗುವ ಪ್ರಯೋಜನಗಳ ಬಗ್ಗೆ ಉಲ್ಲೇಖಿಸಲಾಗಿದೆ. ಸಂಶೋಧನೆಯೊಂದರ ಪ್ರಕಾರ ಸ್ಟೀಮ್ ತೆಗೆದುಕೊಳ್ಳುವುದರಿಂದ ಗಂಟಲಿನಲ್ಲಿ ಸಂಗ್ರಹವಾಗಿರುವ ಕಫವನ್ನು ತೆಗೆದುಹಾಕುತ್ತದೆ. ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ​​ನಡೆಸಿದ ಅಧ್ಯಯನವು ಸ್ಟೀಮ್ ತೆಗೆದುಕೊಳ್ಳುವುದರಿಂದ ನಮ್ಮ ಮೂಗಿನ ಲೋಳೆಯು ಕಡಿಮೆಯಾಗುತ್ತದೆ. ಲೋಳೆಯು ಲೋಳೆಯನ್ನೇ ಉತ್ಪಾದಿಸುತ್ತದೆ. ಆದ್ದರಿಂದ, ವೈದ್ಯರು ಸ್ಟೀಮ್ ತೆಗೆದುಕೊಳ್ಳಲು ಶಿಫಾರಸು ಮಾಡುತ್ತಾರೆ. ಆದರೆ ಇದು ಕರೋನಾ ವೈರಸ್ ಅನ್ನು ಸಂಪೂರ್ಣವಾಗಿ ನಿವಾರಿಸುವುದಿಲ್ಲ.


ಇದನ್ನೂ ಓದಿ - Good News: ಭಾರತೀಯ ಮಾರುಕಟ್ಟೆಯಲ್ಲಿ ತನ್ನ Covid-19 Drug ಬಿಡುಗಡೆಗೊಳಿಸಿದ Bajaj Health Care


ನೀವು ಸ್ಟೀಮ್ ತೆಗೆದುಕೊಂಡಾಗ ಏನಾಗುತ್ತದೆ?
ಸ್ಟೀಮ್ ತೆಗೆದುಕೊಳ್ಳುವುದರಿಂದ ನಮ್ಮ ದೇಹವು ಆಮ್ಲಜನಕವನ್ನು ಪಡೆಯುತ್ತದೆ. ಉಸಿರಾಟವು ಉಸಿರಾಟದ ಕೊಳವೆ ತೆರೆಯುತ್ತದೆ. ಆದರೆ ವೈರಸ್ ಸಾಯುವುದಿಲ್ಲ. ವಾಸ್ತವವಾಗಿ, ಕರೋನಾವೈರಸ್ (Coronavirus) ಲಂಗ್ಸ್ ಎಂದರೆ ಶ್ವಾಸಕೋಶಗಳ ಮೇಲೆ ದಾಳಿ ಮಾಡುತ್ತದೆ. ಅದಕ್ಕಾಗಿಯೇ ರೋಗಿಗೆ ಉಸಿರಾಟದ ತೊಂದರೆ ಎದುರಾಗಲಿದೆ. ಹಾಗಾಗಿ ಸ್ಟೀಮ್ ಪಡೆಯುವ ಮೂಲಕ ನೀವು ಉಸಿರಾಟದ ಸಮಸ್ಯೆಯಿಂದ ಖಂಡಿತವಾಗಿಯೂ ಪರಿಹಾರ ಪಡೆಯುತ್ತೀರಿ.


ಹೆಚ್ಚಿನ ಸ್ಟೀಮ್ ತೆಗೆದುಕೊಳ್ಳುವುದು ಕೂಡ ಅಪಾಯಕಾರಿ:
ಸ್ಟೀಮ್ (Steam) ನಿಮ್ಮ ಉಸಿರಾಟದ ಸಮಸ್ಯೆಗೆ ಪರಿಹಾರ ನೀಡುವುದರಲ್ಲಿ ಸಂದೇಹವಿಲ್ಲ. ಆದರೆ ಅತಿಯಾದರೆ ಅಮೃತವೂ ವಿಷವೇ ಎಂಬಂತೆ ಅತಿಯಾಗಿ ಸ್ಟೀಮ್ ತೆಗೆದುಕೊಳ್ಳುವುದರಿಂದ ನಿಮಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಅಧಿಕ ಸ್ಟೀಮ್ ತೆಗೆದುಕೊಳ್ಳುವುದರಿಂದ ಗಂಟಲಿನ ಅಂಗಾಂಶ ಕೋಶಗಳಲ್ಲಿ ಉರಿ ಕಾಣಿಸಿಕೊಳ್ಳಬಹುದು. ಹಾಗೆಯೇ ಹಲವೊಮ್ಮೆ ಸ್ಟೀಮ್ ಹೆಚ್ಚಾಗಿ ಪಡೆಯುವುದರಿಂದ ಮೂಗಿನಲ್ಲಿ ಉರಿ ರೀತಿಯ ಅನುಭವವಾಗುತ್ತದೆ. ಇದರಿಂದ ನಿಮಗೆ ಉಸಿರಾಟದ ಸಮಸ್ಯೆ ಕೂಡ ಉಂಟಾಗಬಹುದು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ - Coronavirus N440K Strain: ಭಾರತದಲ್ಲಿನ N-440K ಕೊರೊನಾ ರೂಪಾಂತರಿ ತುಂಬಾ ಅಪಾಯಕಾರಿ, 10 ಪಟ್ಟು ಹೆಚ್ಚು ವೇಗವಾಗಿ ಹರಡುತ್ತಿದೆ


ದಿನಕ್ಕೆ ಎಷ್ಟು ಬಾರಿ ಸ್ಟೀಮ್ ತೆಗೆದುಕೊಳ್ಳಬೇಕು?
ಕೆಲವು ವೈದ್ಯರು ದಿನಕ್ಕೆ ಎರಡು ಬಾರಿಗಿಂತ ಹೆಚ್ಚು ಸ್ಟೀಮ್ ತೆಗೆದುಕೊಳ್ಳಬಾರದು ಎಂದು ಹೇಳುತ್ತಾರೆ, ಏಕೆಂದರೆ ಹೆಚ್ಚು ಸ್ಟೀಮ್ ನಿಮ್ಮ ಶ್ವಾಸಕೋಶಕ್ಕೆ ಹಾನಿಯನ್ನುಂಟುಮಾಡುತ್ತದೆ. ಸ್ಟೀಮ್ ತೆಗೆದುಕೊಳ್ಳಲು ಸ್ಟ್ರೀಮರ್ ಹೊಂದಿರುವ ಅಗತ್ಯವಿಲ್ಲ. ಮನೆಯಲ್ಲಿಯೇ ಇರುವ ಅಗಲವಾದ ಪಾತ್ರೆಯಲ್ಲಿ ಬಿಸಿ ನೀರನ್ನು ಹಾಕಿ ಸ್ಟೀಮ್ ಪಡೆಯಬಹುದು.


(ಗಮನಿಸಿ: ಯಾವುದೇ ಪರಿಹಾರವನ್ನು ತೆಗೆದುಕೊಳ್ಳುವ ಮೊದಲು ಯಾವಾಗಲೂ ತಜ್ಞರನ್ನು ಸಂಪರ್ಕಿಸಿ. ಜೀ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.